ಕನಕಪುರ: ನಗರದ ಎಂ.ಜಿ ರಸ್ತೆಯಲ್ಲಿ ಇತ್ತೀಚೆಗೆ ಹೊಸದಾಗಿ ವೈಟ್ ಟಾಪಿಂಗ್ ಮಾಡಿದ್ದು ಮ್ಯಾನ್ಹೋಲ್ ಚೇಂಬರ್ಗಳನ್ನು ಸರಿಯಾಗಿ ನಿರ್ಮಿಸದ ಕಾರಣ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಕಾಮನ ಗುಡಿ ಮುಂಭಾಗ ಮತ್ತು ವಾಣಿ ಟಾಕೀಸ್ ಹಳೆ ಗೋಡಾನ್ ರಸ್ತೆ ತಿರುವಿನಲ್ಲಿ ಚೇಂಬರ್ ಸರಿಯಾಗಿ ನಿರ್ಮಿಸಿಲ್ಲ. ದೊಡ್ಡ ಪ್ರಮಾಣದ ಗುಂಡಿಗಳಿದ್ದು ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ವಾಹನ ಸವಾರರು ರಾತ್ರಿ ವೇಳೆ ಗೊತ್ತಾಗದೆ ಬ್ಯಾರಿಕೇಡ್ ದಾಟಿ ಗುಂಡಿಯಲ್ಲಿ ಬಿದ್ದು ಅಪಘಾತಗಳಾಗಿವೆ.

ಕೋಟಿಗಟ್ಟಲೆ ಖರ್ಚು ಮಾಡಿ ಹೊಸದಾಗಿ ವೈಟ್ ಟಾಪಿಂಗ್ ಮಾಡಿದ್ದರೂ ವೈಜ್ಞಾನಿಕವಾಗಿ ಮ್ಯಾನ್ ಹೋಲ್ ನಿರ್ಮಾಣ ಏಕೆ ಮಾಡಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ನಗರಸಭೆಯವರು ಈ ಕೂಡಲೇ ಮ್ಯಾನ್ಹೋಲ್ ಸರಿಪಡಿಸಿ ಅಪಘಾತ ತಡೆಗಟ್ಟಬೇಕು ಎಂದು ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-14-63267179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.