ಬಿಡದಿ: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಅದು ಸುಳ್ಳು ಎಂದು ಹೇಳಿಕೊಂಡು ಕೆಲವರು ರಿಯಲ್ ಎಸ್ಟೇಟ್ ವಹಿವಾಟು ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ನ ಎಚ್.ಸಿ. ರಾಜಣ್ಣ ಆರೋಪಿಸಿದರು.

ಹೊಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ಯೋಜನೆ ಅನುಷ್ಠಾನ ಅಂತಿಮ ಹಂತದಲ್ಲಿದೆ. ಜಿಲ್ಲಾಧಿಕಾರಿ ಅಂತಿಮ ಅಧಿಸೂಚನೆ ಹೊರಡಿಸಲು ಸಜ್ಜಾಗಿದ್ದಾರೆ. ಈ ನಡುವೆ ರೈತರ ಮುಖವಾಡ ಧರಿಸಿದ ಕೆಲವರು ರೈತರ ಮನೆಗೆ ತೆರಳಿ ಭೂಮಿ ಕೊಡಬೇಡಿ. ನಿಮಗೆ ನಿಗದಿಪಡಿಸಿದಷ್ಟು ಪರಿಹಾರದ ಹಣ ಬರುವುದಿಲ್ಲ. ಈ ಯೋಜನೆ ಅನುಷ್ಠಾನ ನವಾಗುವುದಿಲ್ಲ. ನಿಮ್ಮನ್ನು ಒಕ್ಕಲೆಬ್ಬಿಸುತ್ತಾರೆ’ ಎಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

‘ಯೋಜನೆಗೆ ನಮ್ಮ ವಿರೋಧವಿಲ್ಲ. ನಾವು ಭೂಮಿ ಕೊಡಲು ಸಿದ್ದರಾಗಿದ್ದೇವೆ. ಇದು ನಮ್ಮ ಭೂಮಿ, ನಮ್ಮ ಹಕ್ಕು. ಸರ್ಕಾರ ನಿಗದಿಪಡಿಸಿರುವ ಪರಿಹಾರಕ್ಕೆ ನಾವು ಒಪ್ಪಿ ಭೂಮಿ ಕೊಡುತ್ತಿದ್ದೇವೆ’ ಎಂದು ರೈತರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

‘ಇಪ್ಪತ್ತು ವರ್ಷಗಳಿಂದ ಈ ಭಾಗದ ರೈತರು ಅನುಭವಿಸುತ್ತಿರುವ ಯಾತನೆ ನಮಗೆ ಮಾತ್ರ ಗೊತ್ತಿದೆ. ಕೆಂಪು ವಲಯದಲ್ಲಿದ್ದ ಭೂಮಿಯನ್ನು ಮಾಡಿದ್ದರಿಂದ ಅತ್ತ ಮಾರಲೂ ಆಗದೆ, ಇತ್ತ ಉತ್ತಮ ಭವಿಷ್ಯ ಕಂಡುಕೊಳ್ಳಲೂ ಆಗದೆ ತೊಂದರೆ ಅನುಭವಿಸುತ್ತಿದ್ದೇವೆ. ಯೋಜನೆಯ ಅನುಷ್ಠಾನಕ್ಕೆ ವ್ಯಾಪ್ತಿಯ ಬಹುತೇಕ ರೈತರ ಸಹಮತ ಇದೆ. ಆದರೆ ಕೆಲವರು ಮಾತ್ರ ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದು ರೈತ ಹೆಚ್.ಎಸ್.ಸಿದ್ದರಾಜು ಆರೋಪಿಸಿದರು.

ಹೊಸೂರು ಹಾಗೂ ಕಂಚಿಗಾನಹಳ್ಳಿ ರೈತರು ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-18-1351781455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.