ಬಿಡದಿ (ರಾಮನಗರ): ‘ನಾನಿಲ್ಲಿಗೆ ಷೋ ಕೊಟ್ಟು ಹೋಗಲು ಬಂದಿಲ್ಲ. ರೈತರ ಅಸ್ತಿತ್ವ ಮತ್ತು ಸ್ವಾಭಿಮಾನದ ಈ ಹೋರಾಟದುದ್ದಕ್ಕೂ ಜೊತೆಗಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವೆ. ಕಾನೂನು ಹೋರಾಟಕ್ಕೂ ಜೊತೆಯಾಗಿರುವೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ಇಲ್ಲಿನ ಬೈರಮಂಗಲದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬೆಂಬಲಿಸಿ, ಯೋಜನಾ ಪ್ರದೇಶದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿ ಅವರು ಮಾತನಾಡಿದರು.

‘ಟೌನ್ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು 440 ದಿನಗಳಿಂದ ಬೀದಿಯಲ್ಲಿದ್ದಾರೆ. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿ.ಎಂ ಕುರ್ಚಿಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೇನಾ ಈ ಜಿಲ್ಲೆಯ ಮಗನ ರೈತಪರ ಕಾಳಜಿ’ ಎಂದು ಪ್ರಶ್ನಿಸಿದರು.

ಚೊಂಬು ಕೊಡುತ್ತಿದ್ದಾರೆ: ‘ನಮ್ಮ ಕುಟುಂಬ ರಾಮನಗರ ಜಿಲ್ಲೆಯಲ್ಲಿ ಜನಿಸದಿರಬಹುದು. ಆದರೆ, ಜಿಲ್ಲೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಮ್ಮ ಕುಟುಂಬ ಕಾರಣ. ಎಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಇಲ್ಲಿ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದಾರೆ. ಆದರೆ, ಜನರಿಂದ ಬೇಡಿ ಪೆನ್ನು– ಪೇಪರ್ ಪಡೆದವರು ಈಗ ರೈತರಿಗೆ ಚೊಂಬು ಕೊಡುತ್ತಿದ್ದಾರೆ. ಸ್ಥಳೀಯ ಶಾಸಕರೂ ಸಹ ಇತ್ತ ತಿರುಗಿ ನೋಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ರೈತರು ಭರವಸೆ ಕಳೆದುಕೊಳ್ಳಬಾರದು. ಹೋರಾಟದ ಕಿಚ್ಚು ಹೀಗೆಯೇ ಇರಲಿ. ಇದು ಈ ನೆಲದ ಅನ್ನದಾತರ ಬದುಕಿನ ಪ್ರಶ್ನೆ. ಟೌನ್ಶಿಪ್ ಯೋಜನೆಯಿಂದ ರೈತರ ಬದುಕು ಬೀದಿಗೆ ಬರುತ್ತದೆ ಎಂದು ಗೊತ್ತಿದ್ದರೂ, ಕಾಂಗ್ರೆಸ್ ನಾಯಕರಿಗೆ ಇದು ಪ್ರತಿಷ್ಠೆಯಾಗಿದೆ. ಆದರೆ, ಜನರಿಗೆ ಇದು ಅಸ್ತಿತ್ವದ ಪ್ರಶ್ನೆ ಎಂಬುದನ್ನು ಮರೆತಿದ್ದಾರೆ’ ಎಂದು ಟೀಕಿಸಿದರು.

ಕೃಷಿಕರನ್ನು ನೋಡಬನ್ನಿ: ‘ಯೋಜನಾ ಪ್ರದೇಶದಲ್ಲಿ ಕೃಷಿಕರೇ ಇಲ್ಲ ಎನ್ನುವ ಉಪ ಮುಖ್ಯಮಂತ್ರಿ ಅವರು ಯೋಜನಾ ಪ್ರದೇಶಕ್ಕೆ ಒಮ್ಮೆ ಬಂದು ನೋಡಲಿ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೂಲಿ ಮಾಡಿ ಬದುಕುತ್ತಿರುವವರ ಮಾತು ಆಲಿಸಲಿ. ದಲ್ಲಾಳಿಗಳು ಸೇರಿದಂತೆ ಕೆಲವರನ್ನು ಕಟ್ಟಿಕೊಂಡು ಯೋಜನೆಗೆ ಬಹುತೇಕ ಭೂ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಅವರಿಗೆ ಇಲ್ಲಿಗೆ ಬಂದರೆ ವಾಸ್ತವ ಗೊತ್ತಾಗಲಿದೆ’ ಎಂದು ನಿಖಿಲ್ ಸವಾಲು ಹಾಕಿದರು.

ಮಾಜಿ ಶಾಸಕ ಎ. ಮಂಜುನಾಥ್ ಮಾತನಾಡಿ, ‘ರೈತರ ಪರವಾಗಿ ಮಾಜಿ ಪ್ರಧಾನಿ ಮೊಮ್ಮಗ ನ್ಯಾಯ ಕೇಳಿದರೆ ಚಿಕ್ಕವನು, ರಾಜಕೀಯ ಅನುಭವವಿಲ್ಲ ಎಂದು ಟೀಕಿಸುತ್ತಾರೆ. ಅವರ ಹಿನ್ನೆಲೆಗೆ ಬೇಕಾದಂತೆ ಇರಬಹುದಿತ್ತು. ಆದರೆ, ಎಲ್ಲವನ್ನೂ ಬಿಟ್ಟು ರೈತರ ಬದುಕು ಉಳಿಸಲು ಇಲ್ಲಿಗೆ ಬಂದಿದ್ದಾರೆ. ರೈತರ ಭೂಮಿ ಉಳಿಸಲು ನಾವು ಜೈಲಿಗೆ ಹೋಗುವುದಕ್ಕೂ ಸಿದ್ದವಾಗಿದ್ದೇವೆ’ ಎಂದರು.

ಸಿ.ಎಚ್. ಜಯಮುತ್ತು, ಸಬ್ಬಕೆರೆ ಶಿವಲಿಂಗಪ್ಪ, ರಾಮಯ್ಯ, ಶ್ರೀನಿವಾಸ್ ರೆಡ್ಡಿ, ನಾಗರಾಜು ಮಂಡಲಹಳ್ಳಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-14-211271511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.