ರಾಮನಗರ: ಚಾಮರಾಜ ನಗರದಿಂದ ಬೆಂಗಳೂರಿಗೆ ಧನಸಂಗರ್ ಸಮಿತಿ (ಅಂಬೇಡ್ಕರ್ ವಾದ) ಕೈಗೊಂಡಿರುವ ಜೈ ಭೀಮ್ ಸಂವಿಧಾನ ಜಾಗೃತಿ ಅಭಿಯಾನ ಭೀಮರಥ ಸೈಕಲ್ ಜಾಥಾ ಭಾನುವಾರ ರಾಮನಗರಕ್ಕೆ ಆಗಮಿಸಿತು.

ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ಹಾಗೂ ಮುಖಂಡರುಗಳ ಸೈಕಲ್ ಜಾಥಾ ಸದಸ್ಯರಿಗೆ ಎಳನೀರು ನೀಡಿ ಬರಮಾಡಿಕೊಂಡರು. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದು ಶಿವಕುಮಾರಸ್ವಾಮಿ ಶುಭ ಹಾರೈಸಿದರು.

ಸೋಮವಾರ ರಾಮನಗರದಿಂದ ಹೊರಡುವ ಜಾಥಾ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಲಿಂಗರಾಜು, ನಾರಾಯಣಪ್ಪ, ಬೈರಪ್ಪ, ಆಟೋ ಶಿವರಾಜು, ವೆಂಕಟೇಶ, ರಾಘವೇಂದ್ರ, ರಘು, ಹಾಗೂ ಕರ್ನಾಟಕ ರಾಜ್ಯ ಪೌರ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-14-981346197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.