ಹಾರೋಹಳ್ಳಿ:ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಕುಡಿಯುವ ನೀರು, ಶೌಚಾಲಯ, ಆಸನ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕು.ಆದರೆ ಹಾರೋಹಳ್ಳಿ ಮಾರಸಂದ್ರದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಅದ್ಯಾವುದೂ ಇಲ್ಲ.

ಇಲ್ಲಿನ ಅಧಿಕಾರಿಗಳು ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಬೇಸಿಗೆಯ ಬಿಸಿಲಲ್ಲಿ ರೈತರು ದಾಹದಿಂದ ಪರಿತಪಿಸುತ್ತಿದ್ದಾರೆ.

ರಾಗಿ ಖರೀದಿ ಕೇಂದ್ರ ಸ್ಥಾಪನೆ ಮತ್ತು ಮೂಲಸೌಲಭ್ಯ ಒದಗಿಸಲು ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಆ ಹಣದಲ್ಲಿ ಸೌಲಭ್ಯ ಒದಗಿಸುವಂತೆ ಸೂಚಿಸುತ್ತದೆ. ಆದರೆ ಅಧಿಕಾರಿಗಳು ಏನನ್ನೂ ಮಾಡಲ್ಲ.

ಹಾರೋಹಳ್ಳಿಯಲ್ಲಿ ಸ್ಥಾಪನೆಯಾಗಿರುವ ರಾಗಿ ಖರೀದಿ ಕೇಂದ್ರ ಕಿರಿದಾಗಿದ್ದು, ಖರೀದಿ ಕೇಂದ್ರದ ಆವರಣದಲ್ಲೇ ರೈತರಿಂದ ಕೊಂಡ ರಾಗಿಯನ್ನು ಇರಿಸಲಾಗಿದೆ. ರಾಗಿಯನ್ನು ದಿನ ನಿತ್ಯ ಸರ್ಕಾರದ ದಾಸ್ತಾನು ಮಳಿಗೆಗೆ ಸಾಗಿಸಲಾಗುತ್ತಿದೆಯಾದರೂ, ಒಂದೊಮ್ಮೆ ಮಳೆ ಬಂದರೆ ರೈತರ ರಾಗಿ ನೆನೆಯುವುದರ ಜತೆಗೆ ಸರ್ಕಾರದ ಹಣವೂ ಪೋಲಾಗುತ್ತದೆ.

ಇದರಿಂದ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ತರಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಈ ಬಾರಿ ಕ್ವಿಂಟಲ್ಗೆ ₹4,886 ನಿಗದಿ ಪಡಿಸಿದೆ. ಹಾರೋಹಳ್ಳಿ ತಾಲೂಕಿನಲ್ಲಿ 937 ರೈತರು 22,435ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ರಾಗಿ ಖರೀದಿ ಕೇಂದ್ರ ಆರಂಭವಾಗಿ ತಿಂಗಳು ಕಳೆದಿದ್ದು, ಈವರೆಗೂ 600ಕ್ಕೂ ಹೆಚ್ಚು ರೈತರು 13,000 ಕ್ವಿಂಟಲ್ ರಾಗಿಯನ್ನಷ್ಟೇ ರಾಗಿ ಖರೀದಿ ಕೇಂದ್ರಕ್ಕೆ ಪೂರೈಸಿದ್ದಾರೆ.

ರಾಗಿ ಖರೀದಿ ಕೇಂದ್ರದಲ್ಲಿ ಕಾಳಸಂತೆ ಹೆಚ್ಚಿದೆ. ರೈತರ ಹೆಸರಿನಲ್ಲಿ ದಲ್ಲಾಳಿಗಳು ಬೇರೆ ಕಡೆಯಿಂದ ರಾಗಿ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನೆಲ್ಲವನ್ನೂ ಇಲಾಖೆ ಅಧಿಕಾರಿಗಳು ಅರಿತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿ ಕೂಡಲೇ ಸೂಕ್ತ ಕ್ರಮ ವಹಿಸಲು ಆದೇಶಿಸಬೇಕು ಎಂದು ರೈತರ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-14-1669702162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.