ಪಿಯು ಫಲಿತಾಂಶ: 24ನೇ ಸ್ಥಾನಕ್ಕೆ ಕುಸಿದ ರಾಮನಗರ

ಶುಕ್ರವಾರ, ಏಪ್ರಿಲ್ 26, 2019
21 °C

ಪಿಯು ಫಲಿತಾಂಶ: 24ನೇ ಸ್ಥಾನಕ್ಕೆ ಕುಸಿದ ರಾಮನಗರ

Published:
Updated:

ರಾಮನಗರ: ಈ ಬಾರಿಯ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಜಿಲ್ಲೆಯು ಶೇ 62.08 ಫಲಿತಾಂಶ ಪಡೆದಿದ್ದು, 24ನೇ ಸ್ಥಾನಕ್ಕೆ ಕುಸಿದಿದೆ. 

ಜಿಲ್ಲೆಯು ಕಳೆದ ವರ್ಷ 18ನೇ ಸ್ಥಾನದಲ್ಲಿ ಇತ್ತು. ‘ಫಲಿತಾಂಶ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜಿಲ್ಲೆಯು ಮೊದಲ ಹದಿನೈದರ ಒಳಗೆ ಬರುವ ನಿರೀಕ್ಷೆ ಇತ್ತು. ಆದರೆ ಆರು ಸ್ಥಾನ ಕುಸಿತ ಕಂಡಿದೆ’ ಎಂದು ಡಿಡಿಪಿಯು ಸವಿತಾ ತಿಳಿಸಿದರು.

ಯಥಾಸ್ಥಿತಿ ಕಾಯ್ದುಕೊಂಡ ಕೊಡಗು 
ಮಡಿಕೇರಿ:
ಪಿಯುಸಿ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ಈ ಬಾರಿಯೂ ಮೂರನೇ ಸ್ಥಾನವನ್ನೇ ಕಾಯ್ದುಕೊಂಡಿದೆ. ಕಳೆದ ವರ್ಷವೂ ಇದೇ ಸ್ಥಾನದಲ್ಲಿತ್ತು. ಈ ಬಾರಿ ಶೇ 83.31 ತೇರ್ಗಡೆ ಪ್ರಮಾಣವಿದೆ. ಕಳೆದ ಸಾಲಿನಲ್ಲಿ ಜಿಲ್ಲೆಗೆ ಶೇ 83.94 ಫಲಿತಾಂಶ ಬಂದಿತ್ತು.

ಕಾರವಾರ: ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಶೇ 79.89ರಷ್ಟು ಫಲಿತಾಂಶ ಲಭಿಸಿದೆ. ಈ ಮೂಲಕ ಕಳೆದ ವರ್ಷದ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಚಿಕ್ಕಮಗಳೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆ ಶೇ 76.42 ದಾಖಲಿಸಿದ್ದು ರಾಜ್ಯದಲ್ಲಿ 5ನೇ ಸ್ಥಾನ ಗಳಿಸಿದೆ.

ಚಾಮರಾಜನಗರ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಡಿ ಜಿಲ್ಲೆ ಚಾಮರಾಜನಗರ 12 ಸ್ಥಾನಗಳಿಸಿದೆ. ಶೇ 72.67 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಜಿಲ್ಲೆ 6ನೇ ಸ್ಥಾನಗಳಿಸಿತ್ತು.

ಬಾಗಲಕೋಟೆ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ 74.26ರಷ್ಟು ಫಲಿತಾಂಶದೊಂದಿಗೆ ಈ ಬಾರಿ ಏಳನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ಶೇ 70.2ರಷ್ಟು ಫಲಿತಾಂಶದೊಂದಿಗೆ 12ನೇ ಸ್ಥಾನ ಪಡೆದಿತ್ತು. ಈ ಬಾರಿ ಐದು ಸ್ಥಾನ ಬಡ್ತಿ ಪಡೆದು ಮೊದಲ 10 ಸ್ಥಾನಗಳಲ್ಲಿ ಅವಕಾಶ ಪಡೆದ ಶ್ರೇಯ ತನ್ನದಾಗಿಸಿಕೊಂಡಿದೆ.

ಗದಗ: ದ್ವಿತೀಯ ಪಿಯು ಫಲಿತಾಂಶದಲ್ಲಿ ಗದಗ ಜಿಲ್ಲೆ ಈ ಬಾರಿ  ಸ್ವಲ್ಪ ಸುಧಾರಿಸಿಕೊಂಡಿದ್ದು 26ನೇ ಸ್ಥಾನ ಪಡೆದಿದೆ. 2018ನೇ ಸಾಲಿನಲ್ಲಿ ಶೇ 67.52 ಫಲಿತಾಂಶದೊಂದಿಗೆ 32ನೇ ಸ್ಥಾನ ಪಡೆದಿತ್ತು. ಈ ಬಾರಿ 7 ಸ್ಥಾನಗಳು ಏರಿಕೆಯಾಗಿವೆ. ಆದರೆ, ಶೇಕಡಾವಾರು ಫಲಿತಾಂಶ ಕಳೆದ ಸಾಲಿನಿಂದ  ಶೇ 67.52ರಿಂದ ಶೇ 57.76ಕ್ಕೆ ಕುಸಿತ ಕಂಡಿದೆ.

ಮೈಸೂರು: ಮೈಸೂರಿಗೆ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ 15ನೇ ಸ್ಥಾನ ಲಭ್ಯವಾಗಿದೆ. 2017-18 ನೇ ಸಾಲಿನಲ್ಲಿ 17 ನೇ ಸ್ಥಾನ ಲಭ್ಯವಾಗಿತ್ತು. ಮೈಸೂರಿಗೆ ಶೇ 68.55 ಫಲಿತಾಂಶ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !