ಬಿಡದಿ: ಭಾರಿ ರಾಜಕೀಯ ಜಿದ್ದಾಜಿದ್ದಿನಿಂದ ಕುತೂಹಲ ಕೆರಳಿಸಿರುವ ಬಿಡದಿ ವಿವಿಧೋದ್ದೇಶ ರೈತ ಸೇವಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆಗೆ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಪಟ್ಟಣದ ಬಿಜಿಎಸ್ ಕಾಲೇಜಿನಲ್ಲಿ ಬೆಳಗ್ಗೆ 10ರಿಂದ ಮತದಾನ ಆರಂಭವಾಗಿ ಸಂಜೆ 4ಕ್ಕೆಮುಕ್ತಾಯವಾಯಿತು. ಮತದಾರರುಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು.

ಹೆಸರಿಗಷ್ಟೆ ರೈತ ಸೇವಾ ಸಹಕಾರ ಸಂಘದ ಚುನಾವಣೆಯಾದರು, ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡ ಕಾರಣ ಭಾರಿ ತುರುಸಿನಿಂದ ಕೂಡಿತ್ತು.

ಈ ಸೊಸೈಟಿ ಚುನಾವಣೆ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ನಡುವಿನ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಹಾಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಕಂಡರು ಮತ್ತು ಕಾರ್ಯಕರ್ತರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ರೈತ ಸೇವಾ ಸಹಕಾರ ಸಂಘ ಆರಂಭದಿಂದಲೂ ಜೆಡಿಎಸ್ ಅಧಿಕಾರದಲ್ಲಿ ನಡೆಸುತ್ತಿತ್ತು. ಹಾಗಾಗಿ ಈ ಬಾರಿ ಸಹಕಾರ ಸಂಘವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪಣತೊಟ್ಟಿದೆ. ಜೆಡಿಎಸ್ ಹಿಡಿತ ಬಿಟ್ಟು ಕೊಡದಿರಲು ಮಂಜುನಾಥ್ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಬೆಳಗ್ಗೆಯಿಂದಲೇ ಮತದಾನ ಕೇಂದ್ರದ ಬಳಿ ಬಿಡಾರ ಹೂಡಿದ್ದ ಇಬ್ಬರೂ ಮತ ಹಾಕಲು ಬರುತ್ತಿದ್ದ ಮತದಾರರನ್ನ ಮನವೊಲಿಸುತ್ತಿದ್ದರು.

ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಡದಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಮತ ಚೀಟಿ ತಂದವರನ್ನಷ್ಟೆ ಪೊಲೀಸರು ಮತದಾನ ಕೇಂದ್ರದ ಒಳಗೆ ಬೀಡುತ್ತಿದ್ದರು. ಉಳಿದ ಯಾವುದೇ ಕಾರ್ಯಕರ್ತರು ಮತ್ತು ನಾಯಕರನ್ನು ಮತದಾನ ಕೇಂದ್ರದೊಳಗೆ ಪ್ರವೇಶಿಸಲು ಬಿಡಲಿಲ್ಲ.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಪುರಸಭಾ ಸದಸ್ಯರಾದ ಲೋಹೀತ್ ಕುಮಾರ್, ಹರಿಪ್ರಸಾದ್ ಹಾಗೂ ಮಾಜಿ ಪುರಸಭೆ ಸದಸ್ಯರು ಮತದಾನ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-14-1248949172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.