ರಾಮನಗರ: ‘ರೈತರ ವಿರೋಧದ ನಡುವೆಯೂ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ದಲ್ಲಾಳಿಗಳ ಜೊತೆ ಸಭೆ ಮಾಡಿರುವ ಡಿಸಿಎಂ ಸೇರಿದಂತೆ ಕಾಂಗ್ರೆಸ್ ಜನಪ್ರತಿನಿಧಿಗಳು ತಾಕತ್ತಿದ್ದರೆ ಯೋಜನಾ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಲಿ. ನಮ್ಮ ನಾಯಕರೂ ಬರಲಿದ್ದಾರೆ. ಆಗ ರೈತರು ಯಾರಿಗೆ ಘೇರಾವ್ ಹಾಕಲಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಸವಾಲು ಹಾಕಿದರು.

‘ತಮ್ಮ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಪ್ರಶ್ನೆಗೆ ಡಿಸಿಎಂ ಉತ್ತರಿಸಲಾಗದೆ ಜಾರಿಗೊಂಡಿದ್ದಾರೆ. ಅವರು ಹೇಳಿ ಕೊಟ್ಟಿದ್ದನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜು ಗಾಣಕಲ್ಲು ಮಾಧ್ಯಮದ ಎದುರು ಒಪ್ಪಿಸಿದ್ದಾರೆ. ಇಷ್ಟಕ್ಕೂ ನಮ್ಮ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ’ ಎಂದು ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಯೋಜನೆ ಹೆಸರಿನಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಏನೆಲ್ಲಾ ಅಕ್ರಮ ನಡೆಸಲಾಗಿದೆ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಸಮಯ ಬದಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ. ಯೋಜನಾ ಪ್ರದೇಶದಲ್ಲಿದ್ದ ಎರಡೂವರೆ ಸಾವಿರ ಸರ್ಕಾರಿ ಜಮೀನು ಏಕಾಏಕಿ 750 ಎಕರೆಗೆ ಇಳಿಕೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಜಿಬಿಡಿಎ ಅಧ್ಯಕ್ಷ ನಟರಾಜು ಮೊದಲು ಉತ್ತರಿಸಲಿ’ ಎಂದು ಹೇಳಿದರು.

ಮುಖಂಡ ದೊರೆಸ್ವಾಮಿ ಮಾತನಾಡಿ, ‘ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಪ್ರಾದೇಶಿಕ ಪಕ್ಷ ಕಟ್ಟಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ ಅಧಿಕಾರ ಹಿಡಿಯಲಿ. ನಮ್ಮ ನಾಯಕರು ಅಧಿಕಾರ ಸಿಕ್ಕಾಗ ಬೇಕಾದಷ್ಟು ಸಾಧಿಸಿದ್ದಾರೆ. 45 ವರ್ಷಗಳಿಂದ ಶಿವಕುಮಾರ್ ಏನು ಮಾಡಿದ್ದಾರೆ? ಮೇಕೆದಾಟು ಯೋಜನೆ ಯಾಕಿನ್ನೂ ಅನುಷ್ಠಾನವಾಗಿಲ್ಲ’ ಎಂದು ಪ್ರಶ್ನಿಸಿದರು.

‘ತಮ್ಮ ಕುರ್ಚಿ ಉಳಿಸಿಕೊಳ್ಳಲು ನಟರಾಜು ಅವರು ನಮ್ಮ ನಾಯಕ ನಿಖಿಲ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಕುಳಿತುಕೊಳ್ಳುವ ಕಚೇರಿಯ ಕಟ್ಟಡವನ್ನು ನಿರ್ಮಿಸಿದ್ದು ಸಹ ಕುಮಾರಸ್ವಾಮಿ ಅವರು ಎಂಬುದನ್ನು ಅರಿಯಲಿ. ರಾಮನಗರ ತಾಲ್ಲೂಕನ್ನು ಜಿಲ್ಲೆ ಮಾಡಿ, ಅದರ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇ ನಮ್ಮ ನಾಯಕರು’ ಎಂದು ಹೇಳಿದರು.

ಪಕ್ಷದ ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಗೌಡಯ್ಯನದೊಡ್ಡಿ ಕೃಷ್ಣೇಗೌಡ, ಅಂಜನಾಪುರ ವಾಸು, ಮಾವಿನಸಸಿ ವೆಂಕಟೇಶ್, ಬಾಲಗೇರಿ ರವಿ, ವಕೀಲ ರಾಜಶೇಖರ್, ಗೂಳಿ ಕುಮಾರ್ ಗೌಡ, ದೊಡ್ಡಿ ಉಮೇಶ್, ಜಯಕುಮಾರ್, ಕೆಂಪರಾಜು, ಶ್ರೀನಿವಾಸ್, ಲಕ್ಷ್ಮಿಕಾಂತ್, ಕೊತ್ತೀಪುರ ಗೋವಿಂದ, ಬೀರೇಶ್ ಬೋರೆಗೌಡ, ಕಾಡನಕುಪ್ಪೆ ನವೀನ್, ಆಡಿಟರ್ ಕುಮಾರ್, ಪವನ್ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-14-209749257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.