ಹಾರೋಹಳ್ಳಿ: ಅನಾರೋಗ್ಯ ಸಂಬಂಧಿಯನ್ನು ನೋಡಲು ಬಂದ ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕೆ ಬಂದ ಮತ್ತೊಬ್ಬ ಸಂಬಂಧಿ ಅದೇ ಜಾಗದಲ್ಲಿ, ಅದೇ ಸಮಯದಲ್ಲಿ ಮತ್ತೊಂದು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣ ಹೊಸಗಬ್ಬಾಡಿ ಗ್ರಾಮದ ಬಳಿ ಸಂಭವಿಸಿದೆ.ಮೃತರು ಬೆಂಗಳೂರಿನ ನಿವಾಸಿಗಳು. ಮೊದಲ ಘಟನೆಯಲ್ಲಿ ನಾಗರಾಜು (59) ಮೃತಪಟ್ಟಿದ್ದಾರೆ. ಅವರು ಜಯನಗರದ ಎಚ್.ಬಿ.ಸಿ.ಎಸ್ ಲೇಔಟ್ ನಿವಾಸಿ. ಎರಡನೇ ಘಟನೆಯಲ್ಲಿ ನರಸಿಂಹಯ್ಯ (65) ಮೃತಪಟ್ಟಿದ್ದಾರೆ. ಅವರು ಲಗ್ಗೆರೆ ಪ್ರೀತಿ ನಗರ ನಿವಾಸಿ. ನರಸಿಂಹಯ್ಯ, ನಾಗರಾಜು ಅವರ ಸಂಬಂಧಿಯಾಗಿದ್ದು, ಅವರ ಅಂತ್ಯಕ್ರಿಯೆಗೆಂದೇ ಬಂದಿದ್ದರು.

ಮೊದಲ ಅಪಘಾತ (ಮೇ 1): ನಾಗರಾಜು ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಮಾವ ಬೈರೇಗೌಡರನ್ನು ನೋಡಲು ಹೊಸಗಬ್ಬಾಡಿಗೆ ಬಂದಿದ್ದರು. ಅವರು ಬೆಂಗಳೂರಿಂದ ಬಸ್ಸಿನಲ್ಲಿ ಬಂದಿದ್ದರು. ಮಧ್ಯಾಹ್ನ ಸುಮಾರು 1ಗಂಟೆಗೆ ಬೆಂಗಳೂರು-ಕನಕಪುರ ಮುಖ್ಯ ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದರು. ಆಗ ಬೆಂಗಳೂರು ಕಡೆಯಿಂದ ಕನಕಪುರ ಕಡೆಗೆ ಹೋಗುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ತಲೆ, ಮುಖ ಮತ್ತು ದೇಹಕ್ಕೆ ತೀವ್ರ ಗಾಯವಾಗಿ ನಾಗರಾಜು ಸ್ಥಳದಲ್ಲೇ ಮೃತಪಟ್ಟರು.

ಎರಡನೇ ಅಪಘಾತ (ಮೇ 2): ನಾಗರಾಜು ಅವರ ಅಂತ್ಯಕ್ರಿಯೆ ಮೇ 2ರಂದು ಅದೇ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ಏರ್ಪಡಿಸಲಾಗಿತ್ತು. ಅವರ ಅಂತಿಮ ದರ್ಶನ ಪಡೆಯಲು ಸಂಬಂಧಿ ನರಸಿಂಹಯ್ಯ, ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಅಂತ್ಯಸಂಸ್ಕಾರದ ಸ್ಥಳ ತಿಳಿಯಲು ಅವರು ವಾಹನದಿಂದ ಇಳಿದು ಮಧ್ಯಾಹ್ನ 1ಗಂಟೆ ಸಮಯದಲ್ಲಿ ರಸ್ತೆ ದಾಟಲು ಹೊರಟಿದ್ದರು. ನಾಗರಾಜು ಅಪಘಾತದಲ್ಲಿ ಮೃತಪಟ್ಟ ಅದೇ ಜಾಗದಲ್ಲೇ, ಅದೇ ಸಮಯಕ್ಕೆ ಮತ್ತೊಂದು ಕಾರು ನರಸಿಂಹಯ್ಯ ಅವರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟರು. ಈ ಎರಡು ಪ್ರಕರಣಗಳ ಬಗ್ಗೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-14-287375358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.