ರಾಮನಗರ: ಯುಗಾದಿ ಹಬ್ಬ, ಮಾವು ಫಸಲು ಕುಸಿತ ಹಾಗೂ ಮಳೆ ಕೊರತೆಯ ಆತಂಕದಲ್ಲಿರುವ ರೈತರಿಗೆ ನೆರವಾಗುವುದಕ್ಕಾಗಿ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ₹1 ಪ್ರೋತ್ಸಾಹಧನವನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಪವಿತ್ರ ಎಸ್. ಮಹೇಶ್ ಹೇಳಿದರು.

‘ರೈತರಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳೇ ಆರ್ಥಿಕವಾಗಿ ಪ್ರಗತಿಗೆ ಆಸರೆಯಾಗಿವೆ. ಈ ವರ್ಷ ಮಾವು ಫಸಲು ಕೂಡ ಬಂದಿಲ್ಲ. ಇದರಿಂದರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹೈನುಗಾರಿಕೆಗೂ ಮಳೆ ಅಭಾವದಿಂದ ಹಸಿರು ಮೇವು, ಜಾನುವಾರು ಫೀಡ್ ಮೇವಿನ ಬೆಲೆ ದುಪ್ಪಟ್ಟಾಗಿದೆ’ ಎಂದು ತಾಲ್ಲೂಕಿನ ಅಂಕನಹಳ್ಲಿಯಲ್ಲಿರುವ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಒಂದು ಕಂತೆ ಮೇವಿನ ದರ ₹300 ತಲುಪಿದೆ. ಸಂಘ ಪ್ರತಿ ವರ್ಷ ಸುಮಾರು ₹15 ಲಕ್ಷದವರೆಗೆ ಲಾಭ ಗಳಿಸುತ್ತಾ ಬಂದಿದೆ. ಲಾಭದಲ್ಲಿ ಪ್ರತಿ ವರ್ಷ ಬೋನಸ್ವಿತರಿಸಲಗುತ್ತಿದೆ. ಈ ವರ್ಷ ವಿಶೇಷವಾಗಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಪ್ರೇರಣೆಯಿಂದ ಸಂಘಕ್ಕೆ 167 ಹಾಲು ಉತ್ಪಾದಕ ರೈತರು 9.78 ಲಕ್ಷ ಲೀಟರ್ ಹಾಲು ಸರಬರಾಜು ಮಾಡಿದ್ದಾರೆ. ಅವರಿಗೆ ಹಬ್ಬದ ವಿಶೇಷವಾಗಿ ಸಂಘದ ಲಾಭದ ಹಣದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.

‘ಪ್ರೋತ್ಸಾಹಧನನ್ನು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ ಸಂಘದ ಮೂವರು ಸಿಬ್ಬಂದಿ ತಲಾ ₹5 ಸಾವಿರದಂತೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರಿಗೆ ಹೆಚ್ಚುವರಿ ಪ್ರೋತ್ಸಾಹಧನದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸಂಘ ಬಿಡಿಸಿಸಿ ಬ್ಯಾಂಕ್ ಮತ್ತು ಇತರೆ ಕಡೆ ಸುಮಾರು ₹50 ಲಕ್ಷದಷ್ಟು ಹಣ ಇರಿಸಿದೆ. ಸಂಘ ಲಾಭದಾಯಕವಾಗಿ ಮನ್ನಡೆಯುತ್ತಿರುವ ಕಾರಣ ಆಡಳಿತ ಮಂಡಳಿಒಪ್ಪಿಗೆಯಂತೆ ಹಾಲು ಉತ್ಪಾದಕರ ರೈತರಿಗೆ ಈ ಒಂದು ಸಮಯದಲ್ಲಿ ನೆರವು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಡಿ. ನಾಗರಾಜು, ನಿರ್ದೇಶಕರಾದ ಬಿ. ಚಂದ್ರು, ಎ. ಗೋಪಿ, ಕೆ. ಶಿವರಾಮು, ಕೆ. ರಮೇಶ್, ಎಲ್. ರಾಮಯ್ಯ, ಪಿ. ರಮೇಶ್, ಕಾರ್ಯದರ್ಶಿ ಜಿ. ಯೋಗಾನಂದ, ಹಾಲು ಪರೀಕ್ಷಕ ಕೆಂಪೇಗೌಡ, ಎಸ್. ಪ್ರಸಾದ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-15-1262090495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.