ಶುಕ್ರವಾರ, ನವೆಂಬರ್ 15, 2019
22 °C

ರಾಮನಗರ ಸುತ್ತಮುತ್ತ ಜೋರು ಮಳೆ

Published:
Updated:

ರಾಮನಗರ: ನಗರ ಹಾಗೂ ಸುತ್ತಮುತ್ತ ಸೋಮವಾರ ಸಂಜೆ ಜೋರು ಮಳೆಯಾಯಿತು.

ಸಂಜೆ ಐದರ ಸುಮಾರಿಗೆ ಮಳೆ ಆರಂಭಗೊಂಡಿದ್ದು, ಒಂದು ಗಂಟೆ ಕಾಲ ಹನಿಯಿತು. ರಾತ್ರಿ ಏಳರ ನಂತರ ಮತ್ತೊಮ್ಮೆ ಜೋರು ಮಳೆಯಾಯಿತು. ಗುಡುಗು–ಸಿಡಿಲಿನ ಅಬ್ಬರ ಇರದೇ ಹೋದರೂ ವರ್ಷಧಾರೆಯ ರಭಸ ಹೆಚ್ಚಾಗಿಯೇ ಇತ್ತು.

ಜೂನ್‌–ಜುಲೈನಲ್ಲಿ ಮಳೆಯ ಕೊರತೆ ಅನುಭವಿಸಿದ್ದ ಜಿಲ್ಲೆಗೆ ಸದ್ಯದ ಮಳೆ ಕೊಂಚ ನೆಮ್ಮದಿ ತಂದಿದೆ. ಕೃಷಿ ಚಟುವಟಿಕೆಗಳೂ ಚೇತರಿಕೆ ಕಂಡಿವೆ. ಇನ್ನೆರಡು ಹದ ಮಳೆ ಬಿದ್ದಲ್ಲಿ ರಾಗಿ ಫಸಲು ರೈತರ ಕೈ ಸೇರುವುದು ನಿಶ್ಚಿತವಾಗುತ್ತದೆ.

ಪ್ರತಿಕ್ರಿಯಿಸಿ (+)