ರಾಮನಗರ/ಬಿಡದಿ: ಬಿಸಿಲ ಧಗೆಯಿಂದ ಬಳಲಿದ್ದ ಜಿಲ್ಲೆಗೆ ಮಳೆಯು ಬುಧವಾರ ಭರ್ಜರಿ ಓಪನಿಂಗ್ ನೀಡಿತು. ಮಳೆ ಇಲ್ಲದೆ ಆಗಸತ್ತ ಮುಖ ಮಾಡಿ ನಿಂತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿತು. ಭಾರಿ ಗಾಳಿಯೊಂದಿಗೆ ಸಂಜೆ ಸುರಿದ ಮಳೆಯಿಂದಾಗಿ ವಿವಿಧೆಡೆ ಮರಗಳು ನೆಲಕ್ಕುರುಳಿವೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.

ಸಂಜೆಯ 7ರ ಹೊತ್ತಿಗೆ ಮೋಡ ಆವರಿಸುತ್ತಿದ್ದಂತೆ ಭಾರಿ ಗಾಳಿ ಬೀಸತೊಡಗಿತು. ಕೆಲ ಹೊತ್ತಿನಲ್ಲೇ ಶುರುವಾದ ಮಳೆ ಸುಮಾರು 20 ನಿಮಿಷಕ್ಕೂ ಹೆಚ್ಚು ಹೊತ್ತು ಸುರಿಯಿತು. ಜಿಲ್ಲಾ ಕೇಂದ್ರವಾದ ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ ಜೋರಾಗಿ ಸುರಿಯಿತು. ಹಾರೋಹಳ್ಳಿಯಲ್ಲಿ ಸಾಧಾರವಾಗಿ ಬಂತು.

ಮಳೆ ಅಬ್ಬರಕ್ಕೆ ಬಿಡದಿ ಹೋಬಳಿಯ ಗಾಣಕಲ್ ಗ್ರಾಮದಲ್ಲಿ ಮರವೊಂದು ನೆಲಕ್ಕುರುಳಿತು. ಇದರಿಂದಾಗಿ ಪಕ್ಕದಲ್ಲಿದ್ದ ಸರ್ಕಾರಿ ಶಾಲೆಯ ಕಾಂಪೌಂಡ್ ನೆಲಕ್ಕುರುಳಿತಲ್ಲದೆ, ಮರದ ರೆಂಬಗಳು ಬಡಿದಿದ್ದರಿಂದ ಹೇಮಾ ಎಂಬುವವರ ಮನೆ ಜಖಂಗೊಂಡಿದೆ. ವಿದ್ಯುತ್ ಕಂಬವೂ ನೆಲ ಕಚ್ಚಿತು. ಮಳೆಯಿಂದಾಗಿ ಜಿಲ್ಲೆಯ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ಇತರ ಹಾನಿ ಕುರಿತು ನಾಳೆ ಮಾಹಿತಿ ಸಿಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಹೊರಕ್ಕೆ ಬರಲಾಗದಷ್ಟು ಬಿಸಿಲಿತ್ತು. ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ಬಂದಿವೆ. ಮಾವಿನ ಋತು ಈಗಾಗಲೇ ಶುರುವಾಗಿರುವುದರಿಂದ, ಯಾವಾಗ ಮಳೆ ಬರುತ್ತದೊ ಎಂದು ಕಾಯುತ್ತಿದ್ದೆವು. ತಡವಾಗಿಯಾದರೂ ಮಳೆ ಬಂದಿರುವುದು ಖುಷಿ ತಂದಿದೆ. ಆದರೆ, ಈ ಸಲ ಮಳೆ ಇಲ್ಲದ ಕಾರಣಕ್ಕೆ ಮಾವು ಸಂಪೂರ್ಣವಾಗಿ ಕೈ ಕೊಟ್ಟಿದೆ ಎಂದು ರಾಮನಗರ ರೈತ ಆದರ್ಶ್ ಸಂತಸದ ಜೊತೆಗೆ ಬೇಸರ ತೋಡಿಕೊಂಡರು.

ಕನಕಪುರ: ಕೆಲವು ತಿಂಗಳಿಂದ ಮಳೆ ಬೀಳದೆ, ಅತಿಯಾದ ಬಿಸಿಲಿನ ತಾಪದಿಂದ ತತ್ತರಗೊಂಡಿದ್ದ ಜನತೆಗೆ ಬುಧವಾರ ಸಂಜೆ ತಾಲ್ಲೂಕಿನಾದ್ಯಂತ ಸುರಿದ ಮಳೆ ತಂಪೆರೆಯಿತು.

ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿದ್ದು ಸುಮಾರು 6 ಗಂಟೆಗೆ ಸಣ್ಣದಾಗಿ ತುಂತುರು ಮಳೆ ಬೀಳಲು ಪ್ರಾರಂಭವಾಯಿತು. ನಂತರ ಅತಿಯಾದ ಮಿಂಚು, ಗುಡುಗಿನಿಂದ ಮಳೆ ಬೀಳಲಾರಂಬಿಸಿತು.

ಎಲ್ಲೆಡೆ ಗುಡುಗು ಮಿಂಚಿನ ಅಬ್ಬರ ಕೇಳಿಸುತ್ತಿತ್ತು. ಅದರ ಜೊತೆಗೆ ಗಾಳಿ ಬೀಸಲಾರಂಬಿಸಿತು.

ಸುಮಾರು 9ಗಂಟೆವರೆಗೆ ಸುರಿದ ಮಳೆ ನಂತರ ನಿಂತಿತು. ಆದರೆ ಗುಡುಗು, ಮಿಂಚು ಮುಂದುವರಿದಿತ್ತು. ಮಳೆ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿತು. ರಸ್ತೆ ಮತ್ತು ಮನೆಗಳಲ್ಲಿ ವಿದ್ಯುತ್ ಇಲ್ಲದೆ ಜನತೆ ಕತ್ತಲಿನಲ್ಲಿ ರಾತ್ರಿ ಕಳೆಯುವಂತಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-14-931008400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.