ರಾಮನಗರ: ‘ಕರ್ನಾಟಕದ ನಿಜವಾದ ಶಿಲ್ಪಿಯಾದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕಡು ಪ್ರಾಮಾಣಿಕರಾಗಿದ್ದರು. ಮಾದರಿ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿದ ಮುತ್ಸದ್ದಿ ರಾಜಕಾರಣಿಯಾಗಿದ್ದರು’ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಬಣ್ಣಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗವು ಭಾನುವಾರ ಹಮ್ಮಿಕೊಂಡಿದ್ದ ‘ಕೆಂಗಲ್ ಹನುಮಂಗಯ್ಯ ನೆನಪು’ ಕಾರ್ಯಕ್ರಮ ಉದ್ಘಾಟಿಸಿ, ಕೆಂಗಲ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

‘ಕೇಂದ್ರ ರೈಲ್ವೆ ಸಚಿವರಾಗಿದ್ದ ಕೆಂಗಲ್ ಅವರಿಗೆ ಇಂದಿರಾ ಗಾಂಧಿ ಪಕ್ಷಕ್ಕೆ ಹಣ ಸಂಗ್ರಹಿಸುವಂತೆ ಸೂಚಿಸುತ್ತಾರೆ. ಅದಕ್ಕೆ ಕೆಂಗಲ್, ಬೇರೆಯವರಿಂದ ಹಣ ಸಂಗ್ರಹಿಸಿದರೆ ಆಡಳಿತದಲ್ಲಿ ಬಿಗಿ ಹೋಗುತ್ತದೆ ಎಂದಿದ್ದರು. ಆ ಬೆಳವಣಿಗೆ ಬೆನ್ನಲ್ಲೇ ಅವರು ಸಚಿವ ಸ್ಥಾನ ಕಳೆದುಕೊಂಡರು. ನಂತರ, ರಾಜ್ಯಪಾಲ ಸೇರಿದಂತೆ ಇತರ ಹುದ್ದೆಗಳು ಹುಡುಕಿಕೊಂಡು ಬಂದರೂ ತಿರಸ್ಕರಿಸಿ ಸ್ವಾಭಿಮಾನ ಮೆರೆದಿದ್ದರು’ ಎಂದು ನೆನೆದರು.

‘1972ರಲ್ಲಿ ನನಗೆ ರಾಮನಗರದಿಂದ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕೆಂಗಲ್ ಮುಂದಾಗಿದ್ದರು. ಆದರೆ, 1978ರ ಹೊತ್ತಿಗೆ ಕಾಂಗ್ರೆಸ್ ತೊರೆದು ಸ್ವರಾಜ್ಯ ಪಕ್ಷ ಸ್ಥಾಪಿಸಿದ್ದ ಅವರ ಮತ್ತು ನನ್ನ ನಡುವೆ, ರಾಮನಗರದಲ್ಲಿ ಸ್ಪರ್ಧೆ ವಿಷಯಕ್ಕೆ ಬಿರುಕುಂಟಾಯಿತು. ಕಾಂಗ್ರೆಸ್ ಕಟ್ಟಾಳಾಗಿದ್ದ ನಾನು ಅವರನ್ನು ಬೆಂಬಲಿಸಲಿಲ್ಲವೆಂಬ ಕೋಪ ಅವರಿಗಿತ್ತು’ ಎಂದು ನೆನೆದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಕೆಂಗಲ್ ಹನುಮಂತಯ್ಯ ಅವರು ಸ್ವಾಭಿಮಾನದ ರಾಜಕಾರಣಕ್ಕೆ ಹೆಸರಾಗಿದ್ದರು. ಅವರ ಹಾದಿಯಲ್ಲೇ ರಾಜಕಾರಣ ಮಾಡಿ ಆದರ್ಶದ ಹಾದಿ ತೋರಿದವರು ಸಿ.ಎಂ. ಲಿಂಗಪ್ಪ. ಅವರ ಕೊಡುಗೆ ನೆನೆಯದಿದ್ದರೆ ಆತ್ಮವಂಚನೆಯಾಗುತ್ತದೆ. ಕೆಂಗಲ್ ಸ್ಮಾರಕ ಜೀರ್ಣೋದ್ದಾರ ಮಾಡುವಂತೆ ಸಿ.ಎಂ ಗಮನಕ್ಕೆ ತರಲಾಗುವುದು’ ಎಂದರು. ರೈತ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, ‘ಈ ಕಾರ್ಯಕ್ರಮವು ವಿಧಾನಸೌಧದ ಹಿಂಭಾಗ ಇರುವ ಕೆಂಗಲ್ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗಕ್ಕೆ ಸ್ಥಳಾಂತರ ಮಾಡುವ ಹೋರಾಟಕ್ಕೆ ಮುನ್ನುಡಿ ಬರೆಯಬೇಕು’ ಎಂದು ಹೇಳಿದರು.

ರೈತ ಮುಖಂಡ ಸಿ. ಪುಟ್ಟಸ್ವಾಮಿ, ಬಮುಲ್ ನಿರ್ದೇಶಕ ಪಿ. ನಾಗರಾಜ್, ಸಾವಕಾರ್ ಅಮ್ಜದ್ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ಹಳೆ ಬಸ್ ನಿಲ್ದಾಣದ ಬಳಿ ಸೌಂದರ್ಯೀಕರಣಗೊಂಡಿರುವ ಕೆಂಗಲ್ ಪ್ರತಿಮೆಯನ್ನು ಲಿಂಗಪ್ಪ ಸೇರಿದಂತೆ ಗಣ್ಯರು ಅನಾವರಣಗೊಳಿಸಿ, ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಬಮೂಲ್ ನಿರ್ದೇಶಕ ಪಿ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಗರಸಭೆ ಸದಸ್ಯರು, ವಿವಿಧ ಸಂಘ, ಸಂಸ್ಥೆ, ಸಮುದಾಯ, ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಮುಖಂಡರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಇದ್ದರು. ಆರ್. ನಾಗರಾಜು ನಿರೂಪಣೆ ಮಾಡಿದರು. ನಮ್ಮವರು ಬಳಗದ ಡಾ. ಎಚ್.ಡಿ. ಉಮಾಶಂಕರ್, ಡಾ. ಅಂಕನಹಳ್ಳಿ ಪಾರ್ಥ, ಕುಂಬಾಪುರ ಬಾಬು, ಪದ್ಮರೇಖಾ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260316-14-920784530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.