ಬಿಡದಿ: ಬಿಡದಿ ಟೌನ್ಶಿಫ್ಗೆ ಭೂಮಿ ನೀಡಲು ಶೇ 80ರಷ್ಟು ರೈತರು ಒಪ್ಪಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದು ಆಧಾರರಹಿತ. ರೈತರು ಒಪ್ಪಿಗೆ ಸೂಚಿಸಿದ್ದರೆ, ಏಕೆ ತಮ್ಮ ಭೂಮಿ ಉಳಿವಿಗಾಗಿ ರಸ್ತೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ರಾಜ್ಯ ಪ್ರಾಂತ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್ ಹೇಳಿದ್ದಾರೆ.

ಶುಕ್ರವಾರ ಬೈರಮಂಗಲ- ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಂಘದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೌನ್ಶಿಫ್ ನಿರ್ಮಾಣಕ್ಕೆ ಉದ್ದೇಶಿತ ಪ್ರದೇಶದಲ್ಲಿ 9,600 ಎಕರೆ ಫಲವತ್ತಾದ ನೀರಾವರಿ ಭೂಮಿ ಇದ್ದು, ಕೃಷಿ ಚಟುವಟಿಕೆ ಸಮೃದ್ಧವಾಗಿ ನಡೆಯುತ್ತಿದೆ. ಆದರೆ ಈ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಯೂ ಆಧಾರರಹಿತ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಇಲ್ಲಿನ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು 433 ದಿನದಿಂದ ಹೋರಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ರೈತರು ನಡೆಸಿದ ಮುಷ್ಕರಕ್ಕಿಂತ ಹೆಚ್ಚಿನ ದಿನಗಳ ಕಾಲ ಇಲ್ಲಿ ಹೋರಾಟ ಹೋರಾಟ ಮುಂದುವರೆದಿದೆ ಎಂದರು.

ರೈತ ಹಿತರಕ್ಷಣಾ ಸಂಘದಲ್ಲಿ ಎಲ್ಲಾ ರಾಜಕೀಯ ಪಕ್ಷದ ರೈತರಿದ್ದಾರೆ. ಹಾಗಾಗಿ ಈ ಹೋರಾಟ ಗಟ್ಟಿಯಾಗಿ ನಿಂತಿದೆ. ಹೋರಾಟಕ್ಕೆ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಇದನ್ನ ಅರಗಿಸಿಕೊಳ್ಳಲಾಗದ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಜಿಬಿಎ ಅಧ್ಯಕ್ಷ ಗಾಣಕಲ್ ನಟರಾಜ್ ಅವರು ಕಾನೂನು ಅರಿವು ಇಲ್ಲದೆ ಯೋಜನೆ ಬಗ್ಗೆ ಏನೂ ಮಾತನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಶೀನಪ್ಪ ರೆಡ್ಡಿ, ಖಜಾಂಚಿ ಮಂಡಲಹಳ್ಳಿ ನಾಗರಾಜು, ಪದಾಧಿಕಾರಿಗಳಾದ ರಾಮಕೃಷ್ಣ, ಆನಂದ ಶ್ರೀನಿವಾಸ್ಅಶ್ವಥ್, ಕೃಷ್ಣ, ಭಾಗ್ಯ ನಾಗರಾಜು, ರಾಮಚಂದ್ರ ಜಯಮ್ಮ, ಸುಮಿತ್ರಮ್ಮ, ಭಾಗ್ಯಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-14-1099426270

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.