ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಕೂಡ್ಲೂರು ಭಾಗದಲ್ಲಿದ್ದ ಒಂಟಿ ಸಲಗವೊಂದು ಸೋಮವಾರ ಬೆಳಿಗ್ಗೆ ಇಲ್ಲಿಯ ಹೌಸಿಂಗ್ ಬೋರ್ಡ್ ಬಡಾವಣೆಗೆ ನುಗ್ಗಿ ಸಂಜೆಯವರೆಗೂ ಭಾರಿ ದಾಂದಲೆ ನಡೆಸಿದೆ.

ಬೆಳಿಗ್ಗೆಯೇ ಹೌಸಿಂಗ್ ಬೋರ್ಡ್ ಬಡಾವಣೆಗೆ ನುಗ್ಗಿದ ಆನೆ ದಿಕ್ಕಾಪಾಲಾಗಿ ಓಡಾಡಿತು. ಕಾಂಪೌಂಡ್ ಹತ್ತಿಳಿಯಿತು. ನೆತ್ತಿ ಸುಡುವ ಬಿಸಿಲಿನಲ್ಲಿ ತಿರುಗಿ ಸುಸ್ತಾದಾಗ ಮನೆಗಳ ಪಕ್ಕದ ನೆರಳಿನಲ್ಲಿ ನಿಂತು ದಣಿವಾರಿಸಿಕೊಂಡಿತು. ಎದುರಿಗೆ ಬಂದ ಜನರನ್ನು ಅಟ್ಟಾಡಿಸಿಕೊಂಡು ಹೋಯಿತು. ಇದರಿಂದಾಗಿ ಬಡಾವಣೆ ಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಮನೆ ಎದುರಿಗೆ ಏಕಾಏಕಿ ಬಂದ ಕಾಡಾನೆ ಕಂಡು ಕುಸಿದು ಬಿದ್ದು ಗಾಯಗೊಂಡ ಗೀತಾ ಎಂಬವರನ್ನು ಚನ್ನಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಗುಡಿಸಲೊಂದರ ಮೇಲೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದು, ಒಳಗಿದ್ದ ಬಳ್ಳಾರಿಯ ರಾಮಪ್ಪ ಎಂಬವರಿಗೆ ಗಾಯವಾಗಿದೆ.

ಕೊಟ್ಟಿಗೆಯೊಂದಕ್ಕೆ ನುಗ್ಗಿ ಅಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಹೊಸಕಿ ಹಾಕಿದೆ. ಇಷ್ಟಕ್ಕೆ ಅದರ ಆಕ್ರೋಶ ತಣಿಯಲಿಲ್ಲ. ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರನ್ನು ಗುದ್ದಿ, ಕಾಲಿನಿಂದ ತುಳಿದು ಜಖಂಗೊಳಿಸಿದೆ. ನಂತರ ಮನೆಯೊಂದರ ಕಾಂಪೌಂಡ್ ಕೆಡವಿ ಹಾಕಿತು.

ಆನೆ ನಗರದತ್ತ ಬಂದ ಕುರಿತು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಆನೆ ಬಂದಿರುವ ಬಡಾವಣೆಗಳಲ್ಲಿ ಯಾರೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿತ್ತು.

ಬೆಳಿಗ್ಗೆ ಆನೆ ಹೌಸಿಂಗ್ ಬೋರ್ಡ್ ಬಡಾವಣೆಗೆ ನುಗ್ಗಿ ದಾಂದಲೆ ನಡೆಸಿರುವ ವಿಷಯ ಗೊತ್ತಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಸೆರೆಗೆ ಕಾರ್ಯತಂತ್ರ ರೂಪಿಸಿದರು. ಬಡಾವಣೆಯಿಂದ ಸುಣ್ಣಘಟ್ಟದ ಕಡೆಗೆ ತೆರಳಿದ ಕಾಡಾನೆಗೆ ಪಶುವೈದ್ಯ ರಮೇಶ್ ನೇತೃತ್ವದ ತಂಡ ಸಂಜೆ ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿತು.

ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆಯನ್ನು ರಾತ್ರಿ ಲಾರಿಯಲ್ಲಿ ಬಂಡೀಪುರಕ್ಕೆ ಸಾಗಿಸಲಾಯಿತು. ಕಾರ್ಯಾಚರಣೆಯಲ್ಲಿ ಡಿಸಿಎಫ್ ರಾಮಕೃಷ್ಣಪ್ಪ, ಚನ್ನಪಟ್ಟಣ ಆರ್ಎಫ್ಒ ಮಲ್ಲೇಶ್, ಆನೆ ಕಾರ್ಯಪಡೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.