ರಾಮನಗರ: ಚನ್ನಪಟ್ಟಣ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ (ಪಿಎಲ್ಐ) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (ಆರ್ಪಿಎಲ್ಐ) ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ (ಡೈರೆಕ್ಟ್ ಏಜೆಂಟ್) ನಿಯುಕ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 10ನೇ ತರಗತಿ (ಎಸ್ಎಸ್ಎಲ್ಸಿ) ಉತ್ತೀರ್ಣರಾಗಿರಬೇಕು. 18 ವರ್ಷದೊಳಗಿರುಬೇಕು. ಅಭ್ಯರ್ಥಿಗಳು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯವರಾಗಿರಬೇಕು. ಬೇರೆ ಯಾವುದೇ ವಿಮಾ ಸಂಸ್ಥೆ, ಕಂಪನಿ ಅಥವಾ ಸಂಘಗಳ ಪ್ರತಿನಿಧಿಯಾಗಿರಬಾರದು.

ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಪ್ರಮಾಣ ಪತ್ರ (ಎಸ್ಎಸ್ಎಲ್ಸಿ ಅಂಕಪಟ್ಟಿ), ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಇತ್ತೀಚಿನ 5 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಮೇ 13ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಚನ್ನಪಟ್ಟಣ ಅಂಚೆ ವಿಭಾಗ, ಚನ್ನಪಟ್ಟಣ ಈ ಕಚೇರಿಗೆ ನೇರ ಸಂದರ್ಶನಕ್ಕಾಗಿ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಚೆ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: 080-27251283/15 ಅಥವಾ 9986091640 ಸಂಪರ್ಕಿಸಬೇಕು ಎಂದು ಚನ್ನಪಟ್ಟಣ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-14-1935187751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.