ಕನಕಪುರ: ಕಬ್ಬಾಳಮ್ಮ ಹೆಸರಿನಲ್ಲಿ ದೇವಿ ಆರಾಧನೆಗೆ ಪ್ರಾಣಿ ಬಲಿಕೊಟ್ಟು ಭರ್ಜರಿ ಬಾಡೂಟ ಮತ್ತು ಮದ್ಯ ಸೇವನೆ ಪಾರ್ಟಿ ನಡೆಸುವುದರಿಂದ ಕಬ್ಬಾಳು ಪ್ರದೇಶದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಕೆರೆಗಳಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದೆ. ರೇಷ್ಮೆ ತೋಟಗಳು ಪಾರ್ಟಿ ಮಾಡುವ ಅಡ್ಡೆಗಳಾಗುತ್ತಿವೆ ಎಂದು ಸ್ಥಳೀಯ ರೈತರು ಆರೋಪಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಗ್ರಾಮ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದು ತಮಗಾಗುತ್ತಿರುವ ತೊಂದರೆ ಬಗ್ಗೆ ರೈತರು ಅವಲತ್ತುಕೊಂಡರು.

ಕಬ್ಬಾಳು ದೇವಿ ದರ್ಶನಕ್ಕೆ ಬರುವವರು ಪೂಜೆ ಪುರಸ್ಕಾರ ಮುಗಿಸಿಕೊಂಡು ಹೋಗುತ್ತಾರೆ. ಆದರೆ, ದೇವಿ ಹೆಸರಿನಲ್ಲಿ ಸೇವೆ ಮಾಡುವವರು ಮಾಂಸದೂಟದ ವ್ಯವಸ್ಥೆ ಮಾಡುತ್ತಾರೆ. ಅದರಿಂದ ರೇಷ್ಮೆ ತೋಟ, ಮಾವು ಮತ್ತು ತೆಂಗಿನ ತೋಟಗಳಲ್ಲಿ ಪಾರ್ಟಿ ಮಾಡುತ್ತಾರೆ. ಮದ್ಯದ ಬಾಟಲು, ಊಟದ ಎಲೆ, ನೀರಿನ ಬಾಟಲು ಅಲ್ಲಿಯೇ ಬಿಸಾಡಿ ಹೋಗುತ್ತಾರೆ ಎಂದು ಸಭೆ ಗಮನಕ್ಕೆ ತಂದರು.

ಕಬ್ಬಾಳಿನಲ್ಲಿ ಇತ್ತೀಚಿನ ದಿನಗಳಲ್ಲಿ ಪಾರ್ಟಿ ಹಾಲ್, ವೈನ್ ಸ್ಟೋರ್ ಹೆಚ್ಚಾಗುತ್ತಿವೆ. ಪಾರ್ಟಿಹಾಲ್ ಕೊಳಚೆ ನೀರು ಕೆರೆಗಳಿಗೆ ಬಿಡಲಾಗುತ್ತಿದೆ. ಎಲ್ಲಂದರಲ್ಲಿ ಪ್ಲಾಸ್ಟಿಕ್ ಬಿಸಾಡುತ್ತಿದ್ದು ಕಬ್ಬಾಳು ಪ್ರದೇಶ ಪ್ಲಾಸ್ಟಿಕ್ ಮಯವಾಗುತ್ತಿದೆ. ಕೆರೆಗಳು ಕೊಳಚೆ ನೀರಿನಿಂದ ಮಲಿನವಾಗುತ್ತಿವೆ. ಇದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಗ್ರೇಡ್ ಒನ್ ದೇವಾಲಯ ಆಗಿರುವುದರಿಂದ ಭಕ್ತರಿಂದ ಲಕ್ಷಾಂತರ ರೂಪಾಯಿ ಕಾಣಿಕೆ ಬರುತ್ತಿದ್ದರೂ ಭಕ್ತರಿಗೆ ಬೇಕಿರುವ ಮೂಲಸೌಕರ್ಯ ದೇವಾಲಯ ಸಮಿತಿ ಕಲ್ಪಿಸಿ ಕೊಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

ಗ್ರಾಮ ಪಂಚಾಯಿತಿಯಿಂದ ಗ್ರಾಮ ಮಟ್ಟದಲ್ಲಿ ನಡೆಸಿದ ವಾರ್ಡ್ ಸಭೆಯಲ್ಲಿ ನರೇಗಾ ಯೋಜನೆ, ಕುಡಿಯುವ ನೀರು, ಗ್ರಾಮಗಳಲ್ಲಿ ಒದಗಿಸುವ ಮೂಲ ಸೌಕರ್ಯ ಯೋಜನೆ ಮಾಹಿತಿಯನ್ನು ಅಭಿವೃದ್ಧಿ ಅಧಿಕಾರಿಗಳು ಸಭೆಗೆ ತಿಳಿಸಿ ಅನುಮೋದನೆ ಪಡೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಯಲ್ಲಿ ಚರ್ಚೆ ನಡೆದ ವಿಷಯಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಕೃಷಿ, ರೇಷ್ಮೆ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಇಲಾಖೆ ಸವಲತ್ತು ಮತ್ತು ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಯಂ ಸೇವಕ ಸಂಘದ ಸದಸ್ಯರು, ಗ್ರಾಮ ಪಂಚಾಯಿತಿ ನೌಕರರು, ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-14-1233523663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.