ರಾಮನಗರ: ಏಪ್ರಿಲ್ 25ರೊಳಗೆ ಅರ್ಕಾವತಿ ಪಾರ್ಕ್ ನಿರ್ಮಾಣ ಯೋಜನೆ ಜಾಗವನ್ನು ಭೂಸ್ವಾಧೀನ ಅಧಿಸೂಚನೆಯಿಂದ ಶಾಸಕರು ಕೈಬಿಡಿಸಬೇಕು ಎಂದು ಜಿಲ್ಲಾ ದಲಿತ ಮುಖಂಡ ಶಿವಕುಮಾರಸ್ವಾಮಿ ಆಗ್ರಹಿಸಿದರು.

ರಾಮನಗರದಲ್ಲಿ ಸೋಮವಾರ ಜನ ಜಾಗೃತಿ ವೇದಿಕೆ ಜತೆಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನಗರದ ನಾಗರಿಕರು, ರಾಘವೇಂದ್ರ ಕಾಲೊನಿ ಮತ್ತು ಅರ್ಕೇಶ್ವರ, ಪಿಎಸ್ವಿ ದರ್ಗಾ ದೇವಾಲಯಗಳ ಭಕ್ತವೃಂದ ಅರ್ಕಾವತಿ ನದಿ ಪಾತ್ರದಲ್ಲಿ ಉದ್ಯಾನ ನಿರ್ಮಾಣಕ್ಕಾಗಿ ಭೂಸ್ವಾಧೀನ ಕೈಬಿಡಬೇಕೆಂದು ಒತ್ತಾಯಿಸಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅರ್ಕೇಶ್ವರಸ್ವಾಮಿ ದೇವಾಲಯ, ಪೀರನ್ ಷಾ ವಲಿ ದರ್ಗಾ, ಶನೆಶ್ವರ ದೇವಾಲಯ, ರಾಮನಗರದ ಭಕ್ತಿಯ ಸಂಕೇತ. ಇಂತಹ ಐತಿಹಾಸಿಕ ಹಿನ್ನಲೆಯುಳ್ಳ ದೇವಾಲಯಗಳ ಭೂಸ್ವಾಧೀನ ಬೇಡವಾಗಿದೆ. ಆದರೂ, ಇದರ ಜೊತೆಗೆ ರಾಘವೇಂದ್ರ ಕಾಲೊನಿ ವಸತಿ ಪ್ರದೇಶವನ್ನು ಅರ್ಕಾವತಿ ಉದ್ಯಾನ ಯೋಜನೆಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಣೆಯಾಗಿದೆ.

ಶಾಸಕರು ಅಧಿಸೂಚನೆಯಿಂದ ಕೈ ಬಿಡಲಾಗುವುದು ಎಂದು ಬರೀ ಬಾಯಿ ಮಾತಿನಲ್ಲಿ ಭರವಸೆ ನೀಡುವುದು ಬೇಡ. 25ರೊಳಗೆ ಕೈಬಿಡಿಸುವ ಕೆಲಸ ಆಗಬೇಕಿದೆ. ಅರ್ಕಾವತಿ ಪಾರ್ಕ್ ನಿರ್ಮಾಣ ಯೋಜನೆ ಅಂತಿಮ ಭೂಸ್ವಾಧೀನ ಅಧಿಸೂಚನೆಯಲ್ಲಿ ಅಕೇಶ್ವರಸ್ವಾಮಿ ದೇವಾಲಯ, ಪೀರಮ್ಶಾಲಿ ದರ್ಗಾ ಹಾಗೂ ರಾಘವೇಂದ್ರ ಕಾಲೊನಿಯನ್ನು ಕೈಬಿಡಲೇಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ನಿವಾಸಿಗಳು, ದೇವಾಲಯಗಳ ಭಕ್ತರ ಮನವಿ ಮೇರೆಗೆ ನಗರಸಭೆಯಲ್ಲಿ ವಿಶೇಷ ಸಭೆ ಆಯೋಜನೆ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲ ನಗರಸಭೆ ಸದಸ್ಯರು, ಪುರಾತನ ಧಾರ್ಮಿಕ ಸ್ಥಳಗಳು ಹಾಗೂ ವಸತಿ ಪ್ರದೇಶಗಳನ್ನು ಉಳಿಸಿಕೊಳ್ಳಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿಗೆ ನಿಯೋಗ ತೆರಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಪೀರನ್ ಷಾ ವಲಿ ದರ್ಗಾ ನಿರ್ವಹಣಾ ಸಮಿತಿ ಕಾರ್ಯದರ್ಶಿ ಸೈಯದ್ ಲಿಯಾಖತ್ ಆಲಿ ಮಾತನಾಡಿ, ಅರ್ಕಾವತಿ ರಿವರ್ ಫ್ರಂಟ್ ಡೆವೆಲಪ್ಮೆಂಟ್ ಯೋಜನೆ ವಿಚಾರದಲ್ಲಿ ದರ್ಗಾದ ಸ್ಥಳ ಸ್ಥಾಧೀನಕ್ಕೂ ನೋಟಿಸ್ ಜಾರಿಯಾಗಿದೆ. ಈ ವಿಚಾರದಲ್ಲಿ ದರ್ಗಾದ ಗುರು, ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ದರ್ಗಾ, ದೇವಾಲಯ, ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಹೊರತುಪಡಿಸಿ ಅಧಿಸೂಚನೆ ಜಾರಿಯಾಗಲಿ. ಶಾಸಕರು ಈ ವಿಚಾರದಲ್ಲಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ಮುಖಂಡ ಅಮ್ಜದ್ ಸಾಹುಕಾರ್ ಮಾತನಾಡಿ, ಧಾರ್ಮಿಕ ಸ್ಥಳಗಳಿಗೆ ಧಕ್ಕೆಯಾದರೆ ಭಾವನೆಗಳಿಗೆ ನೋವಾಗುತ್ತದೆ. ಎಲ್ಲ ಧರ್ಮಿಯರು ಸೌಹಾರ್ಧತೆಯಿಂದ ಇದ್ದೇವೆ. ಕೂಡಲೇ ಜಾಗದ ಅಧಿಸೂಚನೆ ಕೈಬಿಡಬೇಕು ಎಂದರು.

ರಾಘವೇಂದ್ರ ಕಾಲೋನಿ ನಿವಾಸಿ ಪವನ್ ಕುಮಾರ್ ಮಾತನಾಡಿ, 45 ವರ್ಷದಿಂದ ತಾವೆಲ್ಲ ಕಾಲೊನಿಯಲ್ಲಿ ವಾಸ ಮಾಡುತ್ತಿದ್ದೇವೆ. ನಗರಸಭೆಗೆ ಕಂದಾಯವನ್ನು ಪಾವತಿಸುತ್ತಿದ್ದೇವೆ. ಈಗ ಸ್ವಾಧೀನ ಎಂದು ನೋಟಿಸ್ ಬಂದಿದೆ. ನಮ್ಮ ಸಮಾಧಿ ಮೇಲೆ ಪಾರ್ಕ್ ನಿರ್ಮಾಣ ಬೇಡ ಎಂದು ನೋವು ತೋಡಿಕೊಂಡರು.

ಕಾಲೊನಿ ಮತ್ತೊಬ್ಬ ನಿವಾಸಿ ಜಿ.ಕೆ.ಮಂಜುನಾಥ್ ಮಾತನಾಡಿ, ಹಲವು ದಶಕಗಳಿಂದ ಎಲ್ಲರೂ ನೆಮ್ಮದಿಯಿಂದ ವಾಸ ಮಾಡುತ್ತಿದ್ದೇವೆ. ಯೋಜನೆಯಿಂದಾಗಿ ನೆಮ್ಮದಿ ಹಾಳು ಮಾಡಬೇಡಿ. ಭೂಸ್ವಾಧೀನದ ಅಧಿಸೂಚನೆ ಹೊರೆಡಿಸುವ ಮುನ್ನ ಅಧಿಕಾರಿಗಳು ಜನಾಭಿಪ್ರಾಯ ಸಂಗ್ರಹಿಸಿಲ್ಲ. ಸ್ಥಳ ಪರಿಶೀಲನೆ ಮಾಡದೆಯೇ ತಮ್ಮ ವಾಸ ಸ್ಥಳವನ್ನು ಎನ್.ಎ.ಖರಾಬು ಅಂತ ಗುರುತಿಸಿದ್ದಾರೆ. ಇನ್ನೊಂದೆಡೆ ಶಾಸಕರು ಯಾರಿಗೂ ನೋವು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತು ಉಳಿಸಿಕೊಳ್ಳಬೇಕು ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಆರಿಫ್, ಸದಸ್ಯರಾದ ಅಕ್ಲಿಂ, ಗ್ಯಾಬ್ರಿಲ್, ನರಸಿಂಹ, ಸೋಮಶೇಖರ್ ಮಣಿ, ನಾಗಮ್ಮ, ಮುಖಂಡರರಾದ ಸೋಮಶೇಖರ್ರಾವ್, ವೆಂಕಟೇಶ್, ಗೂಳಿಗೌಡ, ಓಬಿಸಿ ಕಮಿಟಿ ಜಿಲ್ಲಾ ಕಾರ್ಯದರ್ಶಿ ನಾರಾಯಣ್, ಪುನೀತ್, ವೆಂಕಟೇಶ್, ಹರೀಶ್ಬಾಲು, ಪ್ರವೀಣ್, ಸಾಗರ್, ಕಿರಣ್, ಶ್ರೀನಿವಾಸ್, ನಾರಾಯಣ್, ಮಂಟೇದಯ್ಯ, ವಿಜಿಯಮ್ಮ, ಮಂಜುನಾಥ್, ಲಿಂಗರಾಜು, ಸಿದ್ದರಾಜು, ಉಮಾಶಂಕರ್ ಶಾಸ್ತ್ರಿ, ದಿನೇಶ್, ಗಿರೀಶ್ಗೌಡ, ಹರೀಶ್, ಚಂದ್ರಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-14-1873864391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.