ರಾಮನಗರ: ‘ಆಕಸ್ಮಿಕ ಬೆಂಕಿ ಅವಘಡ ಸಂಭವಿಸದಂತೆ ಮನೆ ಮತ್ತು ಕಟ್ಟಡಗಳ ಮಾಲೀಕರು ಹಾಗೂ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಅಗ್ನಿ ಅನಾಹುತದಲ್ಲಿ ಯಾವುದೇ ಸಾವು-ನೋವು ಮತ್ತು ನಷ್ಟ ತಡೆಯಬಹುದು’ ಎಂದು ರಾಮನಗರ ಅಗ್ನಿಶಾಮಕ ಠಾಣಾಧಿಕಾರಿ ಪ್ರೇಮಾನಂದ್ ಹೇಳಿದರು.

ನಗರದ ಶ್ರೀ ಕನ್ನಿಕಾ ಮಹಲ್ನಲ್ಲಿ ವಾಸವಿ ಕ್ಲಬ್ ರಾಮನಗರ ಆಯೋಜಿಸಿದ್ದ ಅಗ್ನಿ ಆಕಸ್ಮಿಕ ಸಂದರ್ಭಗಳಲ್ಲಿ ನಾಗರಿಕರು ವಹಿಸಬೇಕಾದ ಪಾತ್ರಗಳು ಮತ್ತು ಮುಂಜಾಗ್ರತಾ ಕ್ರಮಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ನೆರೆಹೊರೆಯವರು ಸಹ ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.

ಅಗ್ನಿಶಾಮಕರಾದ ಮುತ್ತಣ್ಣ, ರಮೇಶ್ ಎಂ.ಎಂ. ಹಾಗೂ ಮಹೇಶ್ ಪೂಜಾರಿ ಅವರು ಅಗ್ನಿ ನಂದಿಸುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಜನರೇ ಅಗ್ನಿಶಾಮಕದ ಮೂಲಕ ಸ್ವತಃ ಬೆಂಕಿ ನಂದಿಸುವುದು ಹೇಗೆ ಎಂದು ತೋರಿಸಿಕೊಟ್ಟರು. ಪೆಟ್ರೋಲ್, ಡೀಸೆಲ್ ಮುಂತಾದ ಘಟಕಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಫೋಮ್ ಮತ್ತು ನೀರು ಬಳಸಿ ಅಗ್ನಿ ನಿಯಂತ್ರಿಸುವ ಬಗೆಯನ್ನು ವಿವರಿಸಿದರು.

ಪ್ರಾತ್ಯಕ್ಷಿಕೆ ಮತ್ತು ಅರಿವು ಮೂಡಿಸಿದ ಅಗ್ನಿ ಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ವಾಸವಿ ಕ್ಲಬ್ ರಾಮನಗರದ ಅಧ್ಯಕ್ಷ ಕೆ.ಎನ್. ಗಿರೀಶ್, ಕಾರ್ಯದರ್ಶಿ ಹರ್ಷಿತಾ, ಖಜಾಂಚಿ ಅನುರಾದ ಹಾಗೂ ಇತರರು ಕೃತಜ್ಞತೆ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-14-496463511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.