ಬಿಡದಿ (ರಾಮನಗರ): ಜಿಲ್ಲೆಯ ಗಮನ ಸೆಳೆದಿದ್ದ ಇಲ್ಲಿನ ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ನಡೆದಿದ್ದ ದಂಪತಿಯ ಜೋಡಿ ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎರಡನೇ ಆರೋಪಿ ರವಿಕುಮಾರ್ ಯಾದವ್ (29) ಎಂಬಾತನನ್ನು ಬಿಡದಿ ಠಾಣೆ ಪೊಲೀಸರು ಗುಜರಾತ್ನ ಗಿರಿಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

ಈಗಲ್ಟನ್ ವಿಲ್ಲಾದಲ್ಲಿ ವಾಸವಾಗಿದ್ದ ರಘು ರಾಜನ್ ಮತ್ತು ಪತ್ನಿ ಆಶಾ ರಾಜನ್ ದಂಪತಿಯನ್ನು ಅವರ ಮನೆಯಲ್ಲಿ ಕೆಲಸಕ್ಕಿದ್ದ ಜೋಗಿಂದರ್ ಯಾದವ್ ಮತ್ತು ರವಿಕುಮಾರ್ ಯಾದವ್ 2022ರ ಫೆ. 8ರಂದು ಕೊಲೆ ಮಾಡಿದ್ದರು. ನಂತರ, ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊದಲ ಆರೋಪಿ ಜೋಗಿಂದರ್ನನ್ನು ಬಂಧಿಸಿದ್ದರು. ಎರಡನೇ ಆರೋಪಿಯಾದ ಬಿಹಾರದ ರವಿಕುಮಾರ್ ಗುಜರಾತ್ನಲ್ಲಿ ತಲೆ ಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೊಲೀಸರು ಹುಡುಕಾಡಿದ್ದರೂ ಪತ್ತೆಯಾಗಿರಲಿಲ್ಲ. ಕಡೆಗೆ ನಾಲ್ಕು ವರ್ಷದ ನಂತರ ಆರೋಪಿ ಕುರಿತು ಸಿಕ್ಕ ಸುಳಿವಿನ ಮೇರೆಗೆ ಗುಜರಾತ್ನಲ್ಲಿ ಬಂಧಿಸಿದ್ದಾರೆ.

ಜೋಡಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ಠಾಣೆಯ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಅವರು ಹೆಚ್ಚಿನ ನಿಗಾ ವಹಿಸಿದ್ದರು. ಆರೋಪಿ ಗುಜರಾತ್ ರಾಜ್ಯದಲ್ಲಿ ಇರುವುದು ಗೊತ್ತಾಗುತ್ತಿದಂತೆ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ನೇತೃತ್ವದ ಪಿಎಸ್ಐಗಳಾದ ಅಣ್ಣಯ್ಯ, ಏಕಾಂಬರೇಶ್ವರ, ಸಿಬ್ಬಂದಿಗಳಾದ ಲಿಂಗರಾಜು, ಕಾಂತರಾಜು, ಅನ್ವರ್ ಬೀಡಿ ಅವರ ತಂಡವು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-18-1513869824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.