ಬಿಡದಿ: ಬಿಡದಿ ಟೌನ್ ಶಿಪ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಪ್ರಸ್ತಾಪವನ್ನು ಗುರುವಾರ ನಡೆಯುವ ಸಚಿವ ಸಂಪುಟ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಹೋಬಳಿಯ ಭೈರಮಂಗಲದಲ್ಲಿ ನೂರಾರು ರೈತ ಮಹಿಳೆಯರು ಬುಧವಾರ ಇಡೀ ರಾತ್ರಿ ಒನಕೆ ಪ್ರದರ್ಶನ ಚಳವಳಿ ನಡೆಸಿದರು.

ಭೈರಮಂಗಲದ ವೃತ್ತದಲ್ಲಿ ಗ್ರಾಮದ ನೂರಾರು ಮಹಿಳೆಯರು, ವೃದ್ಧೆಯರು ತಾವು ಮನೆಯಿಂದ ತಂದಿದ್ದ ಒನಕೆಗಳಿಗೆ ಹೂವು ಕಟ್ಟಿ, ಕುಂಕುಮ ಹಚ್ಚಿ, ಮೊಂಬತ್ತಿ, ಕರ್ಪೂರ ಬೆಳಗಿ ಪೂಜೆ ಸಲ್ಲಿಸಿದರು.

ನಂತರ ಒನಕೆಗಳನ್ನು ಮೇಲೆತ್ತಿ ಪ್ರದರ್ಶಿಸಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಬಿಡದಿ ಟೌನ್ಶಿಪ್ ಯೋಜನೆಗೆ ಬೈರಮಂಗಲದ ಭೂ ಸ್ವಾಧೀನ ಅಂತಿಮ ಅಧಿಸೂಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಹೋರಾಟ ವಿಸ್ತರಿಸುತ್ತೇವೆ. ಮೖಸೂರು–ಬೆಂಗಳೂರು ಹೆದ್ದಾರಿ ಅಗೆದು ಪ್ರತಿಭಟಿಸುತ್ತೇವೆ. ರಕ್ತಪಾತಕ್ಕೂ ಸಿದ್ಧರಾಗುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ರೈತ ಮುಖಂಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ.ಪ್ರಕಾಶ್ ಮಾತನಾಡಿ, ‘ರಾಜ್ಯ ಸರ್ಕಾರ ರೖತರ ಪ್ರತಿರೋಧ ಲೆಕ್ಕಿಸದೆ ಅಂತಿಮ ಅಧಿಸೂಚನೆ ಹೊರಡಿಸಿದರೆ, ರೈತರು ಅನಿವಾರ್ಯವಾಗಿ ‘ದಂಡಂ ದಶಗುಣಂ’ ಹೋರಾಟ ಮಾಡಬೇಕಾಗುತ್ತದೆ. ಯಾರು ಬಲಿಯಾಗುತ್ತಾರೋ ಗೊತ್ತಿಲ್ಲ. ಪೊಲೀಸರ ಲಾಠಿ ಬಲಾಢ್ಯವೋ, ಮಹಿಳೆಯರ ಒನಕೆ ಪ್ರಬಲವೋ ತೋರಿತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಚಿನ್ನಪ್ಪ ರೆಡ್ಡಿ, ನಾಗರಾಜು, ಅಶ್ವತ್ಥ್, ಆನಂದ್, ಶ್ರೀನಿವಾಸ್, ಹರೀಶ್, ಕುಮಾರ್ ಬಸವಣ್ಣ ರಾಮಚಂದ್ರ, ದೀಪಾ, ವಿಜಯಮ್ಮ, ಲಕ್ಷ್ಮೀದೇವಿ ಮಹೇಶ್ವರಿ, ಲಕ್ಷ್ಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-14-1288811908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.