ರಾಮನಗರ: ‘ವಿಶ್ವದಲ್ಲಿ ಯುದ್ದಗಳು ನಿಂತು ಶಾಂತಿ ನೆಲೆಸಲು ಗೌತಮ ಬುದ್ಧನ ತತ್ವಗಳು ದಾರಿದೀಪವಾಗಿವೆ. ಜಗತ್ತಿಗೆ ಬುದ್ದ ಸಾರಿದ ಅಹಿಂಸೆ, ಶಾಂತಿ, ಕರುಣೆ, ಮೈತ್ರಿ, ಪ್ರಜ್ಞೆ ಹಾಗೂ ಸಮಾನತೆ ಸಂದೇಶಗಳು ಇಂದಿಗೂ ಪ್ರಸ್ತುತ. ಸಮಾಜದಲ್ಲಿನ ಅಶಾಂತಿ, ದ್ವೇಷ, ಅಸೂಯೆಗಳನ್ನು ತೊಡೆದು ಹಾಕಲು ಎಲ್ಲರೂ ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಉಪ ವಿಭಾಗಾಧಿಕಾರಿ ಬಿನೋಯ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಯುವ ಪೀಳಿಗೆ ಹಾಗೂ ಸಾರ್ವಜನಿಕರು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

‘ಬುದ್ಧನ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ, ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಶಾಂತಿ ಸಾಧಿಸಲು ಸಾಧ್ಯ. ಶಾಂತಿಯುತ ಬದುಕಿಗೆ ಬೇಕಾದ ಎಲ್ಲಾ ಮಾರ್ಗಗಳನ್ನು ಮಹಾತ್ಮರು ತೋರಿಸಿದ್ದಾರೆ. ಈಗ ಅವುಗಳನ್ನು ಪಾಲಿಸುವುದಷ್ಟೇ ಬಾಕಿ ಇದೆ’ ಎಂದು ಅಭಿಪ್ರಾಯಪಟ್ಟರು.

ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ‘ದುಃಖ ನಿವಾರಣೆಯಾಗಬೇಕಾದರೆ ಮಧ್ಯಮ ದಾರಿಯಲ್ಲಿ ನೇರವಾಗಿ ನಡೆಯಬೇಕು. ಅದಕ್ಕೆ ಬುದ್ಧನ ತತ್ವಗಳು ಮತ್ತು ಬದುಕು ನಮಗೆ ಮಾರ್ಗದರ್ಶಿಯಾಗಿದೆ. ನಮ್ಮ ನಡೆ–ನುಡಿಯಿಂದ ಮತ್ತೊಬ್ಬರಿಗೆ ನೋವಾಗಬಾರದು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ‘ವಿಧ್ಯಾರ್ಥಿಗಳು ತಮ್ಮ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಇಡೀ ಪ್ರಪಂಚವು ಜ್ಞಾನಕ್ಕೆ ನೀಡುವ ಗೌರವ ಮತ್ತು ಬೆಲೆಯನ್ನು ಮತ್ಯಾವುದಕ್ಕೂ ನೀಡುವುದಿಲ್ಲ. ಹಾಗಾಗಿ, ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ, ಸಮಾಜದಲ್ಲಿ ಬದಲಾವಣೆಗೆ ಕಾರಣರಾಗಬೇಕು’ ಎಂದು ಸಲಹೆ ನೀಡಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸೃಷ್ಟಿ, ವಿಶ್ವಾಸ್ ಗೌಡ ಹಾಗೂ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಮುಖಂಡರಾದ ಹರೀಶ್ ಬಾಲು, ಕಿರಣ್, ರಾಣಿ, ಶಿವಶಂಕರ್, ಗುಡ್ಡೆ ವೆಂಕಟೇಶ್, ಸುರೇಶ್, ಪುನೀತ್, ಕೂಟಗಲ್ ಶ್ರೀನಿವಾಸ್ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-14-1065372779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.