ಬಿಡದಿ: ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಸಂಪತ್ ಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಂಜಿನಿಯರ್ ಶ್ಯಾಮ್ ಮಹಿಳಾ ಸದಸ್ಯರೊಬ್ಬರಿಗೆ ಅಗೌರವವಾಗಿ ಏರಿ ಧ್ವನಿ ಮಾತನಾಡಿದ್ದು, ಸದಸ್ಯರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರಿನ ಸಂಬಂಧ ಚರ್ಚಿಸಲು ಸಾಮಾನ್ಯ ಸಭೆ ಕರೆಯಲಾಗಿದೆ. ಆದರೆ ಸಭೆಗೆ ಎಂಜಿನಿಯರ್ ಬಂದಿಲ್ಲ. ಸಭೆ ಎಂದರೆ ಅವರಿಗೆ ನಿರ್ಲಕ್ಷ್ಯವೇ ಎಂದು ಸದಸ್ಯ ಸೋಮಶೇಖರ್ ಪ್ರಶ್ನಿಸಿದರು. ಈ ವೇಳೆ ಅಧ್ಯಕ್ಷೆ ಭಾನುಪ್ರಿಯಾ ಎಂಜಿನಿಯರ್ ಶ್ಯಾಮ್ ಅವರಿಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡರು. ಸಭೆಗೆ ಏಕೆ ಬಂದಿಲ್ಲ. ನೋಟಿಸ್ ನೋಡಬೇಕೆ ಎಂದು ಪ್ರಶ್ನಿಸಿದರು.

ಕೆಲ ಸಮಯದ ನಂತರ ಸಭೆ ಬಂದ ಶ್ಯಾಮ್ ಮೇಲೆ ಎಲ್ಲ ಸದಸ್ಯರು ಮುಗಿಬಿದ್ದರು. ಇಂದು ನೀರಿನ ಸಂಬಂಧ ಚರ್ಚಿಸಲು ಸಭೆ ಕರೆಯಲಾಗಿದೆ. ನೀವೇಕೆ? ಬಂದಿಲ್ಲ ಎಂದು ಪ್ರಶ್ನಿಸಿದರು. ಮಹಿಳಾ ಸದಸ್ಯರೊಬ್ಬರು ನೀರಿನ ಸಮಸ್ಯೆ ಹೇಳುತ್ತಿರುವಾಗಲೇ ಮಧ್ಯಪ್ರವೇಶಿಸಿದ ಶ್ಯಾಮ್, ‘ನಿಮ್ಮ ಬಳಿ ಇದೆನೆಲ್ಲ ಚರ್ಚೆ ಮಾಡಲು ಆಗಲ್ಲ. ನಿಮ್ಮ ಮನೆಯವರ ಜತೆ ಮಾತನಾಡಿದ್ದೇನೆ. ಇದರ ಬಗ್ಗೆ ನಿಮ್ಗೇನು ಗೊತ್ತು? ಇದೆಲ್ಲ ನಿಮ್ಗೆ ಗೊತ್ತಗಲ್ಲ’ ಎಂದು ಜೋರು ದನಿ ಹೇಳಿದರು. ಇದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷೆ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ತುರ್ತು ಸಭೆ ಕರೆಯಿರಿ ಎಂದು ಒತ್ತಾಯಿಸಿದ ಬಳಿಕ ಸಭೆ ಕರೆಯಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಆದರೆ ಇಲ್ಲಿ ಅವಶ್ಯಕತೆ ಇದ್ದಾಗ ಸಭೆ ಕರೆಯುವುದು ಸರಿಯಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಗ್ರಾಮೀಣ ಹಬ್ಬಗಳು ಹೆಚ್ಚು ಬರುತ್ತಿವೆ. ಅದರ ಬಗ್ಗೆ ಕೂಡಸಲಹೆ ಸೂಚನೆ ನೀಡಿದ್ದೆ. ಆದರೆ ಅಜೆಂಡಾದಲ್ಲಿ ಗೈರು ಎಂದು ನಮೂದಿಸಿದ್ದಾರೆ. ಇದು ಅಧಿಕಾರಿಗಳ ಅಸಡ್ಡೆಕ್ಕೆ ಸಾಕ್ಷಿಯಾಗಿದೆ ಎಂದು ಸದಸ್ಯ ಲೋಹೀತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಕೋಂಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸ ಕಟ್ಟಡ ನವೀಕರಣ ಮಾಡಲಾಗಿದೆ. ಅಲ್ಲಿ ಸಭೆ ನಡೆಸದೆ ಹಳೇ ಕಟ್ಟಡಲ್ಲೆ ಏಕೆ ಸಭೆ ಕರೆಯಲಾಗಿದೆ ಎಂದು 7 ನೇ ವಾರ್ಡ್ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ಪುರಸಭೆ ಉಪಾಧ್ಯಕ್ಷೆ ಆಯಿಷಾ ಖಲೀಲ್, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-14-1558272375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.