ಕನಕಪುರ: ಕಸಬಾ ಹೋಬಳಿ ತುಂಗಣಿಯಲ್ಲಿ ಈಚೆಗೆ ಆಚರಿಸಲಾದ ಗ್ರಾಮದೇವತೆ ಮಾರಮ್ಮನ ಹಬ್ಬದ ವೇಳೆ ಅಸ್ಪಶ್ಯತೆ ಆಚರಿಸಲಾಗಿದೆ. ಗ್ರಾಮದ ದಲಿತ ಸಮುದಾಯವನ್ನು ಹಬ್ಬದಿಂದ ಹೊರಗಿಡಲಾಗಿದೆ ಎಂದು ದಲಿತ ಸಮುದಾಯದವರು ತಹಶೀಲ್ದಾರ್ಗೆ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂಜಯ್ ಗ್ರಾಮಕ್ಕೆ ಭೇಟಿ ನೀಡಿ ಎರಡು ಸಮುದಾಯದ ಮುಖಂಡರ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ ನಂತರ ಶಾಂತಿ ಸಭೆ ನಡೆಸಿದ್ದಾರೆ.

ದಲಿತ ಸಮುದಾಯದವರಿಗೆ ಮಾಹಿತಿ ನೀಡದೆ ಹಬ್ಬದ ಆಚರಣೆಗೆ ಸೇರಿಸಿಕೊಳ್ಳದೆ ಕೈ ಬಿಟ್ಟಿರುವುದು ಸರಿಯಲ್ಲ. ಸಂವಿಧಾನದ ಅಡಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಮಾನತೆ ದೊರೆಯಬೇಕು. ಗ್ರಾಮಗಳಲ್ಲಿರುವ ಎಲ್ಲಾ ಸಮುದಾಯದವರು ಒಗ್ಗೂಡಿ ಹಬ್ಬ ಆಚರಿಸುವಂತಾಗಬೇಕು. ದಲಿತ ಸಮುದಾಯವನ್ನು ಹೊರಗಿಟ್ಟು ಹಬ್ಬ ಆಚರಣೆ ಮಾಡುವುದು ಕಾನೂನುಬಾಹಿರ. ಮುಂದೆ ಗ್ರಾಮದಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು. ಸಮನ್ವಯತೆಯಿಂದ ಎಲ್ಲರೂ ಒಟ್ಟಾಗಿ ಹಬ್ಬ ಆಚರಣೆ ಮಾಡಿ ಗ್ರಾಮದಲ್ಲಿ ಅನೋನ್ಯತೆಯಿಂದ ಇರಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು. ಇದಕ್ಕೆ ಎರಡೂ ಸಮುದಾಯದವರು ಒಪ್ಪಿಗೆ ಸೂಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-18-516044202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.