
ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಿ ರೈತರ ಜೀವಕ್ಕೆ ಭದ್ರತೆ ನೀಡಿ, ಬೆಳೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಜನರ ಸಮಸ್ಯೆಗಳಿಗೆ ದನಿಯಾಗಿ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಸಹ ಸೋತಿದ್ದಾರೆ. ನಮ್ಮ ರೈತರನ್ನು ದೇವರೇ ಕಾಪಾಡಬೇಕುಕೆ. ಮಲ್ಲಯ್ಯ, ರಾಜ್ಯ ಉಪಾಧ್ಯಕ್ಷ, ರೈತ ಸಂಘ, ಚನ್ನಪಟ್ಟಣ
ಕಾಡಾನೆಗಳನ್ನು ಹಿಡಿದು ಬಂಡೀಪುರ ಅಥವಾ ನಾಗರಹೊಳೆಗೆ ಬಿಟ್ಟರೂ, ಮತ್ತೆ ವಾಪಸ್ ಬರುತ್ತಿವೆ. ಹಾಗಾಗಿ, ಜಿಲ್ಲೆಯಲ್ಲೇ ಆನೆ ಶಿಬಿರ ಆರಂಭಿಸಬೇಕು. ಹಿಡಿದ ಆನೆಗಳನ್ನು ಇಲ್ಲಿಯೇ ಪಳಗಿಸಬೇಕು. ಇಲ್ಲದಿದ್ದರೆ, ರೈತರ ಜೀವ ಮತ್ತು ಬೆಳೆಹಾನಿಗೆ ಕೊನೆ ಇರುವುದಿಲ್ಲಸಿ. ಪುಟ್ಟಸ್ವಾಮಿ, ರೈತ ಮುಖಂಡ, ಚನ್ನಪಟ್ಟಣ
ಸರ್ಕಾರದ ಮಟ್ಟದಲ್ಲಿ ಈಗ ಕಾಡಾನೆಗಳಿಗೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಮಿತಿ ಮೀರಿರುವ ಆನೆಗಳ ಸಂತತಿ ನಿಯಂತ್ರಣಕ್ಕೆ ಇದು ಸೂಕ್ತ ತೀರ್ಮಾನ. ಆದಷ್ಟು ಬೇಗ ಅದನ್ನು ಅನುಷ್ಠಾನಗೊಳಿಸಬೇಕು ಚೀಲೂರು ಮುನಿರಾಜು, ರಾಜ್ಯ ಸಂಚಾಲಕ, ರೈತ ಸಂಘದ ಯುವ ಘಟಕ, ಹಾರೋಹಳ್ಳಿ
ಕಾಡಂಚಿನ ಗ್ರಾಮಗಳಲ್ಲಿನ ರೈತರು ಕಾಡಾನೆ ಹಾವಳಿಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬಿಟ್ಟು, ಬೆಂಗಳೂರಿಗೆ ಉದ್ಯೋಗ ಅರಸಿ ವಲಸೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ ನಲ್ಲಹಳ್ಳಿ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ, ರೈತ ಸಂಘ, ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.