ಕನಕಪುರ/ ರಾಮನಗರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯ ಚೀಲಂದವಾಡಿ ಗ್ರಾಮದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಶನಿವಾರ ರಾತ್ರಿ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿರುವ ಘಟನೆಯು ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆ ಸಂಘರ್ಷವು ದಿನದಿಂದ ದಿನಕ್ಕೆ ಉಲ್ಪಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಇದೀಗ ಉಯ್ಯಂಬಳ್ಳಿ ಹೋಬಳಿ ದೊಡ್ಡಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲಂದವಾಡಿ ಗ್ರಾಮದ ರೈತ ಶಿವು (53) ಆನೆ ದಾಳಿಗೆ ಬಲಿಯಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಪತ್ನಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಮಕ್ಕಳಿಬ್ಬರು ಹಾರೋಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ಶಿವು ಒಬ್ಬರೇ ಗ್ರಾಮದಲ್ಲಿ ವಾಸವಾಗಿದ್ದರು.

ಗ್ರಾಮದಿಂದ ಸುಮಾರು 250 ಮೀಟರ್ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಶಿವು ಅವರು ಸಣ್ಣ ಮನೆಯೊಂದನ್ನು ನಿರ್ಮಿಸಿಕೊಂಡು ಅಲ್ಲಿಯೇ ವಾಸವಾಗಿದ್ದರು. ಹೊರಗಡೆ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೋಗುವಾಗ ಹಿಂದಿನಿಂದ ಏಕಾಏಕಿಯಾಗಿ ಬಂದಿರುವ ಕಾಡಾನೆ, ಅವರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿ ನಂತರ ಕಾಡೊಳಕ್ಕೆ ಹೋಗಿದೆ.

ಬೆಳಿಗ್ಗೆ ಕುರಿ ಮತ್ತು ದನಗಳನ್ನು ಮೇಯಿಸಲು ಜಮೀನಿನ ಕಡೆ ಹೋದವರು, ಶಿವು ಅವರ ಶವವನ್ನು ಕಂಡು ಗ್ರಾಮದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಬಂದು ಶವ ನೋಡಿದಾಗ ಕಾಡಾನೆ ತುಳಿದು ಸಾಯಿಸಿರುವುದು ಖಚಿತವಾಗಿದೆ. ತಕ್ಷಣ ಗ್ರಾಮದ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಶವವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಗ್ರಾಮವು ಅರಣ್ಯದ ಮಧ್ಯದಲ್ಲಿದ್ದು ಕಾಡಾನೆಗಳು ಗ್ರಾಮದ ಒಳಕ್ಕೆ ಹೋಗದಂತೆ ಸುತ್ತಲೂ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸಿ ಗೇಟ್ ನಿರ್ಮಿಸಲಾಗಿದೆ. ಆದರೂ, ಶನಿವಾರ ರಾತ್ರಿ ಕಾಡಾನೆಯು ಸೋಲಾರ್ ತಂತಿ ಬೇಲಿ ಮುರಿದು ಗ್ರಾಮ ಪ್ರವೇಶಿಸಿದೆ. ಶಿವು ಅವರು ಒಬ್ಬರೇ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ, ದಾಳಿ ನಡೆಸಿ ಕೊಂದಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಮೃತ ಶಿವು ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಸಿಸಿಎಫ್ ಮಾಲತಿಪ್ರಿಯ, ಡಿಸಿಎಫ್ ಸುರೇಂದ್ರ, ಎಸಿಎಫ್ ನಾಗೇಂದ್ರ ಪ್ರಸಾದ್, ಆರ್ಎಫ್ಒ ಅನಿಲ್ ಕುಮಾರ್, ಆರ್ಎಫ್ಒ ಸದಾಶಿವ ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಗೂ ಭೇಟಿ ನೀಡಿದರು.

ಮೃತ ರೈತ ಶಿವು ಅವರು ತೀರಾ ಬಡವನಾಗಿದ್ದು, ಮನೆಯನ್ನು ಪೂರ್ಣವಾಗಿ ನಿರ್ಮಿಸಿಕೊಳ್ಳದೆ ಅರ್ಧಕ್ಕೆ ಬಿಟ್ಟಿದ್ದಾನೆ. ಆತನಿಗೆ ₹5 ಲಕ್ಷ ಪರಿಹಾರ ಹಣವನ್ನು ಈ ದಿನವೇ ಕೊಡಬೇಕು. ಉಳಿದ ₹15 ಲಕ್ಷ ಹಣವನ್ನು ತ್ವರಿತವಾಗಿ ಮೃತರ ಕುಟುಂಬಕ್ಕೆ ಕೊಡಬೇಕು. ಎರಡು ಎಕರೆ ಭೂಮಿಯನ್ನು ಸಾಗುವಳಿ ಮಾಡಿ ಅರ್ಜಿ ಹಾಕಿದ್ದಾನೆ. ಹಾಗಾಗಿ, ಆತನ ಸಾಗುವಳಿ ಅರ್ಜಿಯನ್ನು ಪರಿಗಣಿಸಿ ಭೂಮಿ ಮಂಜೂರು ಮಾಡಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎನ್. ದಿಲೀಪ್, ದಿಶಾ ಕಮಿಟಿ ಮಾಜಿ ಸದಸ್ಯ ಏಳಗಳ್ಳಿ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಾತನೂರು ನಾಗರಾಜು, ಕೆ.ಆರ್. ಮಧು ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-14-1305066840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.