ರಾಮನಗರ: ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಪೂರಕವಾಗಬಲ್ಲ ‘ಆನೆ ಕ್ಯಾಂಪ್’ ಯೋಜನೆಯು ನನೆಗುದಿಗೆ ಬಿದ್ದಿದೆ. ನಾಡಿಗೆ ಬಂದು ಜನರ ಸಾವು–ನೋವು ಜೊತೆಗೆ ಬೆಳೆ ಹಾನಿ ಮಾಡುವ ಪುಂಡಾನೆಗಳನ್ನು ಹಿಡಿದು ಪಳಗಿಸುವ ಉದ್ದೇಶದ ಈ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಇಲಾಖೆ ಮೀನ ಮೇಷ ಎಣಿಸುತ್ತಿದೆ.

ಕಾಡಾನೆಗಳು ರೈತರ ಜಮೀನು ಹಾಗೂ ಜನವಸತಿ ಪ್ರದೇಶಗಳಿಗೆ ಬಾರದಂತೆ ಅರಣ್ಯ ಇಲಾಖೆ ಈಗಾಗಲೇ ಆನೆ ನಿರೋಧಕ ಕಂದಕ, ತಡೆಗೋಡೆ, ರೈಲ್ವೆ ಬ್ಯಾರಿಕೇಡ್, ಸೌರಶಕ್ತಿ ವಿದ್ಯುತ್ ಬೇಲಿ ನಿರ್ಮಾಣದಂತಹ ಕ್ರಮಗಳನ್ನು ಕೈಗೊಂಡಿದೆ. ಆದರೂ, ನಿಯಂತ್ರಣಕ್ಕೆ ಬಾರದ ಆನೆ ಹಾವಳಿ ತಡೆಗೆ ‘ಆನೆ ಕ್ಯಾಂಪ್’ ಆರಂಭದ ಪರಿಹಾರ ಕೇಳಿ ಬಂದಿತ್ತು. ಈ ಕುರಿತು ರೈತರು ಸಹ ದನಿ ಎತ್ತಿ ಇಲಾಖೆಯನ್ನು ಒತ್ತಾಯಿಸಿದ್ದರು.

ಭರವಸೆ ನೀಡಿದ್ದ ಸಚಿವ: ಕಾಡಾನೆ ಹಾವಳಿಯಿಂದಾದ ಸಾವು–ನೋವು ಹಾಗೂ ಬೆಳೆಹಾನಿ ಖಂಡಿಸಿ ರೈತರ ಹೋರಾಟ ಕಳೆದ ವರ್ಷದ ಜನವರಿಯಲ್ಲಿ ತೀವ್ರಗೊಂಡಿತ್ತು. ಆಗ ಜಿಲ್ಲೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಗೆ ಭೇಟಿ ನೀಡಿದ್ದರು. ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಕಾಡಾನೆ ಕಾಟ ಹೆಚ್ಚಾಗಿದ್ದ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿಯಲ್ಲಿ ರೈತರೊಂದಿಗೆ ಸಭೆ ಮತ್ತು ಸಂವಾದ ನಡೆಸಿದ್ದರು. ಸಭೆಯಲ್ಲಿದ್ದ ಶಾಸಕರಾದ ಸಿ.ಪಿ. ಯೋಗೇಶ್ವರ್, ಎಚ್.ಎ. ಇಕ್ಬಾಲ್ ಹುಸೇನ್, ರು, ‘ಭದ್ರಾ ಅಭಯಾರಣ್ಯದಲ್ಲಿ ಆನೆಗಳ ವಿಹಾರಧಾಮ ಘೋಷಿಸಿರುವಂತೆ, ರಾಮನಗರ ಜಿಲ್ಲೆಯ ಮುತ್ತತ್ತಿ ಅಥವಾ ನೇರಳಹಟ್ಟಿ ಬಳಿ ಆನೆ ವಿಹಾರಧಾಮ ಆರಂಭಿಸಬೇಕು. ಇದರಿಂದ ಕಾಡಾನೆಗಳ ಹಾವಳಿಗೆ ಕಡಿವಾಣ ಬೀಳಲಿದೆ’ ಎಂದು ಸಚಿವರಿಗೆ ಮನವಿ ಮಾಡಿದ್ದರು.

ಅದಕ್ಕೆ ಸಚಿವರು, ‘ಕಾವೇರಿ ನದಿ ಭಾಗದಲ್ಲಿ ₹50 ಕೋಟಿ ವೆಚ್ಚದಲ್ಲಿ ಆನೆ ವಿಹಾರಧಾಮ ಆರಂಭಿಸಲಾಗುವುದು. ಅದಕ್ಕೆ ಸ್ಥಳ ಪರಿಶೀಲಿಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ನಿಮ್ಮ ಬೇಡಿಕೆಗೆ ಸ್ಪಂದಿಸಿ ವಿಹಾರಧಾಮ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ವಿಹಾರಧಾಮ ಅಥವಾ ಕ್ಯಾಂಪ್ ಆರಂಭದ ಬಗ್ಗೆ ಇಲಾಖೆ ತುಟಿ ಬಿಚ್ಚಿಲ್ಲ.

ಕ್ಯಾಂಪ್ನಿಂದ ಪರಿಹಾರ: ‘ಕಾವೇರಿ ನದಿ ದಡದ ಮುತ್ತತ್ತಿಯಲ್ಲಿ ಆನೆ ಕ್ಯಾಂಪ್ ಸ್ಥಾಪನೆಯಾದರೆ ಬೆಂಗಳೂರು ದಕ್ಷಿಣ ಜಿಲ್ಲೆಯಷ್ಟೇ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ಕಾಡಾನೆಗಳ ಉಪಟಳಕ್ಕೂ ಪರಿಹಾರ ಸಿಗಲಿದೆ. ಆನೆಗಳನ್ನು ಹಿಡಿದು ಕ್ಯಾಂಪ್ಗೆ ತಂದು ಪಳಗಿಸುವುದರಿಂದ ನಾಡಿಗೆ ಬರುವ ಆನೆಗಳ ಸಂಖ್ಯೆ ತಗ್ಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ. ನಾಡಿಗೆ ಬಂದ ಕಾಡಾನೆಗಳನ್ನು ಎಷ್ಟೇ ಕಾರ್ಯಾಚರಣೆ ನಡೆಸಿ ಮರಳಿ ಕಾಡಿಗೆ ಓಡಿಸಿದರೂ ವಾಪಸ್ ಬರುತ್ತಿವೆ. ಸಾವು–ನೋವಿಗೆ ಕಾರಣವಾಗುವ ಮತ್ತು ಹೆಚ್ಚಿನ ಬೆಳೆ ಹಾನಿ ಮಾಡುವ ಪುಂಡಾನೆಗಳನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟರೂ ಸಮಸ್ಯೆಗೆ ಮಾತ್ರ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಜಿಲ್ಲೆಯಲ್ಲಿ ಆನೆ ಕ್ಯಾಂಪ್ ಆರಂಭ ಕುರಿತು ಪ್ರತಿಕ್ರಿಯೆ ಪಡೆಯಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಮುತ್ತತ್ತಿಯಲ್ಲಿ ಆನೆ ಕ್ಯಾಂಪ್ ಆರಂಭಿಸಿದರೆ ಪುಂಡಾನೆಗಳನ್ನು ಹಿಡಿದು ಕ್ಯಾಂಪ್ನಲ್ಲಿ ಪಳಗಿಸಬಹುದಾಗಿದೆ. ಕ್ಯಾಂಪ್ ಅನ್ನು ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಪಡಿಸಲು ಅವಕಾಶವಿದೆ. ಇದರಿಂದ ಸಾವು–ನೋವು ತಗ್ಗುವ ಜೊತೆಗೆ ಬೆಳೆ ಹಾನಿಯೂ ತಪ್ಪಲಿದೆ
ಸಿ. ಪುಟ್ಟಸ್ವಾಮಿ, ರೈತ ಮುಖಂಡ, ಚನ್ನಪಟ್ಟಣ

ರಾಜ್ಯದಲ್ಲಿವೆ ನಾಲ್ಕು ಕ್ಯಾಂಪ್

ರಾಜ್ಯದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್, ಕೊಡಗು ಜಿಲ್ಲೆಯ ದುಬಾರೆ, ಮೈಸೂರು ಜಿಲ್ಲೆಯ ನಾಗರಹೊಳೆಯ ಬಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಫನ್ಸೋಲಿಯಲ್ಲಿ ಆನೆ ಕ್ಯಾಂಪ್ಗಳಿವೆ.

ರಾಜ್ಯದ ಯಾವುದೇ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡರೆ ಈ ಶಿಬಿರಗಳಲ್ಲಿರುವ ಸಾಕಾನೆಗಳನ್ನು ಕರೆಯಿಸಿ ಪುಂಡಾನೆಗಳನ್ನು ಹಿಡಿದು ಮರಳಿ ಕಾಡಿಗೆ ಬಿಡಲಾಗುತ್ತದೆ. ಆದರೆ, ಆನೆಗಳು ಕೆಲ ವಾರಗಳ ನಂತರ ಮತ್ತೆ ತಮ್ಮ ಆವಾಸ ಸ್ಥಾನಕ್ಕೆ ಬಂದು ತಮ್ಮ ಹಾವಳಿ ಮುಂದುವರಿಸುತ್ತವೆ.

ಸಮಸ್ಯೆ ಇರುವೆಡೆ ಇಲ್ಲ

ಸದ್ಯ ಬೆಂಗಳೂರು ದಕ್ಷಿಣ (ರಾಮನಗರ), ಬೆಂಗಳೂರು ಉತ್ತರ (ಗ್ರಾಮಾಂತರ) ಜಿಲ್ಲೆಯಲ್ಲಿ ಆನೆಗಳ ಹಾವಳಿ ವಿಪರೀತವಾಗಿದೆ. ಜೊತೆಗೆ ಮಂಡ್ಯ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲೂ ಕಾಡಾನೆಗಳ ಕಾಟವಿದೆ. ಸದ್ಯ ರಾಜ್ಯದಲ್ಲಿರು 4 ಆನೆ ಕ್ಯಾಂಪ್ಗಳು ಆನೆ ಹಾವಳಿ ಇರುವ ಈ ಭಾಗದ ಜಿಲ್ಲೆಗಳಿಂದ ದೂರ ಇವೆ.

ಇಲ್ಲಿ ಸಾವು–ನೋವು ಸಂಭವಿಸಿದರೆ ಕೂಡಲೇ ಮೈಸೂರು ಅಥವಾ ಕೊಡಗಿನ ಯಾವುದಾದರೂ ಕ್ಯಾಂಪಿನಿಂದ ಸಾಕಾನೆಗಳು ಹಾಗೂ ವೈದ್ಯರ ತಂಡ ಕರೆಯಿಸಿ ಆನೆ ಸೆರೆ ಕಾರ್ಯಾಚರಣೆ ನಡೆಸಿ, ಮರಳಿ ಕಾಡಿಗೆ ಬಿಡಬೇಕಾದ ಸ್ಥಿತಿ ಇದೆ. ಅದರ ಬದಲು ಸ್ಥಳೀವಾಗಿಯೇ ಮುತ್ತತ್ತಿಯಲ್ಲಿ ಕ್ಯಾಂಪ್ ಆರಂಭಿಸಿದರೆ ಹೆಚ್ಚು ಅನುಕೂಲವಾಗುತ್ತದೆ.

ನಿರ್ವಹಣೆಗೆ ಬೇಕು ಕೋಟಿ!

ಕಾಡಾನೆಗಳ ಕ್ಯಾಂಪ್ ಆರಂಭಿಸಿದರೆ ಅದರ ನಿರ್ವಹಣೆಗೂ ಹೆಚ್ಚು ವೆಚ್ಚವಾಗಲಿದೆ. ಕನಿಷ್ಠ 20 ಆನೆಗಳ ಕ್ಯಾಂಪ್ ಆರಂಭಿಸಿದರೆ, ಒಂದು ಆನೆ ನಿರ್ವಹಣೆಗೆ ವರ್ಷಕ್ಕೆ ಅಂದಾಜು ₹20 ಲಕ್ಷ ತಗುಲಬಹುದು. ಆಹಾರ, ವೈದ್ಯಕೀಯ ವೆಚ್ಚ, ಮಾವುತರು, ಕಾವಾಡಿಗಳು, ಇತರ ಸಿಬ್ಬಂದಿ ಸಂಬಳ, ಶಿಬಿರ ನಿರ್ವಹಣೆ ಸೇರಿದಂತೆ ಎಲ್ಲವನ್ನೂ ಸೇರಿಸಿದರೆ ವರ್ಷಕ್ಕೆ ಸುಮಾರು ₹5 ಕೋಟಿ ವೆಚ್ಚವಾಗಬಹುದು.

ಕ್ಯಾಂಪ್ನ ಸಾಮರ್ಥ್ಯ ಆಧರಿಸಿ ನಿರ್ವಹಣಾ ವೆಚ್ಚವೂ ಏರಿಕೆಯಾಗಲಿದೆ. ಕ್ಯಾಂಪ್ ಆರಂಭಕ್ಕೆ ಮುಂಚೆ ಇವೆಲ್ಲವನ್ನೂ ಲೆಕ್ಕಾಚಾರ ಮಾಡಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಖಂಡ್ರೆ ವಿರುದ್ಧ ಸಿಪಿವೈ ಬೇಸರ

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಿಂದೆಯೇ ಅಧಿಕಾರಿಗಳು ಮತ್ತು ರೈತ ಮುಖಂಡರ ಜೊತೆ ಚನ್ನಪಟ್ಟಣದಲ್ಲಿ ಸಭೆ ನಡೆಸಿದ್ದ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಮುತ್ತತ್ತಿ ಬಳಿ ಆನೆ ಕ್ಯಾಂಪ್ ಸ್ಥಾಪನೆ ಕುರಿತು ಮೊದಲಿಗೆ ಪ್ರಸ್ತಾಪಿಸಿದ್ದರು.

ಅದಕ್ಕೆ ಅನುಮತಿ ಕೊಡಿಸುವ ಜವಾಬ್ದಾರಿ ಸಹ ಹೊತ್ತಿದ್ದರು. ನಂತರ, ರೈತರು ಸಹ ಈ ಬಗ್ಗೆ ದನಿ ಎತ್ತತೊಡಗಿದ್ದರು. ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರೂ ಪೂರಕವಾಗಿ ಸ್ಪಂದಿಸಿದ್ದರು. ಆದರೆ, ಭರವಸೆ ಈಡೇರಲಿಲ್ಲ. ಈ ಬಗ್ಗೆ ಯೋಗೇಶ್ವರ್ ಅವರು ಸಚಿವರ ಬಗ್ಗೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು.

‘ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಬಗ್ಗೆ ಭರವಸೆ ನೀಡಿದ್ದ ಅರಣ್ಯ ಸಚಿವ ಖಂಡ್ರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಸಮಸ್ಯೆಗೆ ಪರಿಹಾರ ನೀಡುವಂತೆ ಸಚಿವರಿಗೆ ಮೂರ್ನಾಲ್ಕು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ನಮ್ಮ ಪ್ರಯತ್ನಕ್ಕೆ ಯಾವುದೇ ಫಲ ಸಿಗುತ್ತಿಲ್ಲ. ಈ ವಿಷಯವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೆ ತರುತ್ತೇನೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.