ಹಾರೋಹಳ್ಳಿ: ತಾಲ್ಲೂಕಿನ ಮರಳವಾಡಿ ಹೋಬಳಿ ಚಿಕ್ಕಸಾದೇನಹಳ್ಳಿಯಲ್ಲಿ ಎರಡು ಎಕರೆ ರುದ್ರಭೂಮಿಯಲ್ಲಿ ವಿಲ್ಸನ್ ಗಾರ್ಡನ್ ಲಯನ್ಸ್ ಸೇವಾ ಫೌಂಡೇಷನ್ ವತಿಯಿಂದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಲಯನ್ 2ನೇ ಉಪ ರಾಜ್ಯಪಾಲ ಶಶಿಧರ್ ಗಂಜಿಗಟ್ಟಿ, ಪರಿಸರ ಸಂರಕ್ಷಣೆ ಮತ್ತು ಹಸಿರೀಕರಣದ ದೃಷ್ಟಿಯಿಂದ ಈ ಕಾರ್ಯ ಅತ್ಯಂತ ಮಹತ್ವದಾಗಿದೆ. ಸ್ಮಶಾನಗಳನ್ನು ಹಸಿರು ವನಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಕಾರ್ಯ ಕೈಗೊಳ್ಳಲಾಗಿದ. ಜನ ಸೇವೆಯಲ್ಲಿ ದೇವರನ್ನು ಕಾಣುವ ಲಯನ್ಸ್ ಸಂಸ್ಥೆ ಜಗತ್ತಿನ ಅತಿದೊಡ್ಡ ಸೇವಾ ಸಂಸ್ಥೆಯಾಗಿದೆ ಎಂದರು.

ಮಾಜಿ ಜಿಲ್ಲಾ ರಾಜ್ಯಪಾಲ ರೇಣುಕುಮಾರ್, ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರವೀಂದರ್ ಹಾಗೂ ಜಿಲ್ಲಾಧ್ಯಕ್ಷ ಮರಸಪ್ಪ ರವಿ ಮಾತನಾಡಿ, ಲಯನ್ಸ್ ಕ್ಯಾಂಪ್ನ ಸೇವಾ ಕಾರ್ಯಕ್ರಮಗಳು ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಶ್ಲಾಘನೀಯ. ಸಮಾಜ ಸೇವೆಗೆ ಫೌಂಡೇಷನ್ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಚಿಕ್ಕಸಾದೇನಹಳ್ಳಿ ರುದ್ರಭೂಮಿಯಲ್ಲಿ ಗ್ರಾಮ ಪಂಚಾಯಿತಿಯಿಂದ ನೀರಿನ ಸೌಲಭ್ಯ ಒದಗಿಸಿದರೆ, ಸಂಸ್ಥೆ ವತಿಯಿಂದ ಕಲ್ಲಿನ ಆಸನ, ಶೌಚಾಲಯ, ವನ ನಿರ್ಮಾಣದಂತಹ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಗ್ರಾಮೀಣ ಜನರ ಅನುಕೂಲಕ್ಕಾಗಿ ಈಗಾಗಲೇ ಕರಿಕಲ್ದೊಡ್ಡಿ ಸರ್ಕಾರಿ ಶಾಲೆ ಹಾಗೂ ಬಾದಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ದತ್ತು ಪಡೆಯಲಾಗಿದೆ ಎಂದರು.

ಜಿಇಟಿ ಸದಸ್ಯ ಕಾರ್ಯದರ್ಶಿ ಲೀಲಾವತಿ ರವೀಂದರ್, ಕಾಂಗ್ರೆಸ್ ಮುಖಂಡರಾದ ಈಶ್ವರ್, ಅಶ್ವಥ್ ನಾರಾಯಣ್, ಶಿಡ್ರಯ್ಯ, ವಿ. ನಾಗರಾಜು, ಕುನ್ನಪ್ಪ, ಮಾದಯ್ಯ, ಸಿ.ಎಸ್. ಲೋಕೇಶ್, ಲಕ್ಷ್ಮಿಕಾಂತ್ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-14-677922620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.