ಬಿಡದಿ: ಬಿಡದಿ ರೈತರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಗಳಿಸಿ ದಾಖಲೆಯ ಜಯ ಸಾಧಿಸಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿಕೂಟ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ.

ಸಂಘದ 12 ನಿರ್ದೇಶಕ ಸ್ಥಾನಗಳಿಗೆ ಒಟ್ಟು 29 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಮತ್ತು ಎನ್ಡಿಎ ಮೈತ್ರಿಕೂಟ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಕಂಡಿದ್ದವು. ಶಾಸಕ ಎಚ್.ಸಿ.ಬಾಲಕೃಷ್ಣ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ್ದರೆ, ಮಾಜಿ ಶಾಸಕ ಎ.ಮಂಜುನಾಥ್ ಎನ್ಡಿಎ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು.

ಸಂಘ ಅಸ್ತಿತ್ವಕ್ಕೆ ಬಂದ 25 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ 7 ಮತ್ತು ಕಾಂಗ್ರೆಸ್ಗೆ 5 ಸ್ಥಾನಗಳು ಮಾತ್ರ ಲಭಿಸಿದ್ದವು.

ಕಾಂಗ್ರೆಸ್ ಬೆಂಬಲಿತ ವಿಜೇತರು (ಸ್ಥಾನವಾರು ಮತಗಳು): ಸಾಲಗಾರರ ಕ್ಷೇತ್ರದಲ್ಲಿ ವಿ.ಆರ್.ಮಹೇಶ್ (1361), ಎಸ್.ಜೀವನ್ (1360), ದೊಡ್ಡರೇವಯ್ಯ (1333), ಸತ್ಯಮೂರ್ತಿ (1263), ಎಚ್.ಎಸ್.ಮಧುಕುಮಾರ್ (1195) ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

ಮಹಿಳಾ ಮೀಸಲು ಸ್ಥಾನದಲ್ಲಿ ಅನ್ನಪೂರ್ಣೇಶ್ವರಿ.ಎನ್ (1245) ಮತ್ತು ಶೋಭಾ ಸಿ.ಟಿ (1223) ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ‘ಎ’ ಮೀಸಲಿನಲ್ಲಿ ಕೆ.ಪಿ.ಬಾಲಕೃಷ್ಣ (1372), ಹಿಂದುಳಿದ ವರ್ಗ ‘ಬಿ’ ಮೀಸಲಿನಲ್ಲಿ ಸಂತೋಷ್ ಬಿ.ಎಸ್, ಪರಿಶಿಷ್ಟ ಜಾತಿ ಮೀಸಲಿನಲ್ಲಿ ಆರ್.ರಮೇಶ್ (1379), ಪರಿಶಿಷ್ಟ ಪಂಗಡ ಮೀಸಲಿನಲ್ಲಿ ಕೆಂಗಲ್ ಹನುಮಂತಯ್ಯ (1464) ಮತಗಳೊಂದಿಗೆ ಗೆದ್ದಿದ್ದಾರೆ.

ಎನ್ಡಿಎ ಮೈತ್ರಿಕೂಟದ ಗೆಲುವು: ಸಾಲಗಾರರಲ್ಲದ ಕ್ಷೇತ್ರದಲ್ಲಿ ಟಿ.ಡಿ.ನಿತ್ಯಾನಂದ 508 ಮತಗಳೊಂದಿಗೆ ಗೆದ್ದಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಸ್ಥಾನದಲ್ಲಿ ಬಸವರಾಜು ಕೇವಲ 13 ಮತ ಪಡೆದು ಸೋತರು.

ಇತರ ಸೋತ ಅಭ್ಯರ್ಥಿಗಳಲ್ಲಿ ಎಚ್.ಎಲ್.ಚಂದ್ರು (980), ಬಿ.ಮಂಜುನಾಥ್ (1033), ಜಯಲಕ್ಷ್ಮಮ್ಮ (1045), ಎಂ.ಪುಷ್ಪರಾಜು (840), ಬಿ.ಪಿ.ರಾಮು (739), ಅನಂತ (307), ಲೀಲಾವತಿ (887) ಮತಗಳೊಂದಿಗೆ ಪರಾಭವಗೊಂಡಿದ್ದಾರೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡದಿ ಪುರಸಭೆ ಪ್ರತಿಪಕ್ಷ ನಾಯಕ ಸಿ.ಉಮೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಸೇರಿದಂತೆ ಹಲವಾರು ಮುಖಂಡರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-14-911789766

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.