ರಾಮನಗರ: ‘ಬೆಂಗಳೂರು-ಮೈಸೂರು ನಡುವಣ ರೈಲು ಮಾರ್ಗದಲ್ಲಿ ನಾಲ್ಕು ಪಥದ ರೈಲ್ವೆ ಹಳಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು. ಇದರಿಂದಾಗಿ ಈ ಮಾರ್ಗದ ರೈಲು ಸಂಚಾರಕ್ಕೆ ಮತ್ತಷ್ಟು ಇಂಬು ಸಿಗಲಿದೆ’ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ರೈಲು ನಿಲ್ದಾಣದಲ್ಲಿ ಕೆಎಸ್ಆರ್ ಬೆಂಗಳೂರು-ಮೈಸೂರು ಒಡೆಯರ್ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಮಂಗಳವಾರ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ‘ಒಡೆಯರ್ ಎಕ್ಸ್ಪ್ರೆಸ್ ನಿಲುಗಡೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಕಾರಣ. ನಿಲುಗಡೆಯಿಂದ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ’ ಎಂದರು.

ಸೇತುವೆಗೆ ₹2,900 ಕೋಟಿ: ‘ರಾಜ್ಯದಲ್ಲಿ 64 ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಾಣ ಕಾಮಗಾರಿಗೆ ₹2,900 ಕೋಟಿ ವಿನಿಯೋಗಿಸಲಾಗಿದೆ. ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಪ್ರತಿ ವರ್ಷ ಕರ್ನಾಟಕದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ₹7000 ಕೋಟಿಗೂ ಹೆಚ್ಚು ಅನುದಾನ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ಗೆ ವಿಲೀನಗೊಳಿಸಿದಾಗಿಂದ ಇಲಾಖೆಗೆ ಹೆಚ್ಚು ಅನುದಾನ ನಿಗದಿಯಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ಇಲಾಖೆಯಲ್ಲಿ ಸಾವಿರಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಮುಗಿಸಲಾಗಿದೆ. 30-40 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಸುರಕ್ಷತೆಗೆ ಒತ್ತು: ‘ರೈಲ್ವೆ ಸುರಕ್ಷತೆಗಾಗಿ ಆಯವ್ಯಯದಲ್ಲಿ ₹1.13 ಲಕ್ಷ ಕೋಟಿ ಮೀಸಲಿರಿಸಲಾಗಿದೆ. ಕಳೆದ 11 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ₹45 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಪ್ರಸ್ತುತ ಶೇ 97ರಷ್ಟು ರೈಲು ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಲಾಗುವುದು’ ಎಂದು ಭರವಸೆ ನೀಡಿದರು.

‘ರಾಜ್ಯದ ವಿವಿಧೆಡೆ ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಲಾಗುವುದು. ಕೋಲಾರಕ್ಕೆ ನೇರ ರೈಲ್ವೆ ಮಾರ್ಗವಿರಲಿಲ್ಲ. ಹಾಗಾಗಿ ಹೊಸಕೋಟೆ ಮತ್ತು ಕೋಲಾರ ಮಾರ್ಗವಾಗಿ 43 ಕಿ.ಮೀ. ಮಾರ್ಗದ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗಿದೆ. ದೇಶದ 1,600ಕ್ಕೂ ಹೆಚ್ಚು ಹೊಸ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.

ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ‘ರಾಮನಗರದಲ್ಲಿ ಒಡೆಯರ್ ರೈಲು ನಿಲುಗಡೆಯೊಂದಿಗೆ ದಶಕಗಳ ಕನಸು ನನಸಾಗಿದೆ. ಇದೊಂದು ಐತಿಹಾಸಿಕ ನಿರ್ಧಾರ. ಬೆಂಗಳೂರು-ಮೈಸೂರು ನಡುವೆ ನಿತ್ಯ 47 ರೈಲುಗಳು ಸಂಚರಿಸಲಿದೆ. ಹೀಗಿರುವಾಗ ಒಡೆಯರ್ ಸೂಪರ್ ಫಾಸ್ಟ್ ರೈಲು ನಿಲುಗಡೆ ಮಾಡಲು ಸುರಕ್ಷತಾ ಕ್ರಮಗಳ ಅಗತ್ಯವಿತ್ತು. ಅಧಿಕಾರಿಗಳ ನಿರಂತರ ಸಂಪರ್ಕದಿಂದ ಇದು ಸಾಧ್ಯವಾಯಿತು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ರುಡಾ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ರೈಲ್ವೆ ವಿಭಾಗೀಯ ಅಧಿಕಾರಿ (ಎಡಿಎಲ್ಎಂ) ಪ್ರವೀಣ್ ಕಾತರಕಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೌಲಗಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಮೂರ್ತಿ, ಮುಖಂಡರಾದ ಗೌತಮ್ ಗೌಡ, ಪದ್ಮನಾಭ, ರುದ್ರದೇವರು, ಎಂ.ಎನ್. ಸುರೇಶ್, ಸಬ್ಬಕೆರೆ ಶಿವಲಿಂಗಪ್ಪ, ಶಿವಾನಂದ, ಯೋಗಾನಂದ, ಶಿವಕುಮಾರಸ್ವಾಮಿ, ಕಾಳಯ್ಯ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.