ರಾಮನಗರ: ‘ಆಧುನಿಕ ತಂತ್ರಜ್ಞಾನದ ಹುಚ್ಚುಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ಎನ್ನಲಾದ ಜನಪದ ಸಂಗೀತ ತನ್ನ ಮೂಲ ಸ್ವರೂಪವ ಕಳೆದುಕೊಂಡು ಹೊಸ ನೆಲೆಯಲ್ಲಿ ವಿಶಾಲಬಾಹುಗಳನ್ನು ಚಾಚಿ ಬೆಳೆಯುತ್ತಿದೆ’ ಎಂದು ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಇಫ್ರೋ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಇಫ್ರೋ ಜಾನಪದ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಸೋಬಾನೆ ಗೀತ ಗಾಯನ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸೋಬಾನೆ ಪದಗಳನ್ನು ಜನಮಾನಸದಲ್ಲಿ ನೆಲೆಗೊಳ್ಳುವಂತೆ ಮಾಡಬೇಕಾದ ಅಗತ್ಯವಿದೆ’ ಎಂದರು.

‘ಕನ್ನಡದಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಕಾರದ ಸೋಬಾನೆ ಗೀತೆಗಳಿವೆ. ಹುಟ್ಟಿನಿಂದ ಸಾವಿನವರೆಗೆ ಬರುವ ಜೀವನಾವರ್ತದ ಆಚರಣೆಗಳ ಸಂದರ್ಭದಲ್ಲಿ ದಣಿವರಿಯದೆ ಹಾಡುತ್ತಿದ್ದ ಗಾಯಕರಿದ್ದರು. ಅವರ ಸಂಖ್ಯೆ ನೋಡ ನೋಡುತ್ತಿದ್ದಂತೆಯೇ ಕ್ಷೀಣಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಂತಹವರ ಸಾಲಿನಲ್ಲಿ ಇನ್ನೂ ನಮ್ಮ ನಡುವೆ ನಡೆದಾಡುತ್ತಿರುವ ಸೋಬಾನೆ ಕೃಷ್ಣೇಗೌಡರ ಸೋಬಾನೆ ಸೊಲ್ಲುಗಳು ಹೊಸ ಉತ್ಸಾಹ ಮೂಡಿಸುತ್ತವೆ. ಈಗಲಾದರೂ ಉಳಿದಿರುವ ಬೆರಳೆಣಿಕೆಯಷ್ಟು ಕಲಾವಿದರು ಮತ್ತು ಅವರ ಕಲೆಯನ್ನು ಪೋಷಿಸುವ ಕೆಲಸ ಮಾಡದಿದ್ದರೆ, ಎಲ್ಲವೂ ಮರೆಗೆ ಸರಿಯುವ ಅಪಾಯವಿದೆ’ ಎಂದು ಹೇಳಿದರು.

ಶಿಬಿರಾರ್ಥಿ ಶೈಲಜಾ ಮಾತನಾಡಿ, ‘ಈ ನಾಲ್ಕು ದಿನಗಳ ಶಿಬಿರ ಎಂದಾಗ ಪಾಲ್ಗೊಳ್ಳಲು ನಾನು ಹಿಂಜರಿದೆ. ಆದರೆ, ಸ್ವಾದವನ್ನು ಕೇಳುತ್ತಿದ್ದಂತೆಯೇ ಕಡೆವರೆಗೆ ಶಿಬಿರದಲ್ಲಿರಬೇಕು ಎಂದು ನಿಶ್ಚಯಿಸಿದೆ. ಅತ್ಯಂತ ಸುಂದರ ಮತ್ತು ಸುಶ್ರಾವ್ಯವಾದ ಸೋಬಾನೆ ಗೀತೆಗಳ ಮಾಧುರ್ಯಕ್ಕೆ ಮೈ ಮರೆತೆ. ಶಿಬಿರದಿಂದಾಗಿ ಸೋಬಾನೆ ಗೀತೆಗಳ ಬಗ್ಗೆ ನನ್ನಲ್ಲಿ ವಿಶೇಷ ಆಸಕ್ತಿ ಮೂಡಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಿರಾರ್ಥಿ ಪೋಷಕಿ ವೈಷ್ಣವಿ, ‘ನಮ್ಮ ಮಗಳು ಧೃತಿ ನಾಲ್ಕೂ ದಿನಗಳ ಕಾಲ ಸೋಬಾನೆ ಗೀತೆಗಳ ಗುಂಗಿನಲ್ಲಿಯೇ ಇಲ್ಲಿ ನಡೆದದ್ದನ್ನು ನಮಗೂ ತಿಳಿಸಿದಳು. ಅದರಿಂದಾಗಿ ನಮ್ಮಲ್ಲಿಯೂ ಕುತೂಹಲ ಮೂಡುವಂತೆ ಮಾಡಿದಳು. ಆ ಕಾರಣಕ್ಕಾಗಿಯೇ ಕುಟುಂಬ ಸಹಿತ ಶಿಬಿರಕ್ಕೆ ಆಗಾಗ ಬಂದೆ, ಕೆಲ ಗೀತೆಗಳನ್ನು ಸವಿದೆವು’ ಎಂದರು.

ಶಿಬಿರಾರ್ಥಿಗಳಾದ ಲತಾ ರಮೇಶ್, ಗಾಯತ್ರಿ ರಾಮಚಂದ್ರ, ಧೃತಿ, ಅನಿಕಾ ಕಿರಣ ಕಂಭಂ, ತೈಲಶಿ ಮೋಹನ್, ವೈಷ್ಣವಿ, ಶಶಿಕಲಾ, ಶನಿಷ್ಯ, ಭವ್ಯ ಅವರು ಸೋಬಾನೆ ಪದಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮಹಾವಿದ್ಯಾಲಯದ ಸಂಯೋಜಕಿ ವಿನುತಾ ಬೂದಿಹಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುರಿಬಾಂಡ್ ಖ್ಯಾತಿಯ ನಟ–ನಿರ್ದೇಶಕ ಇಸ್ಮಾಯಿಲ್ ಸಾಗರ್, ರಂಗ ಸಂಗೀತ ನಿರ್ದೇಶಕ ಗಜಾನನ ಟಿ. ನಾಯಕ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-14-1383283852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.