ಕನಕಪುರ: ಬಿಡದಿ ಟೌನ್ಶಿಪ್ ವಿರುದ್ಧ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಟೌನ್ಶಿಪ್ ಯೋಜನೆಗೆ ರೈತರು ಒಪ್ಪಿಗೆ ನೀಡದೆ ವಿರೋಧ ಮಾಡುತ್ತಿರುವುದರಿಂದ ಯೋಜನೆ ಕೈಬಿಡುವುದು ಸೂಕ್ತ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸುತ್ತಮುತ್ತ ಮೂರು ಲಕ್ಷ ಅಪಾರ್ಟ್ಮೆಂಟ್ಗಳು ಖಾಲಿ ಇವೆ. ಕೆಂಪೇಗೌಡ, ವಿಶ್ವೇಶ್ವರಯ್ಯ ಬಡಾವಣೆಗಳಲ್ಲೂ ನಿವೇಶನಗಳು ಖಾಲಿ ಇವೆ. ಇಂತಹ ಪರಿಸ್ಥಿತಿಯಲ್ಲಿ ಟೌನ್ಶಿಪ್ ಅವಶ್ಯಕತೆ ಇಲ್ಲ ಎಂದರು.

7,600 ಎಕರೆ ಭೂಮಿ ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಫಲವತ್ತಾದ ಭೂಮಿ. ಅದೇ ಅವರ ಜೀವನ. ಸರ್ಕಾರ ಕೊಡುವ ಪರಿಹಾರ ಶಾಶ್ವತವಲ್ಲ. ಅವರಿಗೆ ಅವರ ಭೂಮಿಯೆ ಶಾಶ್ವತ ಎಂದು ಹೇಳಿದರು.

ಸರ್ಕಾರಗಳು ರೈತರಿಗೆ ಬದುಕು ಕಟ್ಟಿಕೊಡಬೇಕೆ ಹೊರತು ಅವರ ಬದುಕನ್ನೇ ಕಿತ್ತುಕೊಳ್ಳಬಾರದು. ರೈತ ವಿರೋಧಿ ಯೋಜನೆಯನ್ನು ಕೂಡಲೇ ಕೈಬಿಡುವುದು ಸೂಕ್ತ ಎಂದು ತಿಳಿಸಿದರು.

ಜಾಗತಿಕ ಸಮಸ್ಯೆ: ತೈಲ ಮಿತ ಬಳಕೆ ಮತ್ತು ಚಿನ್ನ ಖರೀದಿ ಕಡಿಮೆ ಮಾಡಿ ಎಂಬ ಮೋದಿ ಮನವಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇದು ಜಾಗತಿಕಮಟ್ಟದ ಸಮಸ್ಯೆ ಎಂದು ಹೇಳಿದರು.

ಭಾರತಕ್ಕೆ ಶೇ 30ರಷ್ಟು ತೈಲ ಹಾರ್ಮೋಜ್ ಜಲಸಂಂಧಿ ಮೂಲಕವೇ ಪೂರೈಕೆಯಾಗುತ್ತದೆ. ಹಾರ್ಮೋಜ್ ಜಲಸಂಧಿ ಮುಚ್ಚಿರುವುದರಿಂದ ತೈಲ ಪೂರೈಕೆಗೆ ಸಮಸ್ಯೆಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಸಮಸ್ಯೆ ಇನ್ನೂ ಜಟಿಲವಾಗಲಿದೆ ಎಂದರು.

ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ತೈಲ ಮತ್ತು ಚಿನ್ನವನ್ನು ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಡಾಲರ್ ಎದುರು ರೂಪಾಯಿ ಅಪಮೌಲ್ಯವಾಗುತ್ತದೆ. ದೇಶದ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಪ್ರಧಾನಿ ಕ್ರಮವನ್ನು ಬೆಂಬಲಿಸಬೇಕು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-14-1708343282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.