ಕನಕಪುರ: ಕಸಬಾ ಹೋಬಳಿ ಚೌಕಸಂದ್ರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಕೃಷಿ ಸಿಂಚಾಯಿ ಯೋಜನೆ ಅಡಿ ಕಾಮಗಾರಿ ಮಾಡದೆ ಇಲಾಖೆಯಿಂದ ಹಣ ಪಡೆದು ವಂಚಿಸಲಾಗಿದೆ.

ಚೌಕಸಂದ್ರ ಗ್ರಾಮದ ಸುಕ್ರುನಾಯಕ್ ಅವರ ಜಮೀನಿನಲ್ಲಿ ಹನಿ ನೀರಾವರಿ ಮಾಡದೆ ಯೋಜನೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸುಕ್ರುನಾಯಕ ಅವರ ಮಗ ಗೋವಿಂದಸ್ವಾಮಿ ನಾಯಕ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಗೋವಿಂದಸ್ವಾಮಿ ದೂರಿನ ಮೇರೆಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಮೇ 13ರ ಬುಧವಾರ ಚೌಕಸಂದ್ರ ಗ್ರಾಮದ ಶುಕ್ರುನಾಯಕ ಅವರ ಜಮೀನಿಗೆ ಭೇಟಿ ನೀಡಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ವರದಿ ಸಲ್ಲಿಸಿ ಯೋಜನೆ ಹಣ ಪಡೆದಿದ್ದ ಟೆಂಡರ್ದಾರರು ತರಾತುರಿಯಲ್ಲಿ ಸೋಮವಾರ ಮತ್ತು ಮಂಗಳವಾರ ಶುಕ್ರುನಾಯಕ ಅವರ ಜಮೀನಿನಲ್ಲಿ ಪೈಪ್ಲೈನ್ ಮತ್ತು ಡ್ರಿಪ್ ಲೈನಿಂಗ್ ಮಾಡುತ್ತಿದ್ದು, ದೂರುದಾರ ಗೋವಿಂದಸ್ವಾಮಿ ನಾಯಕ ಪೈಪ್ ಲೈನಿಂಗ್ ಮಾಡದಂತೆ ತಡೆ ಮಾಡಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೂಕ್ಷ್ಮ ನೀರಾವರಿ ಯೋಜನೆ ಅಡಿ ರೈತರ ಜಮೀನಿಗೆ ಹನಿ ನೀರಾವರಿ ಮಾಡಲು ರೈತರಿಂದ ಅರ್ಜಿ ಪಡೆದು ರೈತರಿಂದ ಹಣಕಟ್ಟಿಸಿ ನಂತರದಲ್ಲಿ ಯೋಜನೆ ಅನುಷ್ಠಾನಗೊಳಿಸಿ ಸರ್ಕಾರದಿಂದ ಹಣ ಪಡೆಯಬೇಕಿರುತ್ತದೆ.

ಆದರೆ ಗೋಪಾಲಸ್ವಾಮಿ ನಾಯಕ ಅವರ ಕುಟುಂಬಕ್ಕೆ ಬಂದಿದ್ದ 12 ಎಕರೆ ಜಮೀನಿನಲ್ಲಿ ಒಂದು ವರ್ಷದ ಹಿಂದೆಯೇ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಕಾಮಗಾರಿ ಮಾಡದೆಯೇ ಹಣ ಪಡೆಯಲಾಗಿದೆ.

‘ಅಣ್ಣನ ಮಗ ಶಿವಣ್ಣ ನಾಯಕ್ ತೋಟಗಾರಿಕೆ ಇಲಾಖೆಯಲ್ಲಿ ನೌಕರರಾಗಿದ್ದು, ತಮ್ಮ ಕುಟುಂಬದ ಒಟ್ಟು ಆಸ್ತಿಗೆ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಇಲಾಖೆಯಿಂದ ಸವಲತ್ತು ಪಡೆದಿದ್ದಾರೆ. ಅಲ್ಲದೆ ಹನಿ ನೀರಾವರಿ ಯೋಜನೆಯಲ್ಲಿ ಯೋಜನೆ ಅನುಷ್ಠಾನಗೊಳಿಸದೆ ಗಮನಕ್ಕೂ ತರದೆ ನಕಲಿ ಸಹಿ ಮಾಡಿ ಇಲಾಖೆಯಿಂದ ಡೀಲರ್ಗೆ ಹಣ ಬಿಡುಗಡೆ ಮಾಡಿಸಿ ಅವರಿಂದ ಹಣ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಗೋವಿಂದಸ್ವಾಮಿ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.

‘ನಮ್ಮ ಶೇರು ಹಣ ಪಡೆಯದೆ ಯೋಜನೆ ಅನುಷ್ಠಾನಗೊಳಿಸಿದಾಗ ನಮ್ಮ ಮೊಬೈಲ್ಗೆ ಮೆಸೇಜ್ ಬಂದಾಗ ಅಕ್ರಮ ಬೆಳಕಿಗೆ ಬಂದಿದೆ. ಇಲಾಖೆ ಅಧಿಕಾರಿಗಳು ಮತ್ತು ಡೀಲರ್ ಶಾಮಿಲಾಗಿ ಯೋಜನೆ ದುರ್ಬಳಕೆ ಮಾಡಿಕೊಂಡಿದ್ದಾರೆ. ತನಿಖೆ ನಡೆಸಲು ಅಧಿಕಾರಿಗಳು ಭೇಟಿ ನೀಡುತ್ತಿರುವ ಮಾಹಿತಿ ತಿಳಿದು ಈಗ ಡ್ರಿಪ್ ಲೈನ್ ಮತ್ತು ಪೈಪ್ಲೈನ್ ಅಳವಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-14-2122782732

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.