ಎಚ್.ಡಿ. ಕುಮಾರಸ್ವಾಮಿ
ಜಿಲ್ಲೆಯಿಂದ ಎರಡು ಬಾರಿ ಸಿ.ಎಂ ಹುದ್ದೆಗೇರಿದ ಹಿರಿಮೆ ಎಚ್.ಡಿ. ಕುಮಾರಸ್ವಾಮಿ ಅವರದ್ದು. ತಮ್ಮ ತಂದೆಯ ಅದೃಷ್ಟದ ಕ್ಷೇತ್ರವಾದ ರಾಮನಗರದಿಂದ 2004ರಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು, 12ನೇ ವಿಧಾನಸಭೆಯಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಅಧಿಕಾರ ನಡೆಸಿದ್ದರು. 2018ರ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲೂ ಸ್ಪರ್ಧಿಸಿ ಗೆದ್ದಿದ್ದ ಅವರು, ಚನ್ನಪಟ್ಟಣ ಉಳಿಸಿಕೊಂಡರು. ಆಗ ಯಾರಿಗೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ ರಚನೆಯಾದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಮುಖ್ಯಮಂತ್ರಿಯಾದ ಎಚ್‌ಡಿಕೆ 14 ತಿಂಗಳು ಅಧಿಕಾರದಲ್ಲಿದ್ದರು.