ಕನಕಪುರ: ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿ ದುನ್ನಸಂದ್ರ ಗ್ರಾಮದಲ್ಲಿ ಗುರುವಾರ ಸೇದಲು ಬೀಡಿ ಕೊಡದ ವ್ಯಕ್ತಿ ಮೇಲೆ ಮತ್ತೊಬ್ಬ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ.

ಗುರುವಾರ ಮಧ್ಯಾಹ್ನ ಗ್ರಾಮದ ದೇವಸ್ಥಾನದ ಬಳಿ ಕುಳಿತಿದ್ದ ಚಂದ್ರಾಚಾರ್ ಅವರನ್ನು ಗ್ರಾಮದ ಗವೀಶ ಬೀಡಿ ಕೇಳಿದ್ದಾನೆ. ಬೀಡಿ ಇಲ್ಲ ಎಂದು ಹೇಳಿದ ಚಂದ್ರಚಾರ್ ಅವರನ್ನು ಮದ್ಯ ಕುಡಿಯಲು ಮನೆಯ ಹಿಂಭಾಗಕ್ಕೆ ಕರೆದೊಯ್ದ ಗವೀಶ, ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಚಂದ್ರಚಾರ್ ರಕ್ಷಣೆಗಾಗಿ ಕೂಗಿಕೊಂಡಾಗ ಗವೀಶ ಸ್ಥಳದಿಂದ ಓಡಿ ಹೋಗಿದ್ದಾನೆ.

ಬೀಡಿ ಕೊಡದ ಕಾರಣ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಗವೀಶ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರಚಾರ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.