ರಾಮನಗರ: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ 94ನೇ ವರ್ಷದ ಜನ್ಮದಿನದ ಅಂಗವಾಗಿ, ಪಕ್ಷದ ಕಾರ್ಯಕರ್ತರು ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ನಾಯಕನಿಗೆ ಆಯಸ್ಸು–ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಮಾಜಿ ಪ್ರಧಾನಿಯ ಸಾಧನೆಯ ಕಿರುಹೊತ್ತಿಗೆಯನ್ನು ವಿತರಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ನೇತೃತ್ವದಲ್ಲಿ ಬೆಳಿಗ್ಗೆ ದೇವಾಲಯದ ಎದುರು ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ದೇವೇಗೌಡರ ಪರವಾಗಿ ಘೋಷಣೆಗಳನ್ನು ಕೂಗಿದರು. ನಂತರ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ದೇವಾಲಯದ ಎದುರು 101 ಈಡುಗಾಯಿ ಒಡೆದರು.

ಕೇಕ್ ಕತ್ತರಿಸಿ ಸಂಭ್ರಮಾಚರಣೆ: ಪಕ್ಷದ ಕಚೇರಿಯಲ್ಲೂ ಪದಾಧಿಕಾರಿಗಳು ಕೇಕ್ ಕತ್ತರಿಸುವ ದೇವೇಗೌಡರ ಜನ್ಮದಿನ ಆಚರಿಸಿದರು. ನಂತರ, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕೇಕ್ ವಿತರಣೆ ಮಾಡಿದರು. ಕಚೇರಿಯಲ್ಲೂ ದೇವೇಗೌಡರ ಪರವಾಗಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.

ಈ ವೇಳೆ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ‘ರಾಜಕೀಯ ರಂಗದ ಭೀಷ್ಮರಾಗಿರುವ ಎಚ್.ಡಿ. ದೇವೇಗೌಡರು, ಕನ್ನಡಿಗರ ಅಸ್ಮಿತೆಯಾಗಿದ್ದಾರೆ. ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ರೈತರ ಗಟ್ಟಿ ದನಿಯಾಗಿದ್ದಾರೆ’ ಎಂದರು.

‘ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದ ಪರವಾದ ಚಿಂತನೆಗಳ ಮೂಲಕ ಸಾಮಾಜಿಕ ನ್ಯಾಯ ಒದಗಿಸಿರುವ ಕೀರ್ತಿ ದೇವೇಗೌಡ ಅವರದ್ದು. ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರು, ಮಹಿಳೆಯರು ಹೀಗೆ ಎಲ್ಲರಿಗೂ ಅನುಕೂಲವಾಗುವಂತೆ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಅವರ ಸರಳತೆ ಮತ್ತು ಜನಪರ ಆಡಳಿತ ಇಂದಿಗೂ ಅನೇಕರಿಗೆ ಪ್ರೇರಣೆಯಾಗಿದೆ’ ಎಂದು ಹೇಳಿದರು.

ನಗರಸಭೆಯ ಜೆಡಿಎಸ್ ಸದಸ್ಯ ಕೆ. ರಮೇಶ್, ಮುಖಂಡರಾದ ಬಿ. ಉಮೇಶ್, ಚಂದ್ರಯ್ಯ, ದೊರೆಸ್ವಾಮಿ, ಪ್ರಕಾಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಗೌಡಯ್ಯನದೊಡ್ಡಿ ಕೃಷ್ಣೇಗೌಡ, ಪಾದರಹಳ್ಳಿ ಚಂದ್ರು, ಅಂಜನಾಪುರ ವಾಸು, ಲಕ್ಕಸಂದ್ರ ಮಹದೇವ್, ಮಾವಿನಸಸಿ ವೆಂಕಟೇಶ್, ಬಾಲಗೇರಿ ರವಿ, ವಕೀಲ ರಾಜಶೇಖರ್, ಗೂಳಿ ಕುಮಾರ್ ಗೌಡ, ಲಕ್ಷ್ಮಿಕಾಂತ್, ಶೋಭಾ, ಸರಸ್ವತಿ, ಜಯಕುಮಾರ್, ಬೋರೇಗೌಡ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-14-1554099252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.