ರಾಮನಗರ: ನಗರದ 1ನೇ ವಾರ್ಡ್ನ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿ ನಗರಸಭೆಯಿಂದ ಹೊಸದಾಗಿ ನವೀಕರಣಗೊಳಿಸಿರುವ ಬಯೊಗ್ಯಾಸ್ ಘಟಕಕ್ಕೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಶನಿವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಬಯೊಗ್ಯಾಸ್ ಘಟಕವನ್ನು ನಗರಸಭೆಯು ಬಹುಪಯೋಗಿಯಾಗಿ ಬಳಸಿಕೊಳ್ಳಲಿದೆ. ನಗರದ ಹೋಟೆಲ್ಗಳಿಂದ ಬರುವ ಹಸಿ ತ್ಯಾಜ್ಯ, ಜೈಲು, ಎಪಿಎಂಸಿ ಮಾರುಕಟ್ಟೆಯಿಂದ ಬರುವ ಕೊಳೆತ ತರಕಾರಿ ಮತ್ತಿತರ ಆಹಾರ ತ್ಯಾಜ್ಯ ಬಳಸಿ ಬಯೊಗ್ಯಾಸ್ ಉತ್ಪಾದಿಸಲಾಗುತ್ತದೆ. ಇದರಿಂದ ವಿದ್ಯುತ್ ಉತ್ಪಾದಿಸಲಾಗುವುದು ಎಂದರು.

ಒಂದು ಟನ್ ಬಯೊಗ್ಯಾಸ್ ಉತ್ಪಾದನೆಯಿಂದ ನಗರಸಭೆಯ ಸುಮಾರು 20 ಬೀದಿ ದೀಪಗಳು ಉರಿಯಲಿವೆ. ಮುಂದೆ ಹಂತ, ಹಂತವಾಗಿ ಮತ್ತಷ್ಟು ಹೊಸ ಘಟಕಗಳಿಗೆ ಚಾಲನೆ ನೀಡಲಾಗುತ್ತದೆ. ಈ ಘಟಕ 10 ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಆದರೆ ನಿರ್ವಹಣೆ ಇಲ್ಲದೆ ಸ್ಥಗಿತವಾಗಿತ್ತು ಎಂದು ತಿಳಿಸಿದರು.

ಪೌರಾಯುಕ್ತ ಜಯಣ್ಣ ಮಾತನಾಡಿ, ಹೋಟೆಲ್ಗಳಲ್ಲಿ ಕಸ ವಿಂಗಡಿಸದೆ ಹಾಕುತ್ತಿದ್ದರು. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಉಳಿದ ತರಕಾರಿ ಹಾಕಲಾಗುತ್ತಿತ್ತು. ಇದರಿಂದ ಸ್ವಚ್ಛತೆ ಮಾಯವಾಗಿ ಕಸದ ಸಮಸ್ಯೆ ಹೆಚ್ಚಾಗಿ, ನಗರದ ಸೌಂದರ್ಯಕ್ಕೂ ಮಾರಕವಾಗಿತ್ತು. ಇದನ್ನ ಮನಗಂಡು ಬಯೊಗ್ಯಾಸ್ ಘಟಕಕ್ಕೆ ಮರುಜೀವ ನೀಡಲಾಗಿದೆ’ ಎಂದರು.

ಘಟಕದ ಮೂಲಕ ನಗರಸಭೆ ಕಸದಿಂದ ರಸ ಪಡೆಯಲು ನಗರಸಭೆ ಯೋಜಿಸಿದೆ. ಘಟಕದಲ್ಲಿ ಪ್ರತಿದಿನ ಒಂದು ಟನ್ ಹಸಿ ತ್ಯಾಜ್ಯ ಸುರಿದರೆ ಅದೆಲ್ಲಾ ಗೊಬ್ಬರವಾಗಿ ಹೊರಬರುತ್ತದೆ. ಪ್ರತಿ ದಿನ ನೀರಿನ ಅಂಶ ಬಿಟ್ಟು 50ರಿಂದ 100 ಕೆ.ಜಿ.ಯಷ್ಟು ಗುಣಮಟ್ಟದ ತಾಜಾ ಗೊಬ್ಬರ ಸಿಗಲಿದೆ. ಇದನ್ನು ನಗರಸಭೆಯಿಂದಲೇ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಚಿಂತನೆ ಇದೆ. ಉದ್ಯಾನಗಳಿಗೂ ಬಳಸಲಾಗುತ್ತದೆ’ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಆರೀಫ್, ಸದಸ್ಯರಾದ ಅಜ್ಮತ್, ಬಿ.ಸಿ. ಪಾರ್ವತಮ್ಮ, ವಿಜಯಕುಮಾರಿ, ಸೋಮಶೇಖರ್(ಮಣಿ), ಪವಿತ್ರ ಲಕ್ಷ್ಮೀಕಾಂತ್, ಪದ್ಮ, ನಾಗಮ್ಮ, ಸಮದ್, ಎಂಜಿನಿಯರ್ಗಳಾದ ವಿಶ್ವನಾಥ್, ನಿರ್ಮಲ, ಆರೋಗ್ಯ ನಿರೀಕ್ಷಕ ವಿಜಯಕುಮಾರ್, ಕಂದಾಯ ನಿರೀಕ್ಷಕ ಆರ್. ನಾಗರಾಜು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-14-990437858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.