ಬಿಡದಿ: ಬಿಡದಿ ಪುರಸಭೆ 23ನೇ ವಾರ್ಡ್ ವ್ಯಾಪ್ತಿಯ ಹೆಗ್ಗಡಗೆರೆ ಗ್ರಾಮದಲ್ಲಿ 37 ವರ್ಷಗಳ ಬಳಿಕ ಗ್ರಾಮದೇವತೆಗಳಾದ ಮಾರಮ್ಮ ಮತ್ತು ಮಾಸ್ತಮ್ಮ ಅಗ್ನಿಕೊಂಡ ಮಹೋತ್ಸವ ಹಾಗೂ ಊರಹಬ್ಬ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ದೇವರು ತರುವ ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಹೂವಿನ ಆರತಿ ಹಿಡಿದು ಹೆಜ್ಜೆ ಹಾಕಿದರು. ಮಾರಮ್ಮ ಅಗ್ನಿಕೊಂಡ ಯಶಸ್ವಿಯಾಗಿ ನೆರವೇರಿತು. ದೇಗುಲದ ಅರ್ಚಕ ಶಿವಣ್ಣ ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಗ್ನಿಕೊಂಡ ಪ್ರವೇಶ ಮಾಡಿದರು.

ಸೋಮವಾರ ಮಾಸ್ತಮ್ಮನಿಗೆ ಯಳವಾರ ಪೂಜೆ ಮತ್ತು ವೀರಭದ್ರ,ಆಂಜನೇಯ, ಗಣಪತಿ, ಮಾರಮ್ಮ ಹಾಗೂ ಮಾಸ್ತಮ್ಮನ ಉತ್ಸವ ಮೂರ್ತಿಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮಂಗಳವಾರ ಮಾಸ್ತಮ್ಮ ಅಗ್ನಿಕೊಂಡ ಮಹೋತ್ಸವ ನೆರವೇರಿತು.

ಗ್ರಾಮದ ನೂರಾರು ಮಹಿಳೆಯರು ಹೂವಿನ ಆರತಿಗಳೊಂದಿಗೆ ಮೆರವಣಿಯಲ್ಲಿ ಬಂದು ದೇವಿಗೆ ಪೂಜೆ ಸಲ್ಲಿಸಿದರು. ಏರಿಮೇಗಳ ಬಸವಣ್ಣ ದೇವಾಲಯದ ಅರ್ಚಕ ರೇಣುಕಯ್ಯ ಯಶಸ್ವಿಯಾಗಿ ಅಗ್ನಿಕೊಂಡ ಪ್ರವೇಶಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜೈಕಾರ ಹಾಕಿದರು. ಸಂಜೆ ಮಾರಮ್ಮ ಯಳವಾರ ಕಾರ್ಯ ನಡೆಯಿತು. ಎತ್ತಿನಗಾಡಿ ಹಾಗೂ ಟ್ರಾಕ್ಟರ್ಗಳ ಮೂಲಕ ಕೊಂಡಕ್ಕೆ ಸೌದೆ ತುಂಬಿಸಲಾಯಿತು.

ಕೆಲವು ಕಟ್ಟನಿಟ್ಟಿನ ಶಿಸ್ತುಪಾಲನೆಯಿಂದ ಏಳು ದಿನ ಅಗ್ನಿಕೊಂಡ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಗುರುವಾರ ಕುರ್ಜು ಮೆರವಣಿಗೆ ಹಾಗೂ ಶುಕ್ರವಾರ ಗ್ರಾಮದ ಎಲ್ಲಾ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.

ಮೇ 15ರವರೆಗೆ ಹಬ್ಬ ನಡೆಯಲಿದ್ದು ಬುಧವಾರ ಗ್ರಾಮದಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ ಶಾಮಿಯಾನ ಹಾಕಿ ಸಸ್ಯಾಹಾರ ಮತ್ತು ಮಾಂಸಹಾರದ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು, ನೆಂಟರಿಷ್ಟರು ಪಾಲ್ಗೊಂಡು ಸಂಭ್ರಮಿಸಿದರು.

ಊರಹಬ್ಬಕ್ಕೆ ರಾಮನಗರ ಜಿಲ್ಲೆ ಮಾತ್ರವಲ್ಲದೇ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು ಭಾಗಗಳಿಂದಲೂ ಭಕ್ತರು ಹಾಗೂ ನೆಂಟರಿಷ್ಟರು ಆಗಮಿಸಿದ್ದರು. ಇಡೀ ಗ್ರಾಮ ಜನರಿಂದ ತುಂಬಿತ್ತು. ಮಧ್ಯಾಹ್ನದ ವೇಳೆಗೆ ವಾಹನಗಳ ಸಂಚಾರ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಿಯಂತ್ರಿಸಲು ಪೊಲೀಸರು ಪರದಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-14-2100469318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.