ಬಿಡದಿ: ಇಲ್ಲಿನ ಊರಗಳ್ಳಿ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಜಲ್ಲಿ ಕ್ರಷರ್ ಹಾಗೂ ಮಿತಿಮೀರಿದ ಲಾರಿಗಳ ಸಂಚಾರದಿಂದಾಗಿ ಸಾರ್ವಜನಿಕರು ಮತ್ತು ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಊರಗಳ್ಳಿ ಸುತ್ತಮುತ್ತ ಸುಮಾರು 24 ಜಲ್ಲಿ ಕ್ರಷರ್ಗಳಿವೆ. ಇಲ್ಲಿಂದ ಬೆಂಗಳೂರು ಸೇರಿದಂತೆ ವಿವಿಧ ಹೊರ ಜಿಲ್ಲೆಗಳಿಗೆ ದಿನನಿತ್ಯ 500ಕ್ಕೂ ಹೆಚ್ಚು ಲಾರಿಗಳಲ್ಲಿ ಜಲ್ಲಿ, ಎಂ-ಸ್ಯಾಂಡ್ ಹಾಗೂ ಇತರ ಕಟ್ಟಡ ಸಾಮಗ್ರಿ ಸಾಗಿಸಲಾಗುತ್ತಿದೆ. ಆದರೆ, ಈ ಲಾರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ (ಓವರ್ ಲೋಡ್) ಅಂದರೆ ಬರೊಬ್ಬರಿ 40ರಿಂದ 60ಟನ್ಗಳಷ್ಟು ತೂಕದ ಸಾಮಗ್ರಿ ಸಾಗಣೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಲಾರಿಗಳಲ್ಲಿ ಸಾಗಿಸುವ ಸಾಮಗ್ರಿಗಳಿಗೆ ಕಡ್ಡಾಯವಾಗಿ ಟರ್ಪಾಲು (ಹೊದಿಕೆ) ಹಾಕಬೇಕೆಂಬ ನಿಯಮವಿದ್ದರೂ ಇಲ್ಲಿ ಯಾವುದೇ ಲಾರಿಗಳಿಗೂ ಹೊದಿಕೆ ಹಾಕುತ್ತಿಲ್ಲ. ಇದರಿಂದಾಗಿ ಸಂಚರಿಸುವಾಗ ಕಲ್ಲಿನ ಸಣ್ಣ ಕಣಗಳು ಹಾಗೂ ದೂಳು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಮುಖಕ್ಕೆ ಸಿಡಿಯುತ್ತಿವೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲು ಬೀಳುವುದರಿಂದ ಹೊರಗಿನಿಂದ ಬರುವ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಅಪಘಾತಕ್ಕೀಡಾಗುತ್ತಿರುವ ಘಟನೆಗಳು ನಡೆಯುತ್ತಿವೆ.

ರೋಗಗಳ ತಾಣವಾದ ಊರು: ಲಾರಿಗಳ ಅತಿಯಾದ ಸಂಚಾರ ಮತ್ತು ಕ್ರಷರ್ಗಳ ದೂಳಿನಿಂದಾಗಿ ಈ ಮಾರ್ಗದಲ್ಲಿ ಬರುವ ಕರಿಯಪ್ಪನದೊಡ್ಡಿ, ಹೆಗ್ಗಡಗೆರೆ ಹಾಗೂ ಕರಡಿಗೌಡನ ದೊಡ್ಡಿ ಜನರು ಅಸ್ತಮಾ ಸೇರಿದಂತೆ ಹತ್ತಾರು ಉಸಿರಾಟದ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಅಧಿಕ ಲೋಡ್ ಹಾಕದಂತೆ ಲಾರಿ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಾದೇವಯ್ಯ.

ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಒ ಅಧಿಕಾರಿಗಳು ಮಾತ್ರ ಈ ರಸ್ತೆಯತ್ತ ಕಣ್ಣೆತ್ತಿಯೂ ನೋಡಿಲ್ಲ. ಒಂದೇ ಒಂದು ದಿನವೂ ಇಲ್ಲಿ ವಾಹನ ತನಿಖೆ ನಡೆಸಿ ದಂಡ ವಿಧಿಸುವ ಅಥವಾ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಕೇವಲ ‘ಪರ್ಮಿಟ್’ ಪರಿಶೀಲಿಸಿ ಹೋಗುತ್ತಾರೆ. ಟ್ರ್ಯಾಕ್ಟರ್ ನಲ್ಲಿ ದಿನನಿತ್ಯ ಇನ್ನೂರಕ್ಕೂ ಅಧಿಕ ಲೋಡ್ಗಳು ತುಂಬಿಕೊಂಡು ಹೋಗುತ್ತಾರೆ. ಇದಕ್ಕೆ ಯಾವುದೇ ಪರವಾನಗಿ ಇರುವುದಿಲ್ಲ. ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ. ಇದು ಕೇವಲ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿರುವ ದೊಡ್ಡ ವ್ಯವಹಾರವಾಗಿದೆ. ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆಯೇ ಹೊರತು; ಸತ್ಯಾಂಶವನ್ನು ಬೆಳಕಿಗೆ ತರುವುದಿಲ್ಲ. ಲಾರಿಗಳ ತೂಕ ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ರಸ್ತೆಯಲ್ಲಿ ಜಲ್ಲಿಕಲ್ಲು ಹಾಗೂ ದೂಳು ಕಣ್ಣಿಗೆ ಸಿಡಿಯುವುದರಿಂದ ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ವಿದ್ಯಾರ್ಥಿ ದಿನೇಶ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-14-1434556792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.