ರಾಮನಗರ: ನಗರದಲ್ಲಿ ಶನಿವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿಯಿತು. ಗುಡುಗು, ಮಿಂಚು ಹಾಗೂ ಭಾರಿ ಗಾಳಿ ಸಮೇತ ಸುರಿದ ವರ್ಷಧಾರೆಗೆ ನಗರವು ತೋಯ್ದಿತು. ಬೆಳಿಗ್ಗೆಯಿಂದಲೇ ಇದ್ದ ಭಾರೀ ಬಿಸಿಲು ವಿಪರೀತ ಸೆಕೆಗೂ ಕಾರಣವಾಗಿತ್ತು. ಸಂಜೆಯಾಗುತ್ತಿದ್ದಂತೆ ಮೋಡ ಆವರಿಸಿ ಒಂದೊಂದು ಹನಿಗಳು ಬೀಳತೊಡಗಿದವು.

ಏಳು ಗಂಟೆಯಾಗುತ್ತಿದ್ದಂತೆ ಶುರುವಾದ ಮಳೆಯು ಮುಕ್ಕಾಲು ತಾಸು ಬಿಡದೆ ಸುರಿಯಿತು. ಮಳೆ ಅಬ್ಬರಕ್ಕೆ ಕೆಲ ಹೊತ್ತು ಜಲಾವೃತಗೊಂಡವು. ಚರಂಡಿಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ದ್ವಿಚಕ್ರ ವಾಹನ ಸವಾರರು ಚಾಲನೆ ಮಾಡಲಾಗದೆ ರಸ್ತೆ ಬದಿ ನಿಂತು, ಮಳೆ ನಿಲ್ಲುವವರೆಗೆ ಆಶ್ರಯ ಪಡೆದರು.

ವರುಣನ ಅಬ್ಬರಕ್ಕೆ ಛತ್ರಿ ಹಿಡಿದು ಹೊರಕ್ಕೆ ಬರುವುದೂ ಕಷ್ಟವಾಯಿತು. ಕೆಲ ವಾಹನಗಳ ಸವಾರರು ದಾರಿ ಕಾಣದಂತಾಗಿ ರಸ್ತೆ ಬದಿಯೇ ವಾಹನಗಳನ್ನು ನಿಲ್ಲಿಸಿಕೊಂಡು, ಮಳೆ ಬಿಡುವು ಕೊಟ್ಟ ಬಳಿಕ ತೆರಳಿದರು. ನಗರದ ಗುಂಡಿಬಿದ್ದ ರಸ್ತೆಗಳು ಮಳೆಯಿಂದಾಗಿ ಹಳ್ಳದಂತಾದವು.

ರಾಮನಗರ ಸೇರಿದಂತೆ ಜಿಲ್ಲೆಯ ಕೆಲ ಭಾಗಗಳಲ್ಲಿ ಕೆಲ ದಿನಗಳಿಂದ ಆಗಾಗ ಸಂಜೆ ಮತ್ತು ರಾತ್ರಿ ಸುರಿಯುತ್ತಿರುವ ಮಳೆಯು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಮುಂಗಾರು ಬಿತ್ತನೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲು ಮಳೆ ಪೂರಕವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.