ಚನ್ನಪಟ್ಟಣ: ತಾಲ್ಲೂಕಿನ ಸೋಗಾಲಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅವ್ಯವಹಾರ ಆರೋಪದ ಮೇಲೆ ವಜಾಗೊಂಡಿದ್ದ ಮಾಜಿ ಸಿಇಒ ಹೇಮಲಿಂಗು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೆ ಕೆಲಸಕ್ಕೆ ಹಾಜರಾಗುವುದನ್ನು ವಿರೋಧಿಸಿ ಸಂಘದ ಸದಸ್ಯರು ಹಾಗೂ ಹಾಲು ಉತ್ಪಾದಕ ರೈತರು ಎಂಪಿಸಿಎಸ್ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರ ವಿರೋಧದ ನಡುವೆಯೂ ಪೊಲೀಸರ ಸಮ್ಮುಖದಲ್ಲಿ ಹೇಮಲಿಂಗು ಸಂಗದ ಸಿಇಒ ಆಗಿ ಮತ್ತೊಮ್ಮೆ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಪೊಲೀಸರ ಜೊತೆ ಮಧ್ಯಾಹ್ನದ ನಂತರ ಗ್ರಾಮಕ್ಕೆ ಬಂದ ಬಮುಲ್ ಅಧಿಕಾರಿಗಳು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಯಿತು. ಪೊಲೀಸರು ಮಧ್ಯಸ್ಥಿಕೆ ವಹಿಸಿ ಹೈಕೋರ್ಟ್ ಆದೇಶದ ತೋರಿಸಿ ಪ್ರತಿಭಟನಕಾರರಿಗೆ ಪರಿಸ್ಥಿತಿ ಅರ್ಥ ಮಾಡಿಸಲು ಪ್ರಯತ್ನಿಸಿದರು. ಪ್ರತಿಭಟನಕಾರರು ಅದಕ್ಕೂ ಸೊಪ್ಪು ಹಾಕದಿದ್ದಾಗ ಕೆಲವರನ್ನು ಬಂಧಿಸಿ ಅಕ್ಕೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಗ್ರಾಮದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದ ಕಾರಣ ಪೊಲೀಸರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದರು.

ಆರು ವರ್ಷಗಳ ಹಿಂದೆ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒ ಹುದ್ದೆಯಿಂದ ಹೇಮಲಿಂಗು ಅವರನ್ನು ವಜಾ ಮಾಡಲಾಗಿತ್ತು. ಆಗ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ, ಹಂಗಾಮಿ ಸಿಇಒ ನೇಮಕ ಮಾಡಲಾಗಿತ್ತು. ಹೇಮಲಿಂಗು ಹೈಕೋರ್ಟ್ ಮೊರೆ ಹೋಗಿದ್ದರು.

ಸಂಘದ ಸಿಇಒ ಹುದ್ದೆಯಲ್ಲಿ ಮುಂದುವರೆಯುವಂತೆ ಹೈಕೋರ್ಟ್ ಆದೇಶ ನೀಡಿದ್ದು ಮಂಗಳವಾರ ಸಂಘದ ಸಿಇಒ ಆಗಿ ಅಧಿಕಾರ ಸ್ವೀಕರಿಸಲು ಸಮಯ ನಿಗದಿಯಾಗಿತ್ತು. ಈ ವಿಚಾರ ತಿಳಿದಿದ್ದ ಸಂಘದ ಸದಸ್ಯರು ಪ್ರತಿಭಟನೆಗೆ ಇಳಿದರು. 22 ವರ್ಷ ಡೇರಿ ಸಿಇಒ ಆಗಿದ್ದ ಹೇಮಲಿಂಗು ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಅಕ್ರಮ ಪತ್ತೆ ಹಚ್ಚಿ ಹೇಮಲಿಂಗು ಅವರನ್ನು ವಜಾ ಮಾಡಿತ್ತು. ಮತ್ತೇ ಹೇಮಲಿಂಗು ಸಿಇಒ ಆಗುವುದು ಬೇಡ. ಅವರು ಅಧಿಕಾರ ಸ್ವೀಕರಿಸಲು ಬಿಡುಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.ಡೇರಿ ಸದಸ್ಯರಾದ ಸಿದ್ದೇಗೌಡ, ಮಲ್ಲೇಶ್, ಪಿ. ರಾಜು, ಚಂದ್ರಶೇಖರ್, ಪುಟ್ಟರಾಜು, ಎಂ.ಸಿ. ಕೃಷ್ಣ, ದೇವರಾಜು, ನಾಗೇಶ್, ಶಿವಲಿಂಗಮ್ಮ, ಮಮತಾ, ಸವಿತಾ. ಶಶಿಕಲಾ, ಗೌರಮ್ಮ, ದೀಪಿಕಾ, ಲಕ್ಷ್ಮಿ, ಕಮಲಮ್ಮ, ಪುಟ್ಟರಾಜು, ಪ್ರಕಾಶ್, ನಾಗರಾಜು, ಬೋರೇಗೌಡ, ಪುಟ್ಟಸ್ವಾಮಿ, ಮುತ್ತಾಚಾರ್, ಕೃಷ್ಣ, ವಿಜಿಕುಮಾರ್, ಚೇತನ್, ಪುಟ್ಟಸ್ವಾಮಿ, ಈರೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-14-936807624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.