ರಾಮನಗರ: ‘ಜನಗಣತಿಯು ಸಂವಿಧಾನಬದ್ದ ಕಾರ್ಯವಾಗಿದೆ. ಸರ್ಕಾರವು ಯಾವುದೇ ನೀತಿ –ನಿರೂಪಣೆ, ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಜನಗಣತಿ ದತ್ತಾಂಶ ಆಧಾರವಾಗಿರುತ್ತದೆ. ಈ ಮಹತ್ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಕಾರಿ ಆರ್. ಚಂದ್ರಯ್ಯ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರಸಭೆ ವತಿಯಿಂದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮೊದಲ ಬಾರಿಗೆ ಡಿಜಿಟಲ್ ಮಾದರಿಯಲ್ಲಿ ನಡೆಯುತ್ತಿರುವ ಗಣತಿಯು ವಿಶ್ವದಲ್ಲೇ ಅತಿ ದೊಡ್ಡ ದತ್ತಾಂಶ ಸಂಗ್ರಹ ಕಾರ್ಯವಾಗಿದೆ’ ಎಂದರು.

‘ದೇಶದಲ್ಲಿ 1872ರಲ್ಲಿ ಮೊದಲ ಗಣತಿ ನಡೆಯಿತು. ದೇಶ ಸ್ವಾತಂತ್ರ್ಯ ಪಡೆದ ಬಳಿಕ ನಡೆಯುತ್ತಿರುವ 8ನೇ ಗಣತಿ ಇದಾಗಿದೆ. ಮನೆ ಗಣತಿ ಮತ್ತು ಜನಗಣತಿ ಸೇರಿದಂತೆ ಎರಡು ಹಂತದಲ್ಲಿ ಈ ಕಾರ್ಯ ನಡೆಯುತ್ತಿದೆ. ಏಪ್ರಿಲ್ 1ರಿಂದ 15ರವರೆಗೆ ಮನೆ ಗಣತಿ ನಡೆಯಲಿದೆ. ಜೊತೆಗೆ ಸಾರ್ವಜನಿಕರಿಗೂ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಸ್ವಯಂ ಗಣತಿ ಮುಗಿಸಿದವರು ತಮ್ಮ ಮನೆಗೆ ಗಣತಿದಾರರು ಬಂದಾಗ ಸ್ವಯಂ ಗಣತಿ ಮಾಡಿದಾಗ ಜನರೇಟ್ ಆಗುವ ಎಸ್ಸಿ ಐ.ಡಿ.ಯನ್ನು ನೀಡಬೇಕು. ಅವರು ಅದನ್ನು ಪರಿಶೀಲಿಸಿ ಅನುಮೋದನೆ ನೀಡಿದಾಗ ಗಣತಿ ಪೂರ್ಣಗೊಳ್ಳುತ್ತದೆ. ನಮ್ಮ ಮನೆಯನ್ನು ಗಣತಿ ಮಾಡಿಲ್ಲ ಎಂಬ ದೂರುಗಳು ಬಾರದಂತೆ ಗಣತಿದಾರರು ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

‘ಗಣತಿ ಕಾರ್ಯಕ್ಕೆ ಜಿಲ್ಲೆಯಲ್ಲಿ 11 ಉಸ್ತುವಾರಿ ಅಧಿಕಾರಗಳನ್ನು ನಿಯೋಜಿಸಲಾಗಿದೆ. ಇವರಲ್ಲಿ ನಾಲ್ವರು ತಹಶೀಲ್ದಾರರು ಹಾಗೂ ಪೌರಾಯುಕ್ತು, ಪುರಸಭೆ ಮುಖ್ಯಾಧಿಕಾರಿಗಳನ್ನು ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಐವರು ಮುಖ್ಯಾಧಿಕಾರಿಗಳು ಇರಲಿದ್ದಾರೆ. 40 ಮಂದಿಗೆ ಜನರಿಗೆ ಒಬ್ಬರಂತೆ ಕ್ಷೇತ್ರ ತರಬೇತುದಾರರನ್ನು ನೇಮಿಸಲಾಗಿದೆ. ಜಿಲ್ಲೆಗೆ ಮಲ್ಲಿಕಾರ್ಜುನ ಮತ್ತು ಸಿದ್ದಲಿಂಗಸ್ವಾಮಿ ಅವರು ಮಾಸ್ಟರ್ ತರಬೇತಿದಾರರಾಗಿದ್ದಾರೆ’ ಎಂದು ತಿಳಿಸಿದರು.

ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ‘ದೇಶದ ಅಭಿವೃದ್ದಿಗೆ ಮುನ್ನೋಟ ಒದಗಿಸುವುದರಲ್ಲಿ ಜನಗಣತಿ ಮಹತ್ವದ ಪಾತ್ರ ವಹಿಸುತ್ತದೆ. ಈಗಾಗಲೇ ಆರಂಭವಾಗಿರುವ ಸ್ವಯಂ ಜನಗಣತಿಗೆ ಏ.15ರವರೆಗೆ ಅವಕಾಶವಿದೆ. 16ರಿಂದ ಒಂದು ತಿಂಗಳು ನಿರಂತರವಾಗಿ ಮನೆ ಮನೆಗೆ ತೆರಳಿ ಗಣತಿ ಕಾರ್ಯ ನಡೆಸಬೇಕು. ಏನೇ ಗೊಂದಲಗಳಿದ್ದರೂ ಕೇಳಿ ಪರಿಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಮಾತನಾಡಿ, ‘ನಮ್ಮ ದೇಶದ ಹಿತದೃಷ್ಟಿಯಿಂದ ನಡೆಯುತ್ತಿರುವ ಜನಗಣತಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಮಾಡಬೇಕು. ನಾವು ಸಂಗ್ರಹಿಸುವ ದತ್ತಾಂಶವು ರಾಜಕೀಯ, ಆರ್ಥಿಕ, ಶೈಕ್ಷಣಿ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಸರ್ಕಾರಗಳು ನೀತಿಗಳನ್ನು ರೂಪಿಸಲು ಆಧಾರವಾಗಿರುತ್ತವೆ ಎಂಬುದನ್ನು ಮರೆಯಬಾರದು’ ಎಂದರು.

ನಗರಸಭೆ ಎಇಇಗಳಾದ ವಿಶ್ವನಾಥ್, ಸುಬ್ರಹ್ಮಣ್ಯ, ಕಂದಾಯ ನಿರೀಕ್ಷಕ ಆರ್. ನಾಗರಾಜು, ಲಕ್ಷ್ಮಿದೇವಿ, ಲೋಕೇಶ್ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-14-749128565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.