ಬೆಳಗಾವಿ: ‘ರಾಮನಗರ ಜಿಲ್ಲೆಯ ಬಿಡದಿ ಬಳಿ ‘ಟೌನ್ಶಿಪ್’ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ರೈತರ ವಿರೋಧವಿದ್ದು, ಅನುಮೋದನೆ ಹಿಂಪಡೆಯುವುದರ ಜೊತೆಗೆ ಯೋಜನೆಯನ್ನೂ ಸಂಪೂರ್ಣವಾಗಿ ಕೈ ಬಿಡಬೇಕು’ ಎಂದು ಭಾರತೀಯ ಕೃಷಿಕ ಸಮಾಜ– ಕರ್ನಾಟಕ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.

‘ಈ ಟೌನ್ಶಿಪ್ಗೆ 25 ಗ್ರಾಮಗಳ 9,640 ಎಕರೆ ಜಮೀನು ಬಳಸಿಕೊಳ್ಳುವ ಉದ್ದೇಶವಿದೆ. ಇದೆಲ್ಲವೂ ಫಲವತ್ತಾದ ಜಮೀನಾಗಿದ್ದು, ರೈತರಿಗೆ ಪರಿಹಾರದ ಆಸೆ ತೋರಿಸಿ ಜಮೀನು ಕಬಳಿಕೆ ಸರಿಯಲ್ಲ. ಇದರಿಂದ 25 ಗ್ರಾಮಗಳ ಜನ ಅತಂತ್ರ ಆಗುವರು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಾವಿರಾರು ಕುಟುಂಬಗಳನ್ನು ಏಕಕಾಲಕ್ಕೆ ಬೀದಿಪಾಲು ಮಾಡುವ ರಿಯಲ್ ಎಸ್ಟೇಟ್ ಯೋಜನೆಯನ್ನು ರೈತ ಸಂಘಟನೆಗಳು ವಿರೋಧಿ ಸುತ್ತಲೇ ಇವೆ. ಉಪಮುಖ್ಯಮಂತ್ರಿ ಅವರು ಹಠಮಾರಿತನ ಕೈ ಬಿಡಬೇಕು’ ಎಂದರು.

‘ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳದ್ದೇ ಕಾಟ ಹೆಚ್ಚುತ್ತಿದೆ. ಬೇಡದ ವಸ್ತು ಖರೀದಿಸುವಂತೆ ಆನ್ಲೈನ್ ಲಿಂಕುಗಳನ್ನು ರೈತರಿಗೆ ಕಳುಹಿಸುತ್ತಾರೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಹೊಂಗರಗಾವಿ, ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಮುಖಂಡ ಮಲ್ಲಿಕಾರ್ಜುನ ಮುಗಪ್ಪಗೋಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-21-569041400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.