ಕನಕಪುರ: ಬೆಂಗಳೂರು ಹೊರವಲಯದಲ್ಲಿ ನಿರ್ಮಾಣ ಆಗಲಿರುವ ಸೆಟಲೈಟ್ ರಿಂಗ್ ರೋಡ್ (ಎಸ್ಟಿಆರ್ಆರ್) ಯೋಜನೆಗೆ ಭೂಮಿ ಕೊಡುವುದಿಲ್ಲ. ಕೇಂದ್ರ ಸರ್ಕಾರವು ಈ ಯೋಜನೆಯನ್ನು ರದ್ದುಗೊಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಶುಕ್ರವಾರ ಸಭೆ ನಡೆಸಿದ ಮುಖಂಡರು, ಬೆಂಗಳೂರು ಒತ್ತಡವನ್ನು ಕಡಿಮೆ ಮಾಡಿ ಸುಲಭ ಸಾರಿಗೆ ಸಂಪರ್ಕ ಕಲ್ಪಿಸಲು ಬೆಂಗಳೂರು ಹೊರವಲಯದಲ್ಲಿ ಎಸ್ಟಿಆರ್ಆರ್ ಯೋಜನೆಯು 2018ರಲ್ಲಿ ಜಾರಿಗೊಂಡು ಭೂಸ್ವಾಧೀನ ಮಾಡಿತು. ಇದುವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ ಎಂದು ರೈತರು ಆರೋಪಿಸಿದರು.

ಕೇಂದ್ರ ಸರ್ಕಾರ ಭಾರತ್ ಮಾಲಾ ಪರಿ ಯೋಜನೆಯಡಿ ಎಸ್ಟಿಆರ್ಆರ್ ಯೋಜನೆಗೆ ರೈತರ ಭೂಮಿ ಅತ್ಯಂತ ಕಡಿಮೆ ಮಾರುಕಟ್ಟೆ ಬೆಲೆಗೆ ಭೂಸ್ವಾಧೀನಪಡಿಸಿಕೊಂಡಿತು. ಆದರೆ, ಇದುವರೆಗೂ ಭೂ ಪರಿಹಾರ ನೀಡಿಲ್ಲ ಎಂದು ದೂರಿದರು.

ಸರ್ಕಾರ ಯೋಜನೆಯಡಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಭೂಮಿ ಬೆಲೆಯು ಪ್ರಸ್ತುತ 1ಗುಂಟೆಗೆ ₹20ಲಕ್ಷ ಆಗಿದೆ. ಸರ್ಕಾರ ಎಕರೆಗೆ ₹20ಲಕ್ಷ ಪರಿಹಾರ ಘೋಷಣೆ ಮಾಡಿದ್ದು ಈಗ ಅದರಿಂದ ಒಂದು ಗುಂಟೆ ಜಮೀನು ಖರೀದಿ ಮಾಡಲು ಆಗುವುದಿಲ್ಲ. ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ, ಏನು ಪ್ರಯೋಜನವಾಗಿಲ್ಲ ಎಂದರು.

ಈ ಯೋಜನೆಯ 288 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಬೆಂಗಳೂರು ಉತ್ತರ ಭಾಗದಲ್ಲಿ ಯೋಜನೆ ಅನುಷ್ಠಾನಗೊಂಡಿದೆ. 120 ಕಿ.ಲೋ ಮೀಟರ್ ಕಾಮಗಾರಿ ಆಗಿದೆ. ದಕ್ಷಿಣ ಭಾಗದ ದಾಬಸ್ಪೇಟೆಯಿಂದ ಮಾಗಡಿ, ಕನಕಪುರ, ಹೊಸೂರು, ಆನೇಕಲ್ ಈ ಭಾಗದಲ್ಲಿ 168 ಕಿ.ಲೋ ಮೀಟರ್ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ದೂರಿದರು.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಸಂಸದರಾದ ಸೋಮಣ್ಣ, ಡಾ. ಮಂಜುನಾಥ್ ಅವರಲ್ಲಿ ರೈತರ ಸಮಸ್ಯೆ ತಿಳಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ್ದೇವೆ. ಆದರೂ, ಏನು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭೂಸ್ವಾಧೀನಕ್ಕೆ ಒಳಪಡುತ್ತಿರುವ ರೈತ ಮುಖಂಡರಾದ ಭರತ್ ಗೌಡ, ನಾರಾಯಣಗೌಡ, ಪುಟ್ಟಸ್ವಾಮಿ, ಶ್ರೀಧರ್, ಮನಮೋಹನ್, ಜಿ.ಎಸ್.ವೆಂಕಟೇಶ್, ಗೋಪಾಲ್ ಗೌಡ, ಶಿವಲಿಂಗಯ್ಯ ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-14-1561509757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.