ರಾಮನಗರ: ಕೇಂದ್ರ ಸರ್ಕಾರವು ಹಿಂದೆ ನೀಡಿದ್ದ ಭರವಸೆಯಂತೆ ಮೂರು ಕೃಷಿ ಕಾಯ್ದೆಗಳ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೆಹಲಿಯ ಶಂಭು ಗಡಿಯಲ್ಲಿ ರೈತ ನಾಯಕ ಜಗತ್ಸಿಂಗ್ ದಲೈವಾಲಾ ಅವರು ನಡೆಸುತ್ತಿರುವ ಉಪವಾಸ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಈ ಕುರಿತು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಹರ್ಷವರ್ಧನ್ ಅವರ ಮೂಲಕ, ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಕಿಸಾನ್ ಮೋರ್ಚಾ ವತಿಯಿಂದ 3 ಕೃಷಿ ಕಾಯ್ದೆಗಳ ರದ್ದು, ಬೆಂಬಲ ಬೆಲೆ ಕಾನೂನು ಮಾನ್ಯತೆ, ವಿದ್ಯುತ್ಶಕ್ತಿ ಖಾಸಗೀಕರಣ ವಿರೋಧಿಸಿ ದೆಹಲಿ ಗಡಿಯಲ್ಲಿ 13 ತಿಂಗಳು ಧೀರ್ಘ ಹೋರಾಟ ನಡೆದಿತ್ತು. ಅದರಲ್ಲಿ 750 ರೈತರು ಮೃತಪಟ್ಟಿದ್ದರು. ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯುವುದು ಇತರ ಬೇಡಿಕೆಗಳನ್ನು ಈಡೇರಿಸುವ ಲಿಖಿತ ಭರವಸೆ ನೀಡಿತ್ತು ಎಂದು ಮುಖಂಡರು ಹೇಳಿದರು.

ಸರ್ಕಾರ ಭರವಸೆ ನೀಡಿ 2 ವರ್ಷವಾದರೂ ಭರವಸೆ ಈಡೇರಿಸಲಿಲ್ಲ. ಹಾಗಾಗಿ, ರೈತರು ಮತ್ತೆ ಹೋರಾಟಕ್ಕೆ ಧುಮುಕಿದ್ದು, 8 ತಿಂಗಳಿಂದ ಶಂಭು ಗಡಿಯಲ್ಲಿ ಹೋರಾಟ ನಡೆಯುತ್ತಿದೆ. ಜಗತ್ಸಿಂಗ್ ಅವರು 38 ದಿನಗಳಿಂದ ಉಪವಾಸ ಧರಣಿ ನಡೆಸುತ್ತಿದ್ದು, ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ಸಹ ಬೇಡಿಕೆಯನ್ನು ಆಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಆದರೂ, ಸರ್ಕಾರ ಪೂರಕವಾಗಿ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಂಭು ಗಡಿಯ ಹೋರಾಟವು ಕೇವಲ ಅಲ್ಲಿಗಷ್ಟೇ ಸೀಮಿತವಾಗಿಲ್ಲ. ಅದು ಇಡೀ ದೇಶದ ರೈತರು ಹಾಗೂ ಸಂಘಟನೆಗಳ ಒತ್ತಾಯವೂ ಆಗಿದೆ. ಹಾಗಾಗಿ, ನ್ಯಾಯಯುತವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾದ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಅದರೊಂದಿಗೆ ಜಗತ್ಸಿಂಗ್ ಅವರ ಉಪವಾಸಕ್ಕೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕಟ್ಟೆ ಕೃಷ್ಣಪ್ಪ, ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್, ಹಿರಿಯ ಮುಖಂಡ ರಾಜೇಗೌಡ, ಕನಕಪುರ ತಾಲ್ಲೂಕು ಅಧ್ಯಕ್ಷ ಕೆಬ್ಬಳ್ಳಿ ಶಿವರಾಜ್, ಮುಖಂಡರಾದ ಪ್ಯಾರು ಚಿಕ್ಕಣ್ಣ, ಇತಿಯಾಜ್ ಪರ್ವೀಜ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.