ಕನಕಪುರ (ರಾಮನಗರ): ಅಪಘಾತದ ಹಾಟ್ಸ್ಪಾಟ್ ಆಗಿರುವ ತಾಲ್ಲೂಕಿನ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ–948ರ ತುಂಗಣಿ ಬೈಪಾಸ್ ವೃತ್ತದ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ‘ರಸ್ತೆ ಉಬ್ಬು: ಅಪಘಾತದ ಹಾಟ್ಸ್ಪಾಟ್’ ವಿಶೇಷ ವರದಿಯು ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದಿದೆ.

ವರದಿ ಗಮನಿಸಿರುವ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು, ವಾಹನ ಸವಾರರ ಜೀವಕ್ಕೆ ಕುತ್ತಾಗಿರುವ ಬೈಪಾಸ್ನಲ್ಲಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದು ಸೂಚಿಸಿದ್ದಾರೆ. ಅದರೊಂದಿಗ ಫೆ. 19ರಂದು ಪ್ರಕಟಗೊಂಡಿದ್ದ ವಿಶೇಷ ವರದಿ ತುಣುಕು ಲಗತ್ತಿಸಿದ್ದಾರೆ.

ಅಧಿಕಾರಿಯ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರ, ಸ್ಥಳದಲ್ಲಿ ರಸ್ತೆ ಸುರಕ್ಷತೆ ಕ್ರಮದ ಜೊತೆಗೆ ಶಾಶ್ವತ ಪರಿಹಾರವಾಗಿ ಅಂಡರ್ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದೆ.

ಅಪಘಾತ ಹೆಚ್ಚಳ: ಮುಂಚೆ ಕನಕಪುರ ನಗರ ಮಾರ್ಗವಾಗಿ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಗೆ ನಗರದ ಹೊರವಲಯದ ತುಂಗಣಿ ಬಳಿ ಬೈಪಾಸ್ ನಿರ್ಮಿಸಲಾಯಿತು. ಹೆದ್ದಾರಿಯ ಎರಡೂ ಕಡೆಯಿಂದ ವಾಹನಗಳ ವೇಗ ನಿಯಂತ್ರಣಕ್ಕೆ ಬೈಪಾಸ್ ಬಳಿ ಹಂಪ್ಸ್ ನಿರ್ಮಿಸಲಾಗಿತ್ತು. ಆದರೆ, ನಗರ ಮತ್ತು ಹೆದ್ದಾರಿ ಸಂಧಿಸುವ ಈ ಜಾಗದಲ್ಲಿ ಅಪಘಾತಗಳು ಹೆಚ್ಚಾಗಿದ್ದವು.

ಸ್ಥಳದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್ನಿಂದಾಗಿ, ಕನಕಪುರ ಕಡೆಯಿಂದ ಮತ್ತು ಹೆದ್ದಾರಿ ಮಾರ್ಗವಾಗಿ ಬೆಂಗಳೂರು ಅಥವಾ ದಿಂಡಿಗಲ್ ಕಡೆಗೆ ಸಾಗುವ ವಾಹನಗಳ ನಡುವೆ ಅಪಘಾತ ಸಂಭವಿಸುತ್ತಿತ್ತು. ಇದರಿಂದಾಗಿ ಕೆಲವರು ಜೀವ ಕಳೆದುಕೊಂಡಿದ್ದರೆ, ಉಳಿದವರು ಗಾಯಗೊಂಡಿದ್ದರು. ಹಂಪ್ಸ್ ಕುರಿತು ವಾಹನ ಸವಾರರಿಗೆ ಮುನ್ಸೂಚನೆ ನೀಡುವ ಸೂಚನಾ ಫಲಕ, ಸೂಕ್ತ ದೀಪದ ವ್ಯವಸ್ಥೆ ಇಲ್ಲದಿರುವ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು.

ಆರ್.ಒ.ಗೆ ಪತ್ರ: ವರದಿ ಗಮನಿಸಿದ್ದ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ವಲಯದ ಪ್ರಾದೇಶಿಕ ಅಧಿಕಾರಿಗೆ ಏ. 18ರಂದೇ ಪತ್ರ ಬರೆದು, ಸ್ಥಳದಲ್ಲಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಅಧಿಕಾರಿ ಪತ್ರಕ್ಕೆ ಮೇ 13ರಂದು ಪ್ರತಿಕ್ರಿಯಿಸಿರುವ ಎನ್ಎಚ್ಎಐ ಪ್ರಾದೇಶಿಕ ಅಧಿಕಾರಿ, ‘ತಮ್ಮ ಪತ್ರದ ಬೆನ್ನಲ್ಲೇ, ಎಂಜಿನಿಯರ್ ಮೂಲಕ ಸ್ಥಳ ಪರಿಶೀಲನೆ ನಡೆಸಲಾಗಿದೆ. ವಾಹನಗಳ ವೇಗ ನಿಯಂತ್ರಣಕ್ಕಾಗಿ ಕನಕಪುರ ಠಾಣೆಯ ನಿರ್ದೇಶನದ ಮೇರೆಗೆ ಹಂಪ್ಸ್ ಮತ್ತು ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಇದರಿಂದಾಗಿ, ಅಪಘಾತಗಳ ಸಂಖ್ಯೆ ತಗ್ಗಿದೆ ಎನ್ನಲಾಗಿದೆ. ಮತ್ತಷ್ಟು ಕ್ರಮದ ಕುರಿತು ಸ್ಥಳೀಯ ಪೊಲೀಸರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಕನಕಪುರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ಗೂ ಪತ್ರ ಬರೆದಿರುವ ಪ್ರಾದೇಶಿಕ ಅಧಿಕಾರಿ, ರಸ್ತೆ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತುಂಗಣಿ ಬೈಪಾಸ್ನಲ್ಲಿ ಹಂಪ್ಸ್ ತೆರವು ಸೇರಿದಂತೆ ಇತರ ಅಗತ್ಯ ಕ್ರಮಕ್ಕೆ ತಮ್ಮಿಂದ ನಿರ್ದೇಶನಗಳನ್ನು ಕೋರಲಾಗಿದೆ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-14-788685991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.