ಹಾರೋಹಳ್ಳಿ: ಮರಳವಾಡಿಯಲ್ಲಿ ಮಂಗಳವಾರ ರಾತ್ರಿ ಹಳೆ ವೈಷಮ್ಯದಿಂದ ಯುವಕನೊಬ್ಬನ ತಲೆ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮರಳವಾಡಿಯ ರವಿಕುಮಾರ್(37) ಕೊಲೆಯಾದ ವ್ಯಕ್ತಿ. ಎಸ್.ಎಲ್.ಎನ್ ದೊಡ್ಡಿಯ ಪ್ರಶಾಂತ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ.

ಪೊಲೀಸರು ಆರೋಪಿ ಪ್ರಶಾಂತ್ ಹಾಗೂ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗಾಗಿ ಹುಡುಕಾಟ ಕೈಗೊಂಡಿದ್ದಾರೆ.

ಕೊಲೆಯಾದ ರವಿಕುಮಾರ್ಗೆ ತಂದೆ,ತಾಯಿ ಇರಲಿಲ್ಲ. ವಿವಾಹವಾಗದೆ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರವಿಕುಮಾರ್ ಮನೆಯ ಪಕ್ಕದಲ್ಲಿರುವ ಅಂಗಡಿಯನ್ನು ಆರೋಪಿ ಪ್ರಶಾಂತ್ ಎರಡು ವರ್ಷಗಳ ಹಿಂದೆ ಬಾಡಿಗೆಗೆ ಪಡೆದಿದ್ದ. ಅಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ತೆರೆದಿದ್ದ. ದುರಸ್ತಿಗೆ ಬರುತ್ತಿದ್ದ ದ್ವಿಚಕ್ರ ವಾಹನಗಳು ರವಿಕುಮಾರ್ ಮನೆಯ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದ. ಇದರಿಂದ ರವಿಕುಮಾರ್ ಓಡಾಡಲು ಕಿರಿಕಿರಿಯಾಗುತ್ತಿತ್ತು.

ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪ್ರಶಾಂತ್ಗೆ ಕೊಟ್ಟಿದ್ದ ಬಾಡಿಗೆ ಅಂಗಡಿಯನ್ನು ರವಿಕುಮಾರ್ ಖಾಲಿ ಮಾಡಿಸಿದ್ದ. ಪಕ್ಕದಲ್ಲಿರುವ ಮತ್ತೊಂದು ಅಂಗಡಿಯನ್ನು ಪ್ರಶಾಂತ್ ಬಾಡಿಗೆ ಪಡೆದು ಗ್ಯಾರೇಜ್ ಶುರು ಮಾಡಿದ್ದ. ರಿಪೇರಿಗೆ ಬರುತ್ತಿದ್ದ ಬೈಕ್ ಸಂಖ್ಯೆ ಹೆಚ್ಚಾದಾಗ ರವಿಕುಮಾರ್ ಮನೆಯ ಮುಂದೆ ನಿಲ್ಲಿಸುತ್ತಿದ್ದ. ಹಾಗಾಗಿ ಇಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದಲೂ ಗಲಾಟೆ ನಡೆಯುತ್ತಿತ್ತು.

ಇದೇ ದ್ವೇಷದಿಂದ ಆರೋಪಿ ಪ್ರಶಾಂತ್ ಮಂಗಳವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ. ರವಿಕುಮಾರ್ ಸಹ ಮಂಗಳವಾರ ರಾತ್ರಿ ಮನೆಯಲ್ಲಿಯೇ ಮದ್ಯಪಾನ ಮಾಡಿದ್ದ. ಮಂಗಳವಾರ ರಾತ್ರಿ 11ಕ್ಕೆ ಪ್ರಶಾಂತ್ ಹಾಗೂ ತನ್ನ ಸ್ನೇಹಿತರೊಂದಿಗೆ ರವಿಕುಮಾರ್ ಮನೆಯ ಬಳಿ ಬಂದು ಗಲಾಟೆ ಮಾಡಿದ್ದ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿ ಪ್ರಶಾಂತ್ ಹಾಗೂ ಈತನ ಸ್ನೇಹಿತರು ರವಿಕುಮಾರ್ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಹಾರೋಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-18-2126641698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.