ರಾಮನಗರ (ಕನಕಪುರ): ತಾಲ್ಲೂಕಿನ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಉಳುವವನೇ ಭೂಮಿ ಒಡೆಯ ಕಾಯ್ದೆಯಡಿ ಮಂಜೂರಾಗಿದ್ದ ಗೇಣಿ ಭೂಮಿಯ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ, ಗೇಣಿದಾರರು ಸ್ವಾಧೀನದಲ್ಲಿದ್ದ 4 ಎಕರೆ ಭೂಮಿಗೆ ಪ್ರಭಾವಿಗಳು ಜೆಸಿಬಿ ತಂದು ಜಮೀನಿನಲ್ಲಿದ್ದ ಬೆಳೆಗಳನ್ನು ನಾಶಪಡಿಸಿ ದರ್ಪ ಮೆರೆದಿದ್ದಾರೆ. ಪೊಲೀಸರ ಭದ್ರತೆಯಲ್ಲೇ ಇಂತಹದ್ದೊಂದು ಕೃತ್ಯ ಇತ್ತೀಚೆಗೆ ನಡೆದಿದೆ!

ಗ್ರಾಮದ ತಿಮ್ಮಮ್ಮ ಮೋಟೆಗೌಡ, ಭಾಗ್ಯಮ್ಮ ಶಿವಸಿದ್ದೇಗೌಡ ಹಾಗೂ ಶಿವಮ್ಮ ಶಿವಮಾದೇಗೌಡ ಎಂಬುವರು ಅನುಭವದಲ್ಲಿದ್ದು ಕೃಷಿ ಚಟುವಟಿಕೆ ಮಾಡುತ್ತಿದ್ದರು. ಕಾಯ್ದೆಯಡಿ ಅವರಿಗೆ ಭೂಮಿ ಬಂದಿದ್ದು, ಅದಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್ನಲ್ಲಿದೆ. ಇದರ ಮಧ್ಯೆಯೇ ರಾಜಕೀಯವಾಗಿ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಯದುನಂದನ್ ಮತ್ತು ಕೆ.ಟಿ. ಸುರೇಶ್ ಎಂಬುವರು ಜೆಸಿಬಿ ಹಾಗೂ ಒಂದಿಷ್ಟು ಯುವಕರೊಂದಿಗೆ ಸ್ಥಳಕ್ಕೆ ಬಂದು ಜಮೀನಿನಲ್ಲಿದ್ದ ತೆಂಗಿನಮರ, ಸೀಮೆಹುಲ್ಲು ಹಾಗೂ ರೇಷ್ಮೆಕಡ್ಡಿಗಳನ್ನು ನಾಶಪಡಿಸಿದ್ದಾರೆ ಎಂದು ಗೇಣಿದಾರರು ಅಳಲು ತೋಡಿಕೊಂಡರು.

ಭೂ ಮಾಲೀಕರಾದ ಅಚ್ಚಲು ಗ್ರಾಮದ ನವಾವ್ ಜಾನ್ ಎಂಬುವರ ಒಡೆತನದಲ್ಲಿದ್ದ ಹೊಂಗಾಣಿದೊಡ್ಡಿಯ ಸುಮಾರು 140 ಎಕರೆ ಜಮೀನನ್ನು ಹೊಂಗಾಣಿದೊಡ್ಡಿ 31 ಕುಟುಂಬಗಳು ಸಾಗುವಳಿ ಮಾಡುತ್ತಿದ್ದವು. ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ಬಂದಾಗ, ಕಾಯ್ದೆಯಡಿ ಸಾಗುವಳಿ ಮಾಡುವವರು ಗೇಣಿ ಅರ್ಜಿ ಹಾಕಿದ್ದು, ಅದರಲ್ಲಿ ಐದು ಮಂದಿಗೆ ಮಾತ್ರ ಮಂಜೂರಾಗಿತ್ತು.

ಉಳಿದ 26 ಕುಟುಂಬಗಳಲ್ಲಿ 7 ಮಂದಿಯನ್ನು ಹೊರತುಪಡಿಸಿ 19 ಮಂದಿ ಅನುಭವದ ಆಧಾರದ ಮೇಲೆ ಗೇಣಿ ಮಂಜೂರು ಮಾಡುವಂತೆ ಹೈಕೋರ್ಟ್ ಹೋಗಿದ್ದಾರೆ. ಕೋರ್ಟ್ ಹಳೆ ಆದೇಶ ರದ್ದುಪಡಿಸಿ ಹೊಸ ಆದೇಶ ಮಾಡಿ, ಕನಕಪುರದ ಭೂ ನ್ಯಾಯ ಮಂಡಳಿಯಲ್ಲಿ ಪರಿಹರಿಸಿಕೊಳ್ಳುವಂತೆ ಪ್ರಕರಣವನ್ನು ವರ್ಗಾವಣೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಇತ್ಯರ್ಥವಾಗದೆ ಬಾಕಿ ಇರುವಾಗಲೇ 2024–25ರಲ್ಲಿ ಮೂಲ ಜಮೀನ್ದಾರರು ಫೌತಿ ಆಗಿ ಅವರ ಮಕ್ಕಳಿಗೆ ಫೌತಿ ಖಾತೆ ಮಾಡಿಕೊಡಲಾಗಿದೆ. ಅದರ ಆಧಾರದ ‘ಮೇಲೆ ನವಾಬ್ ಜಾನ್ ಮಕ್ಕಳು ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದು, ಈಗಾಗಲೇ ಹೊಂಗಾಣಿದೊಡ್ಡಿಯಲ್ಲಿರುವ ಜಾಗ ಸೇರಿದಂತೆ 60 ಎಕರೆ ಜಮೀನನ್ನು ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ಕ್ರಯವಾಗಿ ಖಾತೆಯೂ ಆಗಿದೆ ಎಂದು ಮೂಲಗಳು ಹೇಳಿವೆ.

ಹುಸೇನ್ ಅವರ ಹೆಸರಿಗೆ ಖಾತೆ ಬರುತ್ತಿದ್ದಂತೆ, ಹುಸೇನ್ ತಮ್ಮ ಬೆಂಬಲಿಗರು ಮತ್ತು ಪೊಲೀಸರ ಸಹಕಾರದೊಂದಿಗೆ ಅನುಭವದಲ್ಲಿದ್ದ ಗೇಣಿ ಅರ್ಜಿದಾರರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಗೇಣಿದಾರರು ಜಮೀನಿನಲ್ಲಿ ಬೆಳೆದಿರುವ ಬೆಳೆಗಗಳು ಹಾಗೂ ಕೃಷಿ ಪಂಪ್ಸೆಟ್ಗಳನ್ನು ನಾಶಗೊಳಿಸಿ ಜಮೀನು ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು.

ಕೊಲೆ ನಡೆದಿತ್ತು: ಗ್ರಾಮದಲ್ಲಿ ತಲೆದೋರಿರುವ ಜಮೀನು ವ್ಯಾಜ್ಯದ ವಿಚಾರವಾಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜೇಗೌಡ ಎಂಬುವರ ಕೊಲೆ ನಡೆದಿತ್ತು. ಆಗ ಗೇಣಿ ಅರ್ಜಿ ಹಾಕಿ ಹೈಕೋರ್ಟ್ನಲ್ಲಿ ಹೋರಾಟ ಮಾಡುತ್ತಿದ್ದಂತಹ 9 ಕುಟುಂಬದವರನ್ನು ಪೊಲೀಸರು ಸುರಕ್ಷತೆ ಕಾರಣ ಹೇಳಿ ಗ್ರಾಮದಿಂದ ಹೊರಕ್ಕೆ ಕಳಿಸಿ ದ್ದರು. ಆದರೆ, ಈವರೆಗೂ ಮತ್ತೆ ಆ ಗ್ರಾಮಕ್ಕೆ ಅವರನ್ನು ಕರೆದುಕೊಂಡು ಹೋಗಿಲ್ಲ ಎಂದು ಸಂತ್ರಸ್ತರು ದೂರಿದರು.

ಊರು ಬಿಟ್ಟ ಕುಟುಂಬದವರ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಅವರ ಮನೆಗಳಲ್ಲಿದ್ದ ಜಾನುವಾರುಗಳನ್ನು ಹೇಳುವವರು ಕೇಳುವವರಿಲ್ಲವಾಗಿದೆ. ಕೆಲವು ಸತ್ತು ಹೋಗಿವೆ. ನಮ್ಮನ್ನು ಮತ್ತೆ ಗ್ರಾಮಕ್ಕೆ ಕರೆದುಕೊಂಡು ಹೋಗಿ ಶಾಂತಿ ಸಭೆ ನಡೆಸಿ, ನಮಗೆ ಅಲ್ಲಿ ವಾಸ ಮಾಡಲು ರಕ್ಷಣೆ ಕೊಡಬೇಕೆಂದು ಕೇಳಿದರೂ ಸ್ಪಂದಿಸುತ್ತಿಲ್ಲ. ನೀವೇ ಗ್ರಾಮಕ್ಕೆ ಹೋಗಿ ಎಂದು ಹೇಳುತ್ತಾರೆ. ಯಾರು ಗಲಾಟೆ ಮಾಡಿಕೊಳ್ಳುತ್ತಾರೆ ಅವರ ವಿರುದ್ಧ ನಾವು ಕೇಸು ದಾಖಲಿಸುತ್ತೇವೆ ಎಂದು ಬೆದರಿಸುತ್ತಾರೆ. ಹಾಗಾಗಿ, ನಾವು ಗ್ರಾಮಕ್ಕೆ ಹೋಗಲಿಲ್ಲ ಎಂದು ಊರು ಬಿಟ್ಟಿರುವ ಕೆಲವರು ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-14-2023487842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.