ರಾಮನಗರ: ಬೆಟ್ಟಗುಡ್ಡ, ನದಿ ಹಾಗೂ ಕೆರೆಗಳಿಂದ ಆವೃತ್ತವಾಗಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಒಂದೆಡೆ ಕಾಡಾನೆ ಹಾವಳಿ ವಿಪರೀತವಾಗಿದ್ದರೆ, ಮತ್ತೊಂದೆಡೆ ಕರಡಿ ಮತ್ತು ಚಿರತೆಗಳ ಕಾಟ ಜನರ ನಿದ್ದೆಗೆಡಿಸಿದೆ. ಕಳೆದ 5 ವರ್ಷದಲ್ಲಿ ಜಿಲ್ಲೆಯಲ್ಲಿ 38 ಜನರ ಮೇಲೆ ಕರಡಿ ದಾಳಿ ನಡೆಸಿದೆ. ಅದೇ ರೀತಿ 18 ಮಂದಿ ಚಿರತೆ ದಾಳಿಗೊಳಗಾಗಿದ್ದಾರೆ.

ಜಿಲ್ಲೆಯು ವನ್ಯಜೀವಿಗಳು ಮತ್ತು ಮಾನವ ಸಂಘರ್ಷಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಸಾಕ್ಷಿಯಾಗುತ್ತಲೇ ಇದೆ. ಜೊತೆಗೆ ರೈತರ ಒಡನಾಡಿಗಳಾದ ಜಾನುವಾರುಗಳು ಹಾಗೂ ನಾಯಿಗಳೇ ಚಿರತೆಗಳಿಗೆ ಹೆಚ್ಚು ಬಲಿಯಾಗುತ್ತಿವೆ. ಮತ್ತೊಂದೆಡೆಗೆ ಆಹಾರ ಅರಸಿ ಜಮೀನಿಗೆ ಬರುವ ಕರಡಿಗಳು, ತಮ್ಮ ಕಣ್ಣಿಗೆ ಬೀಳುವ ರೈತರ ಮೇಲೆರಗಿ ಗಾಯಗೊಳಿಸುತ್ತಿವೆ.

ಆವಾಸಸ್ಥಾನ: ಜಿಲ್ಲೆಯು ಕರಡಿ ಮತ್ತು ಚಿರತೆಗಳಿಗೆ ಆವಾಸಸ್ಥಾನವಾಗಿದೆ. ರಾಮದೇವರ ಬೆಟ್ಟ, ಹಂದಿಗುಂದಿ ಬೆಟ್ಟ, ಸಾವನದುರ್ಗ ಬೆಟ್ಟ, ಕಬ್ಬಾಳು ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಕೂಟಗಲ್ ಬೆಟ್ಟ, ಕೂನಗಲ್ ಬೆಟ್ಟ, ಜಲಸಿದ್ದೇಶ್ವರ ಬೆಟ್ಟ ಸೇರಿದಂತೆ ಜಿಲ್ಲೆಯಲ್ಲಿರುವ ಬಹುತೇಕ ಬೆಟ್ಟಗುಡ್ಡಗಳಲ್ಲಿ ಈ ಪ್ರಾಣಿಗಳು ವಾಸಿಸುತ್ತಿವೆ.

‘ಬಹುತೇಕ ಬೆಟ್ಟಗಳ ತಪ್ಪಲಿನಲ್ಲೇ ಊರುಗಳು ನೆಲೆಗೊಂಡಿವೆ. ಊರಾಚೆ ಕಾಡಿನಂತಿದ್ದ ಜಮೀನುಗಳು ಇತ್ತೀಚಿನ ವರ್ಷಗಳಲ್ಲಿ ತೋಟಗಳಾಗಿ ಬದಲಾಗಿವೆ. ಇದರಿಂದಾಗಿ ಚಿರತೆ ಮತ್ತು ಕರಡಿಗಳು ಕಾಡಂಚಿನ ಜಮೀನಿಗೆ ಬರುತ್ತಿವೆ. ಈ ವೇಳೆ, ಜನರಿಗೂ ದರ್ಶನ ನೀಡುವ ಮೂಲಕ ಆತಂಕ ಸೃಷ್ಟಿಸುತ್ತಿವೆ’ ಎಂದು ಡಿಸಿಎಫ್ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿರತೆ ದಾಳಿಯೇ ಹೆಚ್ಚು: ‘ಜಿಲ್ಲೆಯಲ್ಲಿ ಕರಡಿಗಿಂತ ಚಿರತೆ ದಾಳಿಯೇ ಹೆಚ್ಚು ವರದಿಯಾಗುತ್ತಿವೆ. ಚಿರತೆಗಳು ವರ್ಷದಲ್ಲಿ ಎರಡು ಸಲ ಮರಿ ಹಾಕುತ್ತವೆ. ಕರಡಿ ವರ್ಷಕ್ಕೊಮ್ಮೆ ಮರಿ ಹಾಕುತ್ತವೆ. ಕಾಡಾನೆಗಳಂತೆ ಚಿರತೆ ಮತ್ತು ಕರಡಿಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಆಹಾರ ಅರಸಿ ಅವು ಯಾವಾಗ? ಎಲ್ಲಿಗೆ? ಎಷ್ಟೊತ್ತಿಗೆ ಬರುತ್ತವೆ ಎಂಬುದನ್ನು ಊಹಿಸುವುದೇ ಸವಾಲಾಗಿದೆ. ಜನರ ಕಣ್ಣಿಗೆ ಬಿದ್ದಾಗಲೇ ಬಂದಿರುವುದು ಗೊತ್ತಾಗುತ್ತದೆ’ ಎಂದು ಹೇಳಿದರು.

‘ಕರಡಿ ದಾಳಿಗಳು ಅಪರೂಪಕ್ಕೊಮ್ಮೆ ಅದರಲ್ಲೂ ಆಕಸ್ಮಿಕವಾಗಿ ನಡೆಯುತ್ತವೆ. ಮಾವು, ಹಲಸು ಸೇರಿದಂತೆ ಹಣ್ಣುಗಳನ್ನು ತಿನ್ನಲು ಕರಡಿಗಳು ಜಮೀನಿಗೆ ಆಗಾಗ ಬರುತ್ತವೆ. ಈ ವೇಳೆ, ತಮ್ಮ ಕಣ್ಣಿಗೆ ಬೀಳುವ ಜನರನ್ನು ಕಂಡು ಗಾಬರಿಗೊಳ್ಳುವ ಕರಡಿಗಳು, ಕೂಡಲೇ ಮನುಷ್ಯರ ಮೇಲೆರಗಿ ದಾಳಿ ಮಾಡುತ್ತವೆ’ ಎಂದರು.

ಒಂದೂವರೆ ತಿಂಗಳ ಹಿಂದೆಯಷ್ಟೇ ಚನ್ನಪಟ್ಟಣ ತಾಲ್ಲೂಕಿನ ಬೈರಶೆಟ್ಟಿಹಳ್ಳಿಯ ದುಂಡು ಮಾರಮ್ಮ ದೇವಸ್ಥಾನದ ಬಳಿ ಬೈಕ್ ಸವಾರನ ಮೇಲೆ ಕರಡಿ ದಾಳಿ ನಡೆಸಿ ಪುಂಡಾಡ ನಡೆಸಿತ್ತು. ರಸ್ತೆಯಲ್ಲಿ ವಾಹನ ಮತ್ತು ಬೈಕ್ ಅಡ್ಡಹಾಕಿ ಜಖಂಗೊಳಿಸಿತ್ತು. ನಂತರ ಅರಣ್ಯ ಇಲಾಖೆಯುವರು ಇಡೀ ದಿನ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು. ಮಾರಣಾಂತಿಕ ರೇಬಿಸ್ ರೋಗಕ್ಕೆ ತುತ್ತಾಗಿದ್ದ ಕರಡಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದರೂ, ಸ್ಪಂದಿಸದೆ ಮೃತಪಟ್ಟಿತ್ತು.

ಆತಂಕದಲ್ಲಿ ರೈತರು: ಕೃಷಿ ಮತ್ತು ತೋಟಗಾರಿಕೆಯನ್ನೇ ಬದುಕಾಗಿಸಿಕೊಂಡಿರುವ ರೈತರಿಗೆ ವನ್ಯಜೀವಿಗಳ ಹಾವಳಿಯು ದೊಡ್ಡ ಆತಂಕವನ್ನು ತಂದೊಡ್ಡಿದೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡಲು, ದನದ ಕೊಟ್ಟಿಗೆಯಲ್ಲಿ ಹಸುವಿನ ಹಾಲು ಕರೆಯಲು ನಸುಕಿನಲ್ಲಿ ಎದ್ದು ಹೋಗಲು ಭಯಪಡುವಂತಾಗಿದೆ.

‘ಚಿರತೆ ಮತ್ತು ಕರಡಿ ದಾಳಿಯು ಬಹುತೇಕವಾಗಿ ನಡೆದಿರುವುದು ರೈತರ ಮೇಲೆಯೇ. ಅದರಲ್ಲೂ ಜಮೀನುಗಳಲ್ಲಿ ಕೆಲಸ ಮಾಡುವಾಗ ಮತ್ತು ಊರಿನ ದಾರಿಯಲ್ಲಿ ನಡೆದುಕೊಂಡು ಹೋಗುವಾಗಲೇ ದಾಳಿಯಾಗಿದೆ. ಇದರಿಂದಾಗಿ ಸಂಜೆ ಮತ್ತು ನಸುಕಿನಲ್ಲಿ ಎದ್ದು ಹೊರಕ್ಕೆ ಬರುವುದನ್ನು ರೈತರು ಕಡಿಮೆ ಮಾಡಿದ್ದಾರೆ’ ಎಂದು ಪಾಲಾಭೋವಿದೊಡ್ಡಿಯ ರೈತ ಚಂದ್ರಯ್ಯ ಹೇಳಿದರು.

ಕಳೆದ ತಿಂಗಳು ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ ಕವಣಾಪುರ ಗ್ರಾಮದಲ್ಲಿ ಕೆಂಪಮ್ಮ ಎಂಬುವರ ಮೇಲೆ ಮಧ್ಯಾಹ್ನ ಚಿರತೆ ದಾಳಿ ನಡೆಸಿತ್ತು. ತೋಟದಲ್ಲಿ ಕುರಿ ಮೇಯಿಸುವಾಗ ಚಿರತೆ ಕೆಂಪಮ್ಮ ಅವರ ಮೇಲೆರಗಿತ್ತು. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕನಕಪುರ ತಾಲ್ಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ಚಿರತೆಯೊಂದು ನಿರ್ಮಾಣ ಹಂತದಲ್ಲಿರುವ ಮನೆಯೊಳಗೆ ನಸುಕಿನಲ್ಲಿ ನುಗ್ಗಿ ಆತಂಕ ಸೃಷ್ಟಿಸಿತ್ತು.

90 ವನ್ಯಜೀವಿ ಸೆರೆ: ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 90 ವನ್ಯಜೀವಿಗಳನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ. ಆ ಪೈಕಿ ಬರೋಬ್ಬರಿ 74 ಚಿರತೆಗಳು ಸೇರಿವೆ. ಉಳಿದಂತೆ ತಲಾ 8 ಕರಡಿಗಳು ಮತ್ತು ಆನೆಗಳನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ಸೆರೆಯಾಗುವ ಕಾಡಾನೆ, ಚಿರತೆ ಹಾಗೂ ಕರಡಿಗಳನ್ನು ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಸಂಗಮ, ಮುತ್ತತ್ತಿ, ಬಂಡೀಪುರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಸಂಗಮ, ಮುತ್ತತ್ತಿ, ಮಲೆ ಮಹದೇಶ್ವರ ಸೇರಿದಂತೆ ದೂರದ ಅರಣ್ಯ ಪ್ರದೇಶಗಳಿಗೆ ಸೆರೆಯಾದ ವನ್ಯಜೀವಿಗಳನ್ನು ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ನನೆಗುದಿಗೆ: ರಾಮನಗರದಿಂದ ನಾಲ್ಕೈದು ಕಿಲೋಮಿಟರ್ ದೂರದಲ್ಲಿರುವ ಹಂದಿಗುಂದಿ ಬೆಟ್ಟದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗಾಗಿ, ಈ ಭಾಗದಲ್ಲಿ ಮನುಷ್ಯ ಮತ್ತು ಕರಡಿ ಸಂಘರ್ಷ ವರದಿಯಾಗುವುದುಂಟು. ಹಾಗಾಗಿ, ಈ ಬೆಟ್ಟವನ್ನು ಕರಡಿಧಾಮವಾಗಿ ಘೋಷಣೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿತ್ತು.

ಆದರೆ, ವಿವಿಧ ಕಾರಣಗಳಿಗಾಗಿ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ರಾಮನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟದ ಪ್ರದೇಶವನ್ನು ಅಳಿವಿನ ಅಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂರಕ್ಷಣಾ ತಾಣವಾಗಿ ಘೋಷಿಸಲಾಗಿದೆ. ಈ ಭಾಗದಲ್ಲಿ ಪರಿಸರಕ್ಕೆ ಮಾರಕವಾಗುವ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ.

ರಕ್ಷಣೆಗೆ ಸೋಲಾರ್ ಬೇಲಿಯೇ ಕವಚ

‘ಕಾಡಿಗೆ ಹೊಂದಿಕೊಂಡಂತಿರುವ ನಿರ್ಜನ ಪ್ರದೇಶದಲ್ಲಿರುವ ಜಮೀನುಗಳಲ್ಲಿ ತೋಟದ ಮನೆಗಳು, ಕೊಟ್ಟಿಗೆಗಳು, ಕೋಳಿ ಫಾರಂಗಳತ್ತ ಚಿರತೆಗಳು ಮತ್ತು ಕರಡಿಗಳು ಸಾಮಾನ್ಯವಾಗಿ ಬರುತ್ತವೆ. ಈ ವೇಳೆ ಅವು ಜಾನುವಾರು, ಕುರಿಗಳು, ನಾಯಿಗಳ ಮೇಲೆ ಅಥವಾ ಎದುರಿಗೆ ಸಿಗುವ ಮನುಷ್ಯರ ಮೇಲೂ ದಾಳಿ ನಡೆಸುತ್ತವೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ರೈತರು ತಮ್ಮ ತೋಟದಮನೆ, ಕೊಟ್ಟಿಗೆ ಹಾಗೂ ಕೋಳಿಫಾರಂಗಳ ಸುತ್ತ ಸೋಲಾರ್ ಬೇಲಿಯನ್ನು ನಿರ್ಮಿಸಿಕೊಳ್ಳಬೇಕು. ಆಗ ವನ್ಯಜೀವಿಗಳು ಒಳಕ್ಕೆ ಪ್ರವೇಶಿಸಲು ಹಿಂದೇಟು ಹಾಕಿ ವಾಪಸ್ ಹೋಗುತ್ತವೆ’ ಎಂದು ಡಿಸಿಎಫ್ ಎಂ. ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಜಮೀನಿಗೆ ಹೋಗಲು ಆತಂಕ

ಚಿರತೆ ಮತ್ತು ಕರಡಿ ಭಯದಿಂದಾಗಿ ರೈತರಿಗೆ ತಮ್ಮ ಜಮೀನುಗಳತ್ತ ಹೋಗಲು ಭಯಪಡಬೇಕಾದ ಸ್ಥಿತಿ ಇದೆ. ವನ್ಯಜೀವಿಗಳ ಹಾವಳಿ ಕಾರಣಕ್ಕೆ ಕಾಡಂಚಿನ ಜಮೀನುಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಾರೆ. ಎಲ್ಲಿ, ಯಾವಾಗ ಕಾಡಾನೆ, ಚಿರತೆ, ಕರಡಿ ದಾಳಿ ನಡೆಸುತ್ತವೊ ಎಂಬ ಆತಂಕದಲ್ಲೇ ಬದುಕುವಂತಾಗಿದೆ. ಹಿಂದೆ ಕಾಡುಗಳಲ್ಲಿದ್ದ ವನ್ಯಜೀವಿಗಳು ಈಗ ಸರಾಗವಾಗಿ ಊರುಗಳಿಗೆ ಹಗಲು–ರಾತ್ರಿ ಎನ್ನದೆ ಬರುತ್ತಿವೆ. ಚಿರತೆಗಳ ದಾಳಿಗೆ ಜಾನುವಾರು, ನಾಯಿ, ಕೋಳಿಗಳು ಬಲಿಯಾಗುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ರಾಮನಗರದ ರೈತ ಆದರ್ಶ್ ಒತ್ತಾಯಿಸಿದರು.

ಜಾನುವಾರ ಜೀವಕ್ಕೆ ಕಂಟಕ

ವನ್ಯಜೀವಿಗಳ ಹಾವಳಿಯು ರೈತರ ಒಡನಾಡಿಯಾದ ಜಾನುವಾರುಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಳೆದ ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ ಬರೋಬ್ಬರಿ 4,442 ಜಾನುವಾರುಗಳು ಬಲಿಯಾಗಿವೆ. 2020–21ನೇ ಸಾಲಿನಲ್ಲಿ 493 ಇದ್ದ ಜಾನುವಾರುಗಳು ಸಾವಿನ ಸಂಖ್ಯೆ, 2021–22 ಮತ್ತು 2022–23ನೇ ಸಾಲಿನಲ್ಲಿ 800ರ ಗಡಿ ದಾಟಿವೆ. 2024–25ನೇ ಸಾಲಿನಲ್ಲಿ 790 ಹಾಗೂ ಪ್ರಸಕ್ತ 2025–26ನೇ ಸಾಲಿನಲ್ಲಿ ಇಲ್ಲಿವರೆಗೆ 576 ಜಾನುವಾರುಗಳು ವನ್ಯಜೀವಿಗಳ ದಾಳಿಯಿಂದಾಗಿ ಜೀವ ಕಳೆದುಕೊಂಡಿವೆ. ಕೃಷಿ ಮತ್ತು ಹೈನುಗಾರಿಕೆಗಾಗಿ ಅವುಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ರೈತರಿಗೂ ತುಂಬಲಾರದ ನಷ್ಟವಾಗಿದೆ. ಅಂದಹಾಗೆ, ಕಳೆದ ಐದು ವರ್ಷಗಳಲ್ಲಿ ಬಲಿಯಾದ ಜಾನುವಾರುಗಳಿಗೆ ಅರಣ್ಯ ಇಲಾಖೆ ಇದುವರೆಗೆ ಪಾವತಿಸಿರುವ ಪರಿಹಾರ ಮೊತ್ತ ಬರೋಬ್ಬರಿ ₹3.15 ಕೋಟಿ!

ಪರಿಹಾರ ದರ ಪರಿಷ್ಕರಣೆ

ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ವನ್ಯಜೀವಿಗಳ ದಾಳಿಯಿಂದ ಪ್ರಾಣ ಹಾನಿ, ಬೆಳೆ ಹಾನಿ, ಆಸ್ತಿ ಹಾನಿ ಹಾಗೂ ಗಾಯದ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ, ಅರಣ್ಯ ಇಲಾಖೆಯು ವನ್ಯಜೀವಿ ದಾಳಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 2023ರಲ್ಲಿ ಪರಿಷ್ಕರಣೆ ಮಾಡಿದೆ. ಮುಂಚೆ ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಸಿಗುತ್ತಿದ್ದ ₹7.50 ಲಕ್ಷವನ್ನು 2025ರಲ್ಲಿ ₹20 ಲಕ್ಷಕ್ಕೆ ಏರಿಸಿದೆ. ಶಾಶ್ವತ ಅಂಗವಿಕಲತೆಗೆ ನೀಡುತ್ತಿದ್ದ ₹5 ಲಕ್ಷವನ್ನು ₹10 ಲಕ್ಷಕ್ಕೆ, ಭಾಗಶಃ ಅಂಗವಿಕಲತೆಯ ಪರಿಹಾರ ₹2.50 ಲಕ್ಷವನ್ನು ₹5 ಲಕ್ಷಕ್ಕೆ ಹಾಗೂ ಗಾಯಕ್ಕೆ ನೀಡುತ್ತಿದ್ದ ಪರಿಹಾರವನ್ನು ₹30 ಸಾವಿರದಿಂದ ₹60 ಸಾವಿರಕ್ಕೆ ಏರಿಕೆ ಮಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-14-37307278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.