ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಳಿಯ ಆಶ್ರಯದಲ್ಲಿ ಈಚೆಗೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ತೀರ್ಥಪ್ರಸಾದ್ ಮಾತನಾಡಿ, ನಾಟಕ ಸಮಾಜದ ಬದುಕು, ಮೌಲ್ಯಗಳು, ಧರ್ಮ, ನೀತಿ ಮತ್ತು ಮಾನವೀಯತೆಯನ್ನು ಜನರಿಗೆ ನೇರವಾಗಿ ತಲುಪಿಸುವ ಶಕ್ತಿಯುತ ಮಾಧ್ಯಮ. ಇಂದಿನ ಆಧುನಿಕ, ತಂತ್ರಜ್ಞಾನ ಯುಗದಲ್ಲಿ ಜನಪದ ಮತ್ತು ನಾಟಕ ಕಲೆಯ ಉಳಿವಿಗೆ ಯುವ ಪೀಳಿಗೆ ಹೆಚ್ಚು ಆಸಕ್ತಿ ತೋರಬೇಕು ಎಂದರು.

ಉದ್ಯಮಿ ಪ್ರಸನ್ನ ಕುಮಾರ್, ವಕೀಲ ಲೋಕೇಶ್, ಕಲಾವಿದರಾದ ಕೆಂಪರಾಜು, ಚಂದ್ರಶೇಖರ್, ಕೃಷ್ಣಾಪುರ ಅನಂತ್, ಕೃಷ್ಣರಾಜೆ ಅರಸು, ಕುಮಾರ್ ಬುಕ್ಕಸಾಗರ್, ಯೋಗಾನಂದ, ವಿಜೇಂದ್ರಣ್ಣ, ವೆಂಕಟೇಶ್, ಮಧು, ಬಿ.ಪಿ.ಸುರೇಶ್ ಇತರರು ಭಾಗವಹಿಸಿದ್ದರು.

ರಂಗಭೂಮಿ ನಿರ್ದೇಶಕ ಸಿದ್ಧಾಚಾರ ಅವರನ್ನು ಸತ್ಕರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-14-1162500111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.